ವಿದ್ಯಾ ಬಾಲನ್ ಮೇಲೆ ಮದವೇರಿದ ಗೂಳಿಗಳ ದಾಳಿ!

By Mahesh

Vidya Balan
ಬಾಲಿವುಡ್ ನಟಿ ವಿದ್ಯಾ ಬಾಲನ್ ಮೇಲೆ ಎರಡು ಮದವೇರಿದ ಗೂಳಿಗಳು ಹಠಾತ್ತಾಗಿ ದಾಳಿ ನಡೆಸಿದ ಘಟನೆ ನಡೆದಿದೆ. ಹೈದರಾಬಾದಿನ ರಾಮೀಜಿ ರಾವ್ ಫಿಲ್ಮಂ ಸಿಟಿಯಲ್ಲಿ ದಿ ಡರ್ಟಿ ಪಿಕ್ಚರ್ ಸಿನಿಮಾದ ಶೂಟಿಂಗ್ ನಡೆಯುವ ಸಂದರ್ಭದಲ್ಲಿ ಈ ಘಟನೆ ಜರುಗಿದೆ. ಅದೃಷ್ಟವಶಾತ್ ವಿದ್ಯಾ ಅಪಾಯದಿಂದ ಪಾರಾಗಿದ್ದಾಳೆ.

ಚಿತ್ರೀಕರಣಕ್ಕಾಗಿ ಸೆಟ್ ಗೆ ಬಂದಿದ್ದ ವಿದ್ಯಾ ಬಾಲನ್ ಕೆಂಪು ಬಣ್ಣದ ಗೌನ್ ಧರಿಸಿದ್ದು ಗೂಳಿಗಳ ಕಣ್ಣು ಕೆಂಪಾಗಿಸಿದೆ. ವಿದ್ಯಾಳನ್ನು ಕಂಡ ಎರಡು ಗೂಳಿಗಳು ಕೆರಳಿ ಅವಳ ಮೇಲೆ ದಾಳಿ ಮಾಡಲು ಮುಂದಾಗಿದೆ. ಅಷ್ಟರಲ್ಲಿ ಇದನ್ನು ಗಮನಿಸಿದ ಚಿತ್ರ ತಂಡ ವಿದ್ಯಾಳನ್ನು ಪಕ್ಕಕ್ಕೆ ಎಳೆದು ಕೊಂಡು ಗೂಳಿಗಳನ್ನು ಹೊರಕ್ಕೆ ಅಟ್ಟಿದ್ದಾರೆ. ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ನಡೆದ ಈ ಘಟನೆಯಿಂದ ವಿದ್ಯಾ ಚಕಿತಳಾಗಿದ್ದಾಳೆ.

ವಿದ್ಯಾಳ ಮೇಲೆ ಎಂದಾದರೂ ಗೂಳಿಗಳು ದಾಳಿ ನಡೆಸುವುದು ಗ್ಯಾರಂಟಿ ಎಂದು ಸಹ ನಟರಾದ ಇಮ್ರಾನ್ ಹಶ್ಮಿ ಹಾಗೂ ತುಷಾರ್ ಕಪೂರ್ ರೇಗಿಸುತ್ತಿದ್ದದ್ದು ನಿಜವಾಗಿದೆ. ಗಾಬರಿಗೊಂಡ ವಿದ್ಯಾ ರೆಡ್ ಗೌನ್ ಎಸೆದು ತನ್ನ ಡೇರೆಗೆ ತೆರಳಿ ವಿಶ್ರಮಿಸಿದ್ದಾಳೆ ಎಂದು ಚಿತ್ರತಂಡದ ಮೂಲಗಳು ಹೇಳಿವೆ.

More from Filmibeat

English summary
Tressa Vidya Balan had a horrifying experience during the The Dirty Picture shooting in Ramoji Rao Film City Hyderabad. Vidya was wearing a red gown and two bulls tried to attack her. Luckily she escaped from attack
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X