For Quick Alerts
  ALLOW NOTIFICATIONS  
  For Daily Alerts

  ಕೆಲವೇ ದಿನಗಳಲ್ಲಿ ಅಮ್ಮನಾಗಲಿರುವ ತಾರೆ ಶಿಲ್ಪಾ ಶೆಟ್ಟಿ

  By Rajendra
  |

  ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಈಗ ತುಂಬು ಗರ್ಭಿಣಿ. ಇನ್ನೇನು ಕೆಲವೇ ದಿನಗಳಲ್ಲಿ ಆಕೆ ಅಮ್ಮನಾಗಿ ಬಡ್ತಿ ಪಡೆಯಲಿದ್ದಾರೆ ಎಂದು ಶಿಲ್ಪಾ ಕುಟುಂಬ ಮೂಲಗಳು ಸುಳಿವು ಬಿಟ್ಟುಕೊಟ್ಟಿವೆ. ಇತ್ತೀಚೆಗೆ ಶಿಲ್ಪಾ ಸಾರ್ವಜನಿಕ ಸಭೆ ಸಮಾರಂಭಗಳಿಂದ ದೂರ ಉಳಿದಿದ್ದರು.

  ಇತ್ತೀಚೆಗೆ ವಿಲಾಸ್ ರಾವ್ ದೇಶ್‌ಮುಖ್ ಅವರ ಪುತ್ರ ಧೀರಜ್ ದೇಶ್‌ಮುಖ್ ಅವರ ಮದುವೆ ಪೂರ್ವದ ಸಮಾರಂಭದಲ್ಲಿ ಭಾಗವಹಿಸಿ ಗಮನಸೆಳೆದಿದ್ದರು. ಇತ್ತೀಚೆಗಷ್ಟೆ ಜೆನಿಲಿಯಾ ಡಿಸೋಜಾ ಕೈಹಿಡಿದ ರಿತೇಶ್ ದೇಶ್‌ಮುಖ್ ಸಹೋದರ ಧೀರಜ್.

  ತುಂಬು ಗರ್ಭಿಣಿಯಾದ ಕಾರಣ ನಡೆಯಲು ಶಿಲ್ಪಾ ತುಂಬ ಪ್ರಯಾಸ ಪಡುತ್ತಿದ್ದರು. ತಮ್ಮ ಧರ್ಮಪತಿ ರಾಜ್ ಕುಂದ್ರಾ ಅವರ ಹೆಗಲನ್ನು ಆಸರೆಯಾಗಿ ಹಿಡಿದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಸಡಿಲವಾದ, ಗರ್ಭಿಣಿ ಸ್ತ್ರೀಯರಿಗೆ ಆರಾಮದಾಯವಾದ ಅನಾರ್ಕಲಿ ದಿರಿಸಿನಲ್ಲಿ ಶಿಲ್ಪಾ ಬಂದಿದ್ದು ವಿಶೇಷವಾಗಿತ್ತು. (ಏಜೆನ್ಸೀಸ್)

  English summary
  Bollywood actress Shilpa Shetty’s due date is drawing closer and she restricted her public appearances. Shilpa made an entry to the venue holding her beau Raj Kundra’s hand and she looked stunning in an anarkali suit designed by ace designer Manish Malhotra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X