ಬಾಯ್ ಫ್ರೆಂಡ್ ಗಳ ಸಂತೆಯಲ್ಲಿ ಅನುಷ್ಕಾ ಖೋ ಖೋ

ಬಾಲಿವುಡ್ ಬಾಲೆ ಅನುಷ್ಕಾ ಶರ್ಮಾಳನ್ನು ಬಾಲಿವುಡ್ ಮಂದಿ 'ಚುಲ್ ಬುಲಿ' ಎಂದು ಕರೆಯುತ್ತಾರೆ. ಆಕೆಗೆ ಇನ್ಯಾವ ಹೆಸರಿನಿಂದ ಕರೆಯಲು ಸಾಧ್ಯ ಹೇಳಿ? ಆಕೆ ಇರುವುದೇ ಹಾಗೆ. ಈಗಾಗಲೇ ಹಿಂದಿಯಲ್ಲಿ ಮೂರ್ನಾಲ್ಕು ಚಿತ್ರಗಳನ್ನು ಕೈನಲ್ಲಿ ಹಿಡಿದು ಉಳಿದ ನಟಿಯರಿಗೆ ಹೊಟ್ಟೆಯುರಿ ತರಿಸುತ್ತಿದ್ದಾಳೆ ಈ ಬೆಡಗಿ.

ಮೂಲತಃ ಬೆಂಗಳೂರಿನ ಈಕೆ ಹುಟ್ಟಿದ್ದು, ಬೆಳೆದದ್ದು ಎಲ್ಲಾ ಇಲ್ಲಿಯೇ. ಆದರೆ ಹಾಗಂತ ಕೇಳಬೇಡಿ. ಕನ್ನಡವನ್ನೇ ಮರೆತಿರುವ ಈಕೆಯ ದೇಶದ ನಕಾಶೆಯಲ್ಲಿ ಕರ್ನಾಟಕವೇ ಇರಲಿಕ್ಕಿಲ್ಲ. ಅಪ್ಪಿತಪ್ಪಿ ಈಕೆ ಕನ್ನಡ ಮಾತಾಡಿದರೆ ಹೇಳಿ. ಬಾಲಿವುಡ್ ಗೆ ಹೋಗಿರುವ ಎಲ್ಲಾ ನಟಿಯರಿಗಿರುವ ರೋಗ ಇದು. ಪಾಪ, ಇವಳಿಗ್ಯಾಕೆ ಬಯ್ತೀರಾ!

ಹೋಗ್ಲಿ, ಕೈ ಹಿಡಿದು ಈ ಮಟ್ಟಕ್ಕೆ ಬೆಳೆಸಿರುವ ಯಶ್ ಛೋಪ್ರಾಗಾದರೂ ಈಕೆ ಕೃತಜ್ಞತೆ ಸಲ್ಲಿಸುವುದು ಬೇಡವೇ? ಅವರು ಬ್ಯಾನರಿನಲ್ಲೇ ಮೂರು ಚಿತ್ರಗಳನ್ನು ಕೊಟ್ಟು ಈಕೆಯ ಗಾಡ್ ಫಾದರ್ ಆಗಿದ್ದರೂ "ನಾನು ಒಬ್ಬಳೇ ಈ ಉದ್ಯಮದಲ್ಲಿ ಬೆಳೆದು ಬಂದವಳು. ನನಗ್ಯಾವ ಗಾಡ್ ಫಾದರ್ ಗಳೂ ಇಲ್ಲ. ನಾನ್ಯಾವ ದೊಡ್ಡ ಸ್ಟಾರ್ ಮಗಳೂ ಅಲ್ಲ. ನನ್ನ ಟ್ಯಾಲೆಂಟ್ ನನ್ನ ಆಸ್ತಿ" ಎನ್ನುವ ಮೂಲಕ ಯಶ್ ಛೋಪ್ರಾಗೆ ಕೆನ್ನೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದಾಳೆ.

ಬಾಯ್ ಫ್ರೆಂಡಗಳ ವಿಷ್ಯದಲ್ಲಂತೂ ಈಕೆ ಬಾಲಿವುಡ್ ಬೆಡಗಿಯರಿಗೇ ಗುರುವಾಗಲು ಹೊರಟಿದ್ದಾಳೆ. ಮೊನ್ನೆಯವರೆಗೂ ರಣವೀರ್ ಜೊತೆ ಸುತ್ತುತ್ತಿದ್ದ ಈಕೆ, ನಿನ್ನೆ ಶಾಹಿದ್ ಜೊತೆ ಇದ್ದಾಳೆ. ಇಂದು ಮತ್ತೆ ರಣವೀರ್ ಎನ್ನುತ್ತಿರುವ ಈಕೆಯನ್ನು ಯಾರು ನಿನ್ನ ಬಾಯ್ ಫ್ರೆಂಡ್ ಕೇಳಿದರೆ, ಶಾಹಿದ್ ಜೊತೆ ಇದ್ದೇ ರಣವೀರ್ ನತ್ತ ಬೆಟ್ಟು ತೋರಿಸುತ್ತಾಳಂತೆ. ಗುಂಡಿಗೆ ಗಟ್ಟಿಯಿಲ್ಲದ ಬಾಲಿವುಂಡ್ ಮಂದಿ ಈಕೆಯಿಂದ ಬಚಾವಾಗುವುದು ಕಷ್ಟ, ರಾಮಾ...ಕೃಷ್ಣಾ..!

More from Filmibeat

English summary
Bollywood actress Anushka Sharma is changing her boy friend often. Originally she is from Bangalore, but she rejects to speak in kannada. Now she has 3 to 4 films in Bollywood.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X