ಬೆಂಗಳೂರು ದೋಸೆಗೆ 'ಠ್ಠ್' ಎಂದ ಶೇಖರ್ ಕಪೂರ್
ಜಿಹ್ವ ಚಾಪಲ್ಯ ತಣಿಸಲು ಈ ಜಗತ್ತಿನಲ್ಲಿ ನಾನಾ ತರಹದ ತಿಂಡಿ ತೀರ್ಥಗಳುಂಟು. ಆದರೆ ವೈವಿಧ್ಯಭರಿತ ದೋಸೆಗಳಿಗೆ ಸರಿಸಾಟಿ ಯಾವುದುಂಟು. ದಾವಣಗೆರೆ ಬೆಣ್ಣೆ ದೋಸೆ, ಬೆಂಗಳೂರು ಮಸಾಲೆ ದೋಸೆ, ಟೊಮೆಟೋ ದೋಸೆ, ಈರುಳ್ಳಿ ದೋಸೆ, ನೀರು ದೋಸೆ, ರವೆ ದೋಸೆ, ರಾಗಿ ದೋಸೆ, ಅವಲಕ್ಕಿ ದೋಸೆ, ಪ್ಲೇನ್ ದೋಸೆ, ಬ್ರೆಡ್ ದೋಸೆ...ಹೀಗೆ ನೂರೊಂದು ಬಗೆಬಗೆಯ ದೋಸೆಗಳುಂಟು.
ಇತ್ತೀಚೆಗೆ ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ ಶೇಖರ್ ಕಪೂರ್ ಬೆಂಗಳೂರಿಗೆ ಭೇಟಿ ನೀಡಿದ್ದರಂತೆ. ಸಜ್ಜನ್ ರಾವ್ ಸರ್ಕಲ್ ಬಳಿಯ 'ತಿಂಡಿ ರಸ್ತೆ' (ಫುಡ್ ಸ್ಟ್ರೀಟ್)ಯಲ್ಲಿ ದೋಸೆ ಸವಿದು ಅದರ ರುಚಿಗೆ 'ಠ್ಠ್' ಎಂದು ಲೊಚಗುಟ್ಟಿದ್ದಾರೆ. Best Dosa in the World ಎಂದು ಟ್ವೀಟಿಸಿ ದೋಸೆ ಬಗೆಗಿನ ತಮ್ಮ ಮನದಾಳದ ತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ.
ದೋಸೆ ಸವಿದಿರುವ ಶೇಖರ್ ಹಲವಾರು ಫೋಟೋಗಳನ್ನು ಕ್ಲಿಕ್ಕಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದಾರೆ. ಬೀದಿ ಬದಿಯ ಶುಚಿ ರುಚಿಯಾದ ತಿಂಡಿಗೆ ಮಾರುಹೋಗಿರುವ ಅವರು ದೋಸೆಯನ್ನು ಮಾತ್ರ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











