ಚಿಲ್ಲರ್ ಪಾರ್ಟಿಗಾಗಿ ಮತ್ತೆ ಶರ್ಟ್ ಕಳಚಿದ ಸಲ್ಮಾನ್ ಖಾನ್
ಶರ್ಟ್ ಕಳಚುವುದರಲ್ಲಿ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ನಿಸ್ಸೀಮ. ಶರ್ಟ್ ಕಳಚಿ ಅದನ್ನೊಮ್ಮೆ ಗಿರಗಿರ ಅಂತ ತಿರುಗಿ ಪ್ರೇಕ್ಷಕರ ಕಡೆ ಎಸೆಯಲಿಲ್ಲ ಎಂದರೆ ಸಲ್ಲುಗೆ ಸಮಾಧಾನವಾಗಲ್ಲ . ಈ ರೀತಿ ಆತ ಶರ್ಟ್ ಕಳಚಿ ಬಹಳ ದಿನಗಳೇ ಕಳೆದುಹೋಗಿವೆ.
ಈ ಬಾರಿ ತನ್ನ ಅಭಿಮಾನಿಗಳಿಗೆ ಸಲ್ಲು ನಿರಾಶೆ ಮಾಡುತ್ತಿಲ್ಲ. ಚಿಲ್ಲರ್ ಪಾರ್ಟಿ ಚಿತ್ರದಲ್ಲಿ ಸಲ್ಲು ಅಭಿನಯಿಸದಿದ್ದರೂ, ಆ ಚಿತ್ರದ ಪ್ರೊಮೋಗಳಲ್ಲಿ ಸಲ್ಲು ಶರ್ಟ್ ಕಳಚಿ ಪ್ರೇಕ್ಷಕರ ಶಿಳ್ಳೆ ಗಿಟ್ಟಿಸಲಿದ್ದಾರೆ. ಪುಟಾಣಿ ಮಕ್ಕಳೊಂದಿಗೆ ಚಿಲ್ಲರ್ ಪಾರ್ಟಿ ಎಕ್ಸ್‌ಕ್ಲೂಸಿವ್ ಪ್ರೊಮೋದಲ್ಲಿ ಸಲ್ಲು ಕಾಣಿಸಲಿದ್ದಾರೆ.
ತಮ್ಮ ಮೈಕಟ್ಟು ತೋರುವುದರ ಜೊತೆಗೆ ಚಿನ್ನಾರಿ ಮುತ್ತರೊಂದಿಗೆ ಜೋಕ್ಸ್ ಕೂಡ ಮಾಡಲಿದ್ದಾರೆ. "ಚಿತ್ರದಲ್ಲಿ ಸಿಕ್ಕಾಪಟ್ಟೆ ಕಾಮಿಡಿ ಇದೆ. ದಯವಿಟ್ಟು ಮಿಸ್ ಮಾಡಿಕೊಳ್ಳಬೇಡಿ" ಎಂದು ಸಲ್ಲು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
ಇದು ಮಕ್ಕಳ ಚಿತ್ರವಾಗಿದ್ದು ಯುಟಿವಿ ಮೋಷನ್ ಪಿಕ್ಚರ್ ಬ್ಯಾನರ್‌ನಡಿ ನಿರ್ಮಿಸಲಾಗುತ್ತಿದೆ. ವಿಕಾಸ್ ಬಾಹ್ಲ್ ಹಾಗೂ ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದ ಐಟಂ ಸಾಂಗ್‌ನಲ್ಲಿ ರಣಬೀರ್ ಕಪೂರ್ ಕೂಡ ಕಾಣಿಸಲಿದ್ದಾರೆ. (ಏಜೆನ್ಸೀಸ್)


Click it and Unblock the Notifications











