ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ಬಾಲಿವುಡ್ ತೆರೆಗೆ

By Srinath

Saddam Hussein
ಇರಾಕ್ ನ ಕುಖ್ಯಾತ ಅಧ್ಯಕ್ಷ ಸದ್ದಾಂ ಹುಸೇನ್ ಶೀಘ್ರವೇ ಬಾಲಿವುಡ್ ನಲ್ಲಿ ರಾರಾಜಿಸಲಿದ್ದಾನೆ. ಇದೇನಿದು ಅವನು ಉರುಳಿಗೆ ತಲೆಕೊಟ್ಟು ವರುಷಗಳೇ ಉರುಳಿವೆ ಇನ್ನೇನು ಅವ ಬಾಲಿವುಡ್ ಗೆ ಎಂಟ್ರಿ ಕೊಡೋದು ಎಂದು ಮೂಗೆಳೆಯಬೇಡಿ. ವಿಷಯ ಏನೆಂದರೆ ಸದ್ದಾಂ ಕುರಿತು ಬಾಲಿವುಡ್ ನಲ್ಲಿ From President To Prisoner ಸಿನಿಮಾ ಸೆಟ್ಟೇರಲಿದೆ.

ಇರಾಕಿನ ಸರ್ವಾಧಿಕಾರಿ ಸದ್ದಾಂ ಹುಸೇನ್ ಚಿತ್ರದಲ್ಲಿ ಲೋಕಬಲ್ಲ ವಿಲನ್ ಎನ್ನುವುದಕ್ಕಿಂತ ಹೀರೊ ಆಗಿ ಮಿಂಚಲಿದ್ದಾನೆ. ಅಟ್ ಲೀಸ್ಟ್, ಚಿತ್ರದ ನಾಯಕನ ಪಾತ್ರಕ್ಕೆ ಆಯ್ಕೆಯಾಗಿರುವ ಬಾಲಿವುಡ್ ನಟ, ನಿರ್ಮಾಪಕ ಅಕ್ಬರ್ ಖಾನ್, ಸದ್ದಾಂನನ್ನು ಹೀರೋ ಆಗಿಸಲು ಹೊರಟಿದ್ದಾರೆ. ನಿರ್ಮಾಪಕ ಕಮ್ ನಿರ್ದೇಶಕ ಸುರೇಶ್ ಕೊಹ್ಲಿ ಅವರು ಖಾನ್ ಹೆಸರನ್ನು ಸದ್ದಾಂ ಪಾತ್ರಕ್ಕೆ ಅಖೈರುಗೊಳಿಸಿದ್ದಾರೆ.

ಸದ್ದಾಂ ಕುರಿತಾದ ಪುಸ್ತಕವೊಂದರಲ್ಲಿ ಅವನ ವ್ಯಕ್ತಿತ್ವ ಗಮನ ಸೆಳೆಯಿತು. ಅದೊಂದು ಮಾನವಾಸಕ್ತಿ ಹುಟ್ಟಿಸುವ ಕಥೆ. ಅವನೊಬ್ಬ ಹೀರೊ, ನಿಜವಾದ ದೇಶಪ್ರೇಮಿ. ಆದರೆ ಸದ್ದಾಂ ಜಗತ್ತಿಗೆ ನಕಾರಾತ್ಮಕವಾಗಿ ಪರಿಚಿತನಾಗಿದ್ದಾನೆ ಎಂದೆಲ್ಲ ಕೊಹ್ಲಿ ಸಾಹೇಬರು ಸದ್ದಾಂನನ್ನು ಹಾಡಿಹೊಗಳಿದ್ದಾರೆ. ನೋಡಬೇಕು ಚಿತ್ರ ಇನ್ನು ಯಾವ ಸ್ವರೂಪದಲ್ಲಿರುತ್ತದೋ !? ಅಜೀಜ್ ಬರ್ನಿ ಬರೆದಿರುವ 'ಸಫರ್ ಜಿಂದಗಿ ಕಾ' ಪುಸ್ತಕವನ್ನಾಧರಿಸಿ ಈ ಸಿನಿಮಾ ನಿರ್ಮಾಣವಾಗಲಿದೆ. ಸೆಪ್ಟೆಂಬರ್ ನಲ್ಲಿ ಚಿತ್ರ ಸೆಟ್ಟೇರಲಿದೆ. ಇರಾಕ್ ನಲ್ಲಿ ಕೆಲವೊಂದು ನೈಜ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

More from Filmibeat

English summary
Saddam Hussein is set to hit the silver screen. Actor-filmmaker Akbar Khan will be playing the Iraqi dictator in the film From President To Prisoner. The Film will go on the floors in September 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X