ಐಶ್ವರ್ಯ-ಅಭಿಷೇಕ್ 'ಬೇಟಿ ಬಿ' ನೋಡಲು ಜನಸಾಗರ
ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಮಗಳು 'ಬೇಟಿ ಬಿ' ನೋಡಲು ಮುಂಬೈನ ಜಲ್ಸಾದಲ್ಲಿರುವ ಬಚ್ಚನ್ ಮನಗೆ ಜನಸಾಗರವೇ ಹರಿದುಬರುತ್ತಿದೆ. ಬಚ್ಚನ್ ಪರಿವಾದರ ಸಂಬಂಧಿಗಳು, ಹಿತೈಷಿಗಳು, ಐಶೂ ಕಡೆಯವರು ಹೀಗೆ ಬಹಳಷ್ಟು ಮಂದಿ ಐಶೂ ಮಗಳನ್ನು ನೋಡಿ ಆಶೀರ್ವದಿಸಿ ಹೋಗುತ್ತಿದ್ದಾರೆ.
ಬಚ್ಚನ್ ಕುಟುಂಬಕ್ಕೀಗ ಎರಡೆರಡು ಕೆಲಸ. ಚಿಕ್ಕ ಮಗುವನ್ನು ನೋಡಿಕೊಳ್ಳುವುದು ಒಂದಾದರೆ ಬಂದವರಿಗೆ ಮಗುವನ್ನು ತೋರಿಸಿ ಅವರನ್ನು ಉಪಚರಿಸುವುದು ಇನ್ನೊಂದು. ಈ ಎರಡೂ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾರೆ ಗೌರವಾನ್ವಿತ ಬಚ್ಚನ್ ಸದಸ್ಯರು.
ಜಗತ್ತಿನ ತುಂಬಾ ಇರುವ, ಅವರ ಹಾಗೂ ಮಗುವಿನ ಹಿತೈಷಿಗಳಿಗೆ ಬಿಗ್ ಬಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅವರ ಮಗುವಿನ ಹೆಸರನ್ನು ಹುಡುಕಲು ಸಹಾಯ ಮಾಡಿದ ಅಸಂಖ್ಯಾತ ಜನರಿಗೆ ಅಮಿತಾಬ್ ಚಿರಋಣಿ ಎಂದಿದ್ದಾರೆ. ಅಷ್ಟೊಂದು ಹೆಸರುಗಳಲ್ಲಿ ಯಾವುದನ್ನು ಫೈನಲ್ ಮಾಡುವುದೆಂಬ ಗೊಂದಲದಲ್ಲಿದೆ ಬಚ್ಚನ್ ಪರಿವಾರ. (ಏಜೆನ್ಸೀಸ್)
More from Filmibeat
English summary
Relatives and friends are swarming in hundreds to catch a glimpse of Aishwarya Rai Bachchan and Abhishek Bachchan's new-born daughter, Beti B.
ಐಶ್ವರ್ಯ ರೈ ಬಚ್ಚನ್ ಅಭಿಷೇಕ್ ಬಚ್ಚನ್ ಅಮಿತಾಬ್ ಬಚ್ಚನ್ aishwarya rai bachchan abhishek bachchan amitabh bachchan


Click it and Unblock the Notifications











