ಇಲ್ಲೀತನಕ 27-28 ಹುಡುಗಿಯರಾಗಿದ್ದಾರೆ, ಸಾಯೋದ್ರೊಳಗೆ 35 ಆಗುತ್ತೆ- 62 ವರ್ಷದ ಸಂಜಯ್ ಮಿಶ್ರಾ ಮಾತಿಗೆ ಎಲ್ಲ ತಬ್ಬಿಬ್ಬು

ಪ್ರೀತಿ ಅಂದರೆ ಸ್ವರ್ಗವೂ ಹೌದು. ಸಮಸ್ಯೆಯ ಸಾಗರವೂ ಹೌದು. ಎಲ್ಲವೂ ಅವರವರ ದೃಷ್ಟಿಕೋನ ಮತ್ತು ಬದುಕಿನ ಅನುಭವ. ಹದಿಹರೆಯದಲ್ಲಿ ಮೊಳಕೆಯೊಡೆಯುವ ಪ್ರೇಮಕ್ಕೂ ಅರವತ್ತರ ಹರೆಯದಲ್ಲಿ ಅರಳುವ ಅನುರಾಗಕ್ಕೂ ವ್ಯತ್ಯಾಸ ಇಲ್ಲ. ಯಾಕೆಂದರೆ ಪ್ರೀತಿಗೆ ದಡವೂ ಇಲ್ಲ.. ಮಿತಿಯೂ ಇಲ್ಲ. ಪ್ರೀತಿ ಕಾಲಕ್ಕೆ ಸೀಮಿತವಾದದ್ದು ಕೂಡ ಅಲ್ಲ.

ಕೆಲವರು ಪ್ರೀತಿಯಲ್ಲಿ ಒಮ್ಮೆ ಒಬ್ಬರ ಜೊತೆ ಬಿದ್ದರೆ ಉಸಿರು ಇರುವ ತನಕ ಅವರೊಬ್ಬರನ್ನೇ ಪ್ರೀತಿ ಮಾಡುತ್ತಾರೆ. ಇನ್ನೂ ಕೆಲವರು ಆಗಾಗ ಪ್ರೀತಿಯಲ್ಲಿ ಆಗಾಗ ಬೀಳುತ್ತಾರೆ. ಎಳುತ್ತಾರೆ. ಪ್ರೀತಿಯ ಹೆಸರಿನಲ್ಲಿ ಫ್ಲರ್ಟ್ ಮಾಡುತ್ತಾರೆ. ಪ್ರಣಯದಾಟ ಆಡುತ್ತಾರೆ. ಸದಾ ಕಾಲ ಹೊಸ ಸಂಗಾತಿಯ ಹುಡುಕಾಟದಲ್ಲಿ ಇರುತ್ತಾರೆ. ಇವರ ಪ್ರಕಾರ ನಿರಾಸಕ್ತಿ, ಏಕತಾನತೆ ಮತ್ತು ಉತ್ಸಾಹದ ಕೊರತೆಯನ್ನು ನೀಗಿಸುವ ಶಕ್ತಿ ಈ ಸರಸದಲ್ಲಿರುತ್ತೆ. ಉದಾಹರಣೆಗೆ ಸಂಜಯ್ ಮಿಶ್ರಾ.

28 Down 7 to Go Sanjay Mishra s Viral Confession on Why His Goal is 35 Girlfriends

ಹೌದು, ಸಂಜಯ್ ಮಿಶ್ರಾ .. ಬಾಲಿವುಡ್‌ನ ಪ್ರಖ್ಯಾತ ನಟ. 1991ರಲ್ಲಿ ''ಚಾಣಕ್ಯ'' ಧಾರಾವಾಹಿಯ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದ ಸಂಜಯ್ ಮಿಶ್ರಾ ''ಆಫೀಸ್ ಆಫೀಸ್'' ಮೂಲಕ ಮನೆ ಮಾತಾದರು. ಆ ನಂತರ ಸಿನಿಮಾ ಸೆಳೆತಕ್ಕೆ ಸಿಲುಕಿ 1995ರ ಆಸು ಪಾಸು ಬೆಳ್ಳಿ ಪರದೆಯತ್ತ ಬಂದ ಸಂಜಯ್ ಮಿಶ್ರಾ ಅವರದ್ದು ಹಾಸ್ಯ ಪಾತ್ರಕ್ಕೂ ಸೈ.. ಗಂಭೀರವಾದ ಪಾತ್ರಕ್ಕೂ ಜೈ.. ಎಂಬಂತಹ ವ್ಯಕ್ತಿತ್ವ. ''ಆಂಖೋ ದೇಖಿ''.. ''ಮಸಾನ್''.. ''ಸತ್ಯ''.. ''ದಿಲ್ ಸೇ''.. ''ಅಪ್ನಾ ಸಪ್ನಾ ಮನಿ ಮನಿ''.. ''ಬಂಟಿ ಔರ್ ಬಬ್ಲಿ''..''ವೆಲ್‌ಕಂ''.. ''ಆಲ್ ದಿ ಬೆಸ್ಟ್''.. ''ಧಮಾಲ್''.. ''ಗೋಲ್‌ಮಾಲ್''.. ''ವಧ್''.. ಹೀಗೆ ಹಲವಾರು ಚಿತ್ರಗಳನ್ನು ಮಾಡಿರುವ ಸಂಜಯ್ ಮಿಶ್ರಾ ತೆಲುಗಿನಲ್ಲಿ ಕೂಡ ಎರಡು ಚಿತ್ರಗಳನ್ನು ಮಾಡಿದ್ದಾರೆ.

ಸದ್ಯ ಸಂಜಯ್ ಮಿಶ್ರಾ ಅಭಿನಯದ ''ವಧ್ 2'' ಬಿಡುಗಡೆಯಾಗಿದೆ. ಪ್ರೇಕ್ಷಕರ ಮತ್ತು ವಿಮರ್ಷಕರ ಪ್ರೀತಿಯನ್ನು ಕೂಡ ಗಳಿಸಿದೆ. ಚಿತ್ರದ ಗಳಿಕೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡುತ್ತಿರುವ ಸಂಜಯ್ ಮಿಶ್ರಾ ಸದ್ಯ ಶುಭಾಂಕರ್ ಮಿಶ್ರಾ ಅವರಿಗೆ ಸಂದರ್ಶನ ನೀಡಿದ್ದಾರೆ. ಇದೇ ಸಂದರ್ಶನದಲ್ಲಿ ಸಂಜಯ್ ಮಿಶ್ರಾ ತಮ್ಮ ಬದುಕಿನ ಲವ್ ಮತ್ತು ರೊಮ್ಯಾನ್ಸ್ ಅಧ್ಯಾಯವನ್ನು ತೆರೆದಿದ್ದಾರೆ. ತಮ್ಮ 28 ಪ್ರೇಮಕಥೆಯನ್ನು ಹೇಳಿದ್ದಾರೆ.

ಈ ಕುರಿತು ಶುಭಾಂಕರ್ ಮಿಶ್ರಾ ಜೊತೆ ಮಾತನಾಡಿರುವ ಸಂಜಯ್ ಮಿಶ್ರಾ, ಒಂದು, ಎರಡು, ಮೂರು, ನಾಲ್ಕು ಎಂದು ನಾನು ಲೆಕ್ಕ ಹಾಕುತ್ತಾ ಕುಳಿತರೆ ಅದು ನಮ್ಮ ಪ್ರೇಮಕಥೆಗಳಿಗೆ ಅವಮಾನ ಮಾಡಿದಂತೆ ಆಗುತ್ತೆ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ 27-28 ಗೆಳತಿಯರು ನನ್ನ ಬದುಕಿನಲ್ಲಿ ಬಂದು ಹೋಗಿದ್ದಾರೆ ಎಂದು ಹೇಳಿದ್ದಾರೆ.

ಮುಂದುವರೆದು ಸಾಯೋದ್ರೊಳಗೆ 35 ಹುಡುಗಿಯರು ನನ್ನ ಬದುಕಿನಲ್ಲಿ ಬಂದು ಹೋಗಿರುತ್ತಾರೆ, ಆ ಗುರಿಯನ್ನು ತಲುಪುವ ವಿಶ್ವಾಸ ನನಗೆ ಇದೆ ಎಂದು ಹೇಳಿರುವ ಸಂಜಯ್ ಮಿಶ್ರಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮನಸ್ಸು ಸದಾ ಉತ್ಸಾಹದಿಂದ ಇರಬೇಕು, ಕ್ರೀಯಾಶಿಲವಾಗಿರಬೇಕು ಎಂದರೆ ನನ್ನ ಪಾಲಿಗೆ ಇದು ಒಳ್ಳೆಯ ವಿಷಯ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ 28 ವಿಭಿನ್ನ ಪ್ರೇಮಕಥೆಗಳು, 28 ವಿಭಿನ್ನ ಭಾವನೆಗಳು ಮತ್ತು 28 ಮಧುರ ನೆನಪುಗಳನ್ನು ನೆನಪು ಮಾಡಿಕೊಂಡಿದ್ದಾರೆ.

28 Down 7 to Go Sanjay Mishra s Viral Confession on Why His Goal is 35 Girlfriends

ಸದ್ಯ ಸಂಜಯ್ ಮಿಶ್ರಾ ಅವರ ಈ ಹೇಳಿಕೆಗೆ ಹಲವರು ತಬ್ಬಿಬ್ಬಾಗಿದ್ಧಾರೆ. ಶಾಕ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಂಜಯ್ ಮಿಶ್ರಾ ಅವರ ಹೇಳಿಕೆಯ ಕುರಿತು ಚರ್ಚೆ ಕೂಡ ಮಾಡುತ್ತಿದ್ದಾರೆ.ಕೆಲವರು ಪ್ರೀತಿ ಇದ್ದಲ್ಲಿ ವಯಸ್ಸಿನ ಹಂಗೆಲ್ಲಿ ಎಂದು ಹೇಳಿದರೆ, ಸಂಜಯ್ ಮಿಶ್ರಾ ಅವರ ಸಂದರ್ಶನವನ್ನು ನೋಡಿದರೆ ಅವರ ಮಾತುಗಳಲ್ಲಿ ಅಶ್ಲೀಲತೆ ಕಾಣಿಸುವುದಿಲ್ಲ. ಬದಲಿಗೆ ಜೀವನದ ಮೇಲೀನ ಪ್ರೀತಿ ಕಾಣಿಸುತ್ತೆ ಎಂದು ಹೇಳಿದ್ದಾರೆ. ಹೊಸ ಹೊಸ ಹುಡುಗಿಯರನ್ನು ಭೇಟಿಯಾಗುವುದು, ಅವರೊಂದಿಗೆ ಹರಟುವುದು, ಸ್ವಲ್ಪ ಸರಸವಾಡುವುದು ಮತ್ತು ಆ ಮೂಲಕ ಬದುಕನ್ನು ಸಂಭ್ರಮಿಸುವುದು, ಇದು ಮಿಶ್ರಾ ಅವರ ಜೀವನ ದರ್ಶನ ಎಂದು ಹೇಳುತ್ತಿದ್ದಾರೆ. ಪ್ರೀತಿಯಲ್ಲಿ ಸೋತರೂ ಅಥವಾ ಗೆದ್ದರೂ, ಆ ಪಯಣವೇ ಸುಂದರ ಎಂಬ ವಾದವನ್ನು ಕೂಡ ಮಾಡುತ್ತಿದ್ಧಾರೆ.

ಇನ್ನೂ ಕೆಲವರು ಸಾಮಾನ್ಯವಾಗಿ ವಯಸ್ಸಾದವರನ್ನು ನಮ್ಮ ಸಮಾಜ ಮೂಲೆಗುಂಪು ಮಾಡುತ್ತೆ, ಆದರೆ ದೇಹಕ್ಕೆ ಮುಪ್ಪಾದರು, ನನ್ನ ಹೃದಯಕ್ಕೆ ವಯಸ್ಸಾಗಲ್ಲ ಎನ್ನುವ ಇವರ ನಡೆ ಮೆಚ್ಚುವಂತಹದ್ದು ಎಂದು ಕೂಡ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮಿಶ್ರಾ ಅವರ ಈ 'ಫ್ಲರ್ಟಿಂಗ್' ಸ್ವಭಾವವು ಅವರಿಗೆ ಜೀವನದ ಮೇಲಿನ ಆಸಕ್ತಿಯನ್ನು ಕುಂದದಂತೆ ನೋಡಿಕೊಂಡಿದೆ. ಜೀವನದಲ್ಲಿ ಎಷ್ಟು ಜನರನ್ನು ಪ್ರೀತಿಸಿದೆವು ಎಂಬುದಕ್ಕಿಂತ, ಎಷ್ಟು ಜೀವಂತವಾಗಿ ಬದುಕಿದೆವು ಎಂಬುದು ಮುಖ್ಯ. ಈ ಮಾತುಗಳಿಗೆ ಸಂಜಯ್ ಮಿಶ್ರಾ ಅವರ ಬದುಕೇ ಅತ್ಯುತ್ತಮ ಕೈಗನ್ನಡಿ ಎನ್ನುತ್ತಿದ್ದಾರೆ.

ಅಂದ್ಹಾಗೇ ಸಂಜಯ್ ಮಿಶ್ರಾ 90ರ ದಶಕದಲ್ಲಿ ರೋಷ್ನಿ ಅಚ್ರೇಜಾ ಅವರನ್ನು ಮದುವೆಯಾಗಿದ್ದರು. ಆದರೆ ಈ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಆ ನಂತರ 2009ರಲ್ಲಿ ಕಿರಣ್ ಅವರ ಜೊತೆ ಸಂಜಯ್ ಮಿಶ್ರಾ ಎರಡನೇ ಮದುವೆಯಾದರು. ಇವರಿಗೆ ಪಲ್ ಮತ್ತು ಲಮ್ಹಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಒಟ್ನಲ್ಲಿ ಸಂಜಯ್ ಮಿಶ್ರಾ ಅವರ ಪ್ರಕಾರ ಪ್ರೀತಿಯೆಂದರೆ ಕೇವಲ ಬಂಧನವಲ್ಲ, ಅದು ಮುಕ್ತವಾಗಿ ಹಾರುವ ಹಕ್ಕಿ. ಬದುಕನ್ನು ಪ್ರೀತಿಸಿ, ಪ್ರೀತಿಯನ್ನು ಸಂಭ್ರಮಿಸಿ. ವಯಸ್ಸಾಗಿದೆ ಎಂದು ಮೂಲೆಯಲ್ಲಿ ಕುಳಿತುಕೊಳ್ಳಬೇಡಿ ಎನ್ನುವುದು ಇವರ ಮಾತುಗಳ ಒಟ್ಟಾರೆ ಸಾರ. ಸಂಜಯ್ ಮಿಶ್ರಾ ಅವರ ಈ ಮುಕ್ತ ಪ್ರೇಮ ತತ್ವದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡುವ ಮೂಲಕ ನಮ್ಮ ಜೊತೆ ನಿಮ್ಮ ಅಭಿಪ್ರಾಯವನ್ನು ನೀವು ಹಂಚಿಕೊಳ್ಳಬಹುದು.

More from Filmibeat

English summary
"My goal is 35." Sanjay Mishra opens up like never before! From 28 past relationships to his surprising future "target," the actor’s latest interview is breaking the internet. Click to see the hilarious and honest reason behind his romantic bucket list.
Read more about: love relationship
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X