ನನ್ನ ಪಪ್ಪನಿಗೆ ಭಾರತ ರತ್ನ ಕೊಡಿ: ದೀಪಿಕಾ ಪಡುಕೋಣೆ
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹಾಗೂ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರಿಗೆ ದೇಶದ ಅತ್ಯುನ್ನತ ಪುರಸ್ಕಾರ ಭಾರತರತ್ನ ಕೊಡುವುದಾದರೆ ನನ್ನ ತಂದೆಯವರಿಗೆ ಏಕೆ ಕೊಡಬಾರದು? ಎಂಬುದು ಬಾಲಿವುಡ್ ತಾರೆ ದೀಪಿಪಾ ಪಡುಕೋಣೆ ಪ್ರಶ್ನೆ.
ನನ್ನ ತಂದೆ ಹಾಗೂ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಕೂಡ ಭಾರತರತ್ನಕ್ಕೆ ಅರ್ಹರು. ಬ್ಯಾಡ್ಮಿಂಟನ್‌ನಲ್ಲಿ ಅಸಾಧಾರಣ ಸಾಧನೆ ಮಾಡಿರುವ ನನ್ನ ತಂದೆ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಗೆದ್ದ ಮೊಟ್ಟ ಮೊದಲ ಭಾರತೀಯ. ಅವರು ಭಾರತರತ್ನಕ್ಕೆ ಸಂಪೂರ್ಣ ಅರ್ಹರು ಎಂಬುದು ದೀಪಿಕಾ ವಾದ.
ಚಿತ್ರರಂಗಕ್ಕೆ ಅಡಿಯಿಡುವುದಕ್ಕೂ ಮುನ್ನ ದೀಪಿಕಾ ಪಡುಕೋಣೆ ಬ್ಯಾಡ್ಮಿಂಟನ್ ರಾಕೆಟ್ ಹಿಡಿದಿದ್ದರು. ಬಳಿಕ ಮಾಡೆಲಿಂಗ್, ಸಿನಿಮಾ ಜಗತ್ತಿನಲ್ಲಿ ದೀಪಿಕಾ ಕಳೆದುಹೋದರು. ನಾನು ನನ್ನ ತಂದೆಯವರಿಂದಲೇ ಬ್ಯಾಡ್ಮಿಂಟನ್ ಕಲಿತೆ. ರಾಷ್ಟ್ರಮಟ್ಟದವರೆಗೂ ಬೆಳೆದೆ. ಹಾಗಾಗಿ ಒಲಿಂಪಿಕ್ಸ್ ಗೋಲ್ಡ್ ಕ್ವೆಸ್ಟ್ ಅಭಿಯಾನದೊಂದಿಗೆ ಕೈಜೋಡಿಸಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್)
More from Filmibeat
English summary
Observing the recent move to change the clauses for giving Bharatha Rathna to sports personalities by government of India in the case of Sachin Tendulkar the actress Deepika Padukone suggested her father’s name.
ದೀಪಿಕಾ ಪಡುಕೋಣೆ ಭಾರತರತ್ನ ಬಾಲಿವುಡ್ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ deepika padukone bharatha ratna prakash padukone bollywood


Click it and Unblock the Notifications











