ವಿದ್ಯಾ ಬಾಲನ್‌ಗೆ ತಡೆದುಕೊಳ್ಳಲಾಗದ ಅಸಾಧ್ಯ ಬಯಕೆ!
ಬಾಲಿವುಡ್ ಹಾಟ್ ಬಾಂಬ್ ವಿದ್ಯಾ ಬಾಲನ್‌ಗೆ ಬಯಕೆಗಳನ್ನು ತಡೆದುಕೊಳ್ಳಲಾಗುತ್ತಿಲ್ಲವಂತೆ. ಆದಷ್ಟು ಬೇಗ ಸೂಕ್ತ ವರನನ್ನು ನೋಡಿ ಮದುವೆ ಮಾಡಿಕೊಂಡು ಫಸ್ಟ್‌ನೈಟ್ ಆಚರಿಸಿಕೊಳ್ಳುವ ಯೋಚನೆಯಲ್ಲಿದ್ದಾರೆ. ಇತ್ತೀಚೆಗೆ ಅವರೇ ತಮ್ಮ ಮನದಾಳದ ಬಯಕೆಯನ್ನು ಹೊರಹಾಕಿದ್ದಾರೆ.
ತನ್ನ ತಾಜಾ ಚಿತ್ರ 'ದಿ ಡರ್ಟಿ ಪಿಕ್ಚರ್' ಪ್ರಚಾರದ ಭಾಗವಾಗಿ ದೇಶದ ವಿವಿಧ ನಗರಗಳಲ್ಲಿ ಸಂಚರಿಸುತ್ತಿದ್ದಾರೆ. ಇತ್ತೀಚೆಗೆ ಅಹಮದಾಬಾದ್‌ಗೂ ಭೇಟಿ ನೀಡಿದ್ದರು. ಮಾಧ್ಯಮ ಪ್ರತಿನಿಧಿಗಳು ಅದೂ ಇದೂ ಪ್ರಶ್ನೆಗಳನ್ನು ಕೇಳುತ್ತಾ ಇದ್ದರೆ, ಸಡನ್ನಾಗಿ ಮದುವೆ ಬಗ್ಗೆ ವಿದ್ಯಾ ಪ್ರಸ್ತಾಪಿಸಿದರು.
"ನಾನು ಶೀಘ್ರದಲ್ಲೆ ಮದುವೆಯಾಗಬೇಕೆಂದಿದ್ದೇನೆ. ಆ ವರಮಹಾಶಯ ಯಾರು ಎಂಬುದು ಮಾತ್ರ ಸಸ್ಪೆನ್ಸ್. ಸಮಯ ಬಂದಾಗ ನಾನೇ ಹೇಳುತ್ತೇನೆ. ಹೀಗೆ ವಿದ್ಯಾ ತನ್ನ ಮದುವೆ ಬಗ್ಗೆ ಓತಪ್ರೋತವಾಗಿ ಹೇಳುತ್ತಿದ್ದರೆ, ಮಾಧ್ಯಮ ಪ್ರತಿನಿಧಿಗಳು ಕ್ಷಣಕಾಲ ಮೂಕವಿಸ್ಮಿತರಾಗಿದ್ದರು.
ವಿದ್ಯಾ ಬಾಲನ್ ಹಾಗೂ ಸಿದ್ಧಾರ್ಥ್ ರಾಯ್ ಕಪೂರ್ ನಡುವಿನ ಪ್ರೇಮ ಪುರಾಣ ಹಳೆಯದೆ. ಆತನನ್ನೇ ವಿದ್ಯಾ ಕೈಹಿಡಿಯಲಿದ್ದಾರಾ? ಎಂಬ ಪ್ರಶ್ನೆ ಬಾಲಿವುಡ್‌ನಲ್ಲಿ ಭೂತಾಕಾರವಾಗಿ ತಲೆಯೆತ್ತಿದೆ. ಅಂದಹಾಗೆ ವಿದ್ಯಾ ಅಭಿನಯದ 'ದಿ ಡರ್ಟಿ ಪಿಕ್ಚರ್' ಮಾತ್ರ ಸಿಲ್ಕ್ ಸ್ಮಿತಾ ಹುಟ್ಟುಹಬ್ಬ ಡಿಸೆಂಬರ್ 2ರಂದು ತೆರೆಕಾಣುತ್ತಿದೆ. (ಏಜೆನ್ಸೀಸ್)


Click it and Unblock the Notifications











