ಸಿದ್ಧಾರ್ಥ್ ಜತೆ ಲಂಡನ್‌ಗೆ ದೀಪಿಕಾ ಪಡುಕೋಣೆ ಜೂಟ್
ಸಿದ್ಧಾರ್ಥ್ ಮಲ್ಯ ಮತ್ತು ದೀಪಿಕಾ ಪಡುಕೋಣೆ ನಡುವಿನ ಗುಸುಗುಸು ಸುದ್ದಿಗಳಿಗೆ ರೆಕ್ಕೆಪುಕ್ಕ ಮೂಡಿದೆ. ಇವರಿಬ್ಬರ ನಡುವಿನ ಸಂಬಂಧ ಏನು? ಇಬ್ಬರೂ ಗೆಳೆಯರೆ ಅಥವಾ ಪ್ರೇಮಿಗಳೇ ಎಂಬ ಪ್ರಶ್ನೆ ಬಾಲಿವುಡ್ ವಲಯದಲ್ಲಿ ಕಾಡುತ್ತಿತ್ತು. ಈಗ ಈ ಪ್ರಶ್ನೆಗಳಿಗೆ ಉತ್ತರ ಸಿಗುವ ಕಾಲ ಹತ್ತಿರ ಬಂದಿದೆ.
ಈ ಜೋಡಿ ಹಕ್ಕಿಗಳು ಈಗ ಜೊತೆಯಾಗಿ ಹಿತವಾಗಿ...ಎಂದು ಹಾಡು ಹೇಳಿಕೊಳ್ಳುತ್ತಾ ಲಂಡನ್‌ಗೆ ಹಾರಿದ್ದಾರೆ. ಅದೂ ಹೊಸ ವರ್ಷವನ್ನು ವರ್ಣರಂಜಿತವಾಗಿ ಆಚರಿಸಿಕೊಳ್ಳಲು. ಲಂಡನ್‌ನಲ್ಲಿ ಎಲ್ಲೆಲ್ಲಿ ತಂಗಬೇಕು, ಎಲ್ಲೆಲ್ಲಿ ತಿರುಗಬೇಕು ಎಂಬುದನ್ನು ಪಕ್ಕಾ ಪ್ಲಾನ್ ಮಾಡಿಕೊಂಡೆ ಇಬ್ಬರೂ ಜೂಟ್ ಹೇಳಿದ್ದಾರೆ ಎನ್ನುತ್ತವೆ ಮೂಲಗಳು.
ಒಟ್ಟಿನಲ್ಲಿ ಮೂರನೇ ಕಣ್ಣಿಗೆ ಗೊತ್ತಾಗದಂತೆ ಇಬ್ಬರೂ ಲಂಡನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಅದು ಹೇಗೋ ಏನೋ ಸುದ್ದಿ ಲೀಕ್ ಆಗಿದೆ. ಈ ವರ್ಷ ದೀಪಿಕಾ ಅಭಿನಯದ ಐದು ಚಿತ್ರಗಳು ತೆರೆಕಂಡಿವೆ. ಈ ವರ್ಷ ಆಕೆ ಬಿಡುವಿಲ್ಲದಂತೆ ಚಿತ್ರಗಳಲ್ಲಿ ನಟಿಸಿದ್ದಾರೆ. ವರ್ಷಾಂತ್ಯಕ್ಕಾದರೂ ಕೊಂಚ ರಿಲ್ಯಾಕ್ಸ್ ಆಗೋಣ ಎಂಬುದು ದೀಪಿಕಾ ಪ್ಲಾನ್. [ದೀಪಿಕಾ ಪಡುಕೋಣೆ]


Click it and Unblock the Notifications











