ಐಶ್ವರ್ಯಾ ರೈ ಬೇಬಿಗೆ ಹೆಸರಿಡಲು ಹೆಲ್ಪ್ ಮಾಡಿ

ಅಮಿತಾಬ್ ಬಚ್ಚನ್ ಮೊಮ್ಮಗಳು, ಮಾಜಿ ವಿಶ್ವಸುಂದರಿ ಮಗಳು, ಐಶೂ-ಅಭಿ ಮಗಳು ಎಂದೆಲ್ಲಾ ಕರೆಯಲ್ಪಡುತ್ತಿರುವ ಈ ನವಜಾತ ಹೆಣ್ಣುಮಗುವಿಗೆ ಹೆಸರು ಹುಡುಕುವುದರಲ್ಲಿ ಬಚ್ಚನ್ ಪರಿವಾರ ಸೋತು ಹೋಗಿದೆ. ಹೆಸರಿಗಾಗಿ ಸಾಕಷ್ಟು ದಿನದ ಹಿಂದೆಯೇ ಮಗುವಿನ ಅಪ್ಪ ಅಭಿಷೇಕ್ ಟ್ವೀಟ್ ಮಾಡಿ ಹೆಸರನ್ನು ಆಹ್ವಾನಿಸಿದ್ದರು. ಆದರೆ ಆಕರ್ಷಕ ಹಾಗೂ ಇಷ್ಟವಾದ ಹೆಸರನ್ನು 'ಫೈನಲ್' ಆಗಿ ನಿರ್ಧರಿಸಲು ಸಾಧ್ಯವಾಗಿಲ್ಲವಂತೆ.

ಈಗ ನೀವು ಹೆಸರು ಹುಡುಕುವ ಕೆಲಸವನ್ನು ಮುಂದುವರಿಸಬಹುದು. ಇನ್ನೂ ಅವಕಾಶ ಇದೆ, ಪ್ರಯತ್ನಿಸಿ. ಏಕೆಂದರೆ ಈ ವಿಶ್ವಸುಂದರಿಯ ಮಗು ಅವರಂತೆ ಇದೆ ಎಂಬ ವಿಷಯ ದೃಢಪಟ್ಟಿದೆ. ಸುರಸುಂದರಿಗೆ ಹೆಸರು ಇಡುವ ಅವಕಾಶವನ್ನು ನೀವೇಕೆ ಮಿಸ್ ಮಾಡಿಕೊಳ್ಳುತ್ತೀರಿ? ಭವಿಷ್ಯದ 'ಮಿಸ್ ವರ್ಲ್ಡ್' ಆಗಬಹುದು ಈ ಬೇಟಿ.

"ಈಗಾಗಲೇ ಬಂದಿರುವ ಹೆಸರು ಕಳಿಸಿದವರಿಗೆ 'ಥ್ಯಾಂಕ್ಸ್.' ಸದ್ಯದಲ್ಲಿಯೇ ಹೆಸರನ್ನು ನಿರ್ಧರಿಸಿ ಟ್ವೀಟ್ ಮಾಡುತ್ತೇವೆ" ಎಂದಿದ್ದಾರೆ, ಬಿಗ್ ಬಿ. ನೀವೂ ಕಳಿಸಿದವರಾಗಿದ್ದರೆ ಅಮಿತಾಬ್ ಅಭಿನಂದನೆ ಸ್ವೀಕರಿಸಿ. ನಿಮ್ಮ ಹೆಸರನ್ನೇ ಇಟ್ಟರೆ ಆಕಾಶವನ್ನು ನೋಡಿಕೊಂಡು ನಿಂತಲ್ಲೇ ಹಾರಾಡಿ. ಅಲ್ಲಿಯವರೆಗೆ ತಾಳ್ಮೆ ಇರಲಿ...(ಏಜೆನ್ಸೀಸ್)

More from Filmibeat

English summary
Aishwarya Rai and Abhishek Bachchan have still not found an appropriate name for their daughter Beti B, who was born on November 16th.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X