For Quick Alerts
  ALLOW NOTIFICATIONS  
  For Daily Alerts

  ಪ್ರಾದೇಶಿಕ ಭಾಷಾ ಚಿತ್ರಗಳ ಪರ ಶಾರುಖ್ ಬ್ಯಾಟಿಂಗ್

  By Rajendra
  |

  "ದೇಶದಲ್ಲಿ ಪ್ರಾದೇಶಿಕ ಭಾಷೆಗಳ ಚಿತ್ರಗಳಿಗೆ ಮಾನ್ಯತೆ ಸಿಗಬೇಕೆನ್ನುವುದು ನನ್ನ ವಾದ. ಕಡಿಮೆ ಬಜೆಟ್ ನಲ್ಲಿ ತಯಾರಾಗುವ ಚಿತ್ರಗಳಿಗೆ ಆಯಾಯ ರಾಜ್ಯಗಳೆ ಮೊದಲ ಮತ್ತು ಮೂಲ ಮಾರುಕಟ್ಟೆ. ಈ ಭಾಷೆಗಳಲ್ಲಿ ಬರುವ ಕಥೆಗಳು ಬಾಲಿವುಡ್ ಚಿತ್ರಕ್ಕೆ ಸ್ಫೂರ್ತಿ ಎನ್ನುವುದು ನನ್ನ ಮನದಾಳದ ಮಾತು" ಎನ್ನುತ್ತಾರೆ ಬಾಲಿವುಡ್ ಬಾದಶಾ ಶಾರೂಖ್ ಖಾನ್.

  ಮರಾಠಿ ಚಿತ್ರರಂಗದ ಪ್ರಮುಖರು ಮಹಾರಾಷ್ಟ್ರ ಉಪಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತಮ್ಮ ಭಾಷೆಯ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್ ನಲ್ಲಿ ಪ್ರಾಮುಖ್ಯತೆ ನೀಡಬೇಕೆಂದು ಮನವಿ ಸಲ್ಲಿಸಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಖಾನ್, ಮರಾಠಿ ನಾನು ಇನ್ನೂ ಕಲಿತಿಲ್ಲ. ಆದರೆ ನನ್ನ ಮಕ್ಕಳು ಮರಾಠಿ ಚೆನ್ನಾಗಿ ಮಾತನಾಡಬಲ್ಲರು ಅವರಿಂದ ಕಲಿಯುತ್ತೇನೆ. ಮರಾಠಿ ಮತ್ತು ಇತರ ಪ್ರಾದೇಶಿಕ ಭಾಷೆ ಚಿತ್ರಗಳನ್ನು ಮುಂಬೈ ಚಿತ್ರರಂಗ ಬೆಂಬಲಿಸ ಬೇಕಾಗಿದೆಯೆಂದು ಹೇಳಿದ್ದಾರೆ.

  ಮರಾಠಿ ಚಿತ್ರಗಳಿಗೆ ಮುಂಬೈನಲ್ಲಿ ಪ್ರಾಮುಖ್ಯತೆ ನೀಡಬೇಕೆನ್ನುವ ಎಂ ಎನ್ ಎಸ್ ಮತ್ತು ಶಿವಸೇನೆಯ ಬೇಡಿಕೆಗೆ ನನ್ನ ಬೆಂಬಲವಿದೆ. ಅಯಾಯ ರಾಜ್ಯದ ಭಾಷೆಗಳಿಗೆ ಮೊದಲ ಆದ್ಯತೆ ನೀಡಬೇಕು. ಒಬ್ಬ ಚಿತ್ರನಟನಾಗಿ ಈ ಮಾತನ್ನು ಹೇಳುತ್ತಿದ್ದೇನೆಯೆ ಹೊರತು ನನ್ನ ಈ ಮಾತಿನಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಪ್ರಾದೇಶಿಕ ಭಾಷಾ ಚಿತ್ರಗಳು ಸಬ್ ಟೈಟಲ್ ನಲ್ಲಿ ಬಂದರೆ ಮಾರುಕಟ್ಟೆ ಉತ್ತಮವಾಗಿ ವೃದ್ಧಿಸಬಹುದು ಎಂದಿದ್ದಾರೆ ಶಾರೂಖ್ ಖಾನ್.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X