ಪುನೀತ್-ಸೂರಿ 'ಅಣ್ಣಾ ಬಾಂಡ್' ಗೆ ಜಾಕಿ ಶ್ರಾಫ್ ಪವರ್

Jacckie Shroff
ಪವರ್ ಸ್ಟಾರ್ ಪುನೀತ್ ಹಾಗೂ ಸೂರಿ ಸಂಗಮದ ಅಣ್ಣಾ ಬಾಂಡ್ ಚಿತ್ರಕ್ಕೆ ಈಗಾಗಲೇ ಇರುವ ನಿರೀಕ್ಷೆ ಇನ್ನೂ ಹೆಚ್ಚಾಗುವ ಸಂಭವ ಇದೆ. ಬಾಲಿವುಡ್ ನಟ ಜಾಕಿ ಶ್ರಾಫ್ 'ಅಣ್ಣಾ ಬಾಂಡ್' ಗೆ ಸೇರ್ಪಡೆಯಾಗಿದ್ದಾರೆ. ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವ ಜಾಕಿ ಶ್ರಾಫ್ ಎಂಟ್ರಿಯಿಂದ, ಅಣ್ಣಾ ಬಾಂಡ್ ಗೆ ಇನ್ನೊಬ್ಬ 'ಅಣ್ಣ' ಸಿಕ್ಕಂತಾಗಿದೆ.

ಚಿತ್ರದಲ್ಲಿ ಈ ಬಾಲಿವುಡ್ ನಟನದು ವಿಲನ್ ಪಾತ್ರವಾ? ಅಥವಾ ಒಳ್ಳೆಯ ಪಾತ್ರವಾ? ಸದ್ಯಕ್ಕೆ ಈ ವಿಷಯ ಸಸ್ಪೆನ್ಸ್! ಆದರೆ ವಿಶೇಷ ಪಾತ್ರವಂತೂ ಹೌದು ಎಂದಿದ್ದಾರೆ ನಿರ್ದೇಶಕ ಸೂರಿ. ನಮ್ಮ ಪವರ್ ಸ್ಟಾರ್ ಗೆ ಈಗ ಸ್ಯಾಂಡಲ್ ವುಡ್ ಪವರ್ ಜೊತೆ ಬಾಲಿವುಡ್ ಪವರ್ ಕೂಡ ಸಿಕ್ಕಂತಾಗಿದೆ.

ಇದಕ್ಕೂ ಮೊದಲು ಕನ್ನಡದಲ್ಲಿ ಜಾಕಿ ಶ್ರಾಫ್ ನಟಿಸಿದ ಚಿತ್ರಗಳೆಂದರೆ ಮಾಸ್ಟರ್ ಕಿಶನ್ ರ 'ಕೇರ್ ಆಫ್ ಫುಟ್ ಪಾತ್' ಹಾಗೂ ನಿತೀಶ್ ಜೆಪಿ ಅಭಿನಯದ 'ಜಮಾನ'. 'ಆ ಮರ್ಮ' ಚಿತ್ರ ಡಬ್ಬಿಂಗ್ ಚಿತ್ರವಾದ್ದರಿಂದ ಅದನ್ನು ಕನ್ನಡ ಚಿತ್ರ ಅನ್ನಲಾಗದು. ಹಾಗಾಗಿ ಅಣ್ಣಾ ಬಾಂಡ್ ಜಾಕಿಯ ಮೂರನೆಯ ಚಿತ್ರ. ಪುನೀತ್-ಜಾಕಿ ಪವರ್ ನಲ್ಲಿ ಅಣ್ಣಾ ಬಾಂಡ್ ಸದ್ದು ಇನ್ನೂ ಜೋರಾಗಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Bollywood actor Jackie Shroff acts in kannada Movie 'Anna Bond'. This is the power star puneet movie and Suri Direction. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X