ಹೆರಿಗೆ ನಂತರ ಐಶ್ವರ್ಯ ರೈ 'ಫಿಟ್ ನೆಸ್' ಮಂತ್ರ
ಐಶ್ವರ್ಯ ರೈ ಈಗ ಅವಳಂತೆ ಸುಂದರಿಯಾದ ಮಗುವಿನ ತಾಯಿ. ಬಚ್ಚನ್ ಪರಿವಾರವಂತೂ ಈಗ ಮಗುವಿನ ಆರೈಕೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದೆ. ಅಜ್ಜ ಅಮಿತಾಬ್ ಹಾಗೂ ಅಪ್ಪ ಅಭಿ ಇಬ್ಬರಿಗೂ ಮದ್ದು ಮಗುವಿನ ಮುಖವನ್ನು ನೋಡಲು ದಿನದ 24 ಗಂಟೆಯೂ ಸಾಲುತ್ತಿಲ್ಲವಂತೆ. ಅಭಿಗೆ ಶೂಟಿಂಗ್ ಹೋಗಲೂ ಮನಸ್ಸಿಲ್ಲವಂತೆ.
ಬೇಬಿ ಹುಟ್ಟಿದ ನಂತರ ಮೊದಲಬಾರಿಗೆ ಮಾಧ್ಯಮದ ಮುಂದೆ ಕಾಣಿಸಿಕೊಂಡಿದ್ದ ಹಸಿ ಬಾಣಂತಿ ಐಶೂ, ಸಹಜವಾಗಿಯೇ ದಪ್ಪಗಾಗಿದ್ದರು. ಮೊದಲಿನ ಫಿಟ್ ನೆಸ್ ಮೈಯಲ್ಲಿ ಇರಲಿಲ್ಲವಾದ್ದರಿಂದ ಅದನ್ನು ಮರೆಮಾಚಲು ಸೂಕ್ತವಾದ 'ಅನಾರ್ಕಲಿ' ಡ್ರೆಸ್ ಹಾಕಿಕೊಂಡು ಬಂದಿದ್ದರು ಐಶ್ವರ್ಯ ರೈ. ಪಿಂಕ್ ಕಲರ್ ಡ್ರೆಸ್ ನಲ್ಲಿದ್ದ ಐಶೂ ಸೌಂದರ್ಯ ಪ್ರಜ್ಞೆ ಅಲ್ಲೂ ಎದ್ದು ಕಾಣುತ್ತಿತ್ತು.
ಇದೀಗ ಮೊದಲಿನಂತೆ ಫಿಟ್ ಆಗಲು ಐಶೂ ಬಯಸಿದ್ದಾರಂತೆ. ಬಾಣಂತಿಯಾದರೂ ತಾನು ಮಾಜಿ ವಿಶ್ವ ಸುಂದರಿ ಎಂಬುದನ್ನು ಮರೆಯದ ಬಚ್ಚನ್ ಬಹೂ ವೃತ್ತಿಜೀವನಕ್ಕೆ ಮತ್ತೆ ಮರಳಲು ಸಿದ್ಧರಾಗುತ್ತಿದ್ದಾರಂತೆ. ಈಗಲೇ ಫಿಟ್ ನೆಸ್ ಮಂತ್ರ-ತಂತ್ರ ಪ್ರಾರಂಭಸಲಿರುವ ಐಶೂ, ಇನ್ನು ಸ್ವಲ್ಪ ದಿನದಲ್ಲೇ ಮೊದಲಿದ್ದ ಸುಂದರಿಯಾಗಿ ಕಂಗೊಳಿಸಲಿದ್ದಾರೆ. (ಏಜೆನ್ಸೀಸ್)


Click it and Unblock the Notifications











