ಬಿಗ್ ಟ್ರಬಲ್ ನಲ್ಲಿ ಸಿಕ್ಕಿಕೊಂಡ ಐಶ್ವರ್ಯ ರೈ ಬಚ್ಚನ್

Aishwarya Rai
ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮಗಳೊಂದಿಗೆ ಹಾಯಾಗಿರಲೂ ಆಗುತ್ತಿಲ್ಲ. ಕಾರಣ ಮಗು ಹೆತ್ತು ಒಂದು ತಿಂಗಳಾಗುವ ಮೊದಲೇ ಐಶೂ ಬಚ್ಚನ್ ಮನೆಗೆ ಕಾಲ್ ಶೀಟ್ ಗಾಗಿ ಅತಿರಥಮಹಾರಥರ ಕಾಲುಗಳು ಚಲಿಸುತ್ತಿವೆ. ಸಂಜಯ್ ಲೀಲಾ ಬನ್ಸಾಲಿ, ಶಾರುಖ್ ಖಾನ್ ನಂತರ ಇದೀಗ ರಜನಿಕಾಂತ್ ಐಶೂಗೆ ಆಫರ್ ನೀಡಿದ್ದಾರೆ.

ರೋಬೋಟ್ ಚಿತ್ರದಲ್ಲಿ ರಜನಿ-ಐಶೂ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿದ್ದರು. ರೋಬೋಟ್ ಚಿತ್ರದ ನಂತರ ಅವರಿಬ್ಬರ ಸ್ಕ್ರೀನ್ ಕೆಮೆಸ್ಟ್ರಿ ಚೆನ್ನಾಗಿದೆಯೆಂದು ಎಲ್ಲರೂ ಮಾತನಾಡುವಂತಾಯ್ತು. ಹಾಗಾಗಿ, ರಜನಿ ತಮ್ಮ ಮುಂದಿನ ಅನಿಮೇಶನ್ ಚಿತ್ರ 'ಕೋಚಡಿಯಾನ್'ಗೆ ಐಶೂಗೆ ಆಫರ್ ನೀಡಿದ್ದಾರೆ. ಬಚ್ಚನ್ ಪರಿವಾರಕ್ಕೂ, ರಜನಿಕಾಂತ್ ಗೂ ಬಹಳ ಹಳೆಯ, ಆತ್ಮೀಯ ನಂಟು.

ಬಚ್ಚನ್ ಪರಿವಾರ ರಜನಿ ಆಫರ್ ತಿರಸ್ಕರಿಸುವುದು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ. ಆದರೆ ಹಸಿ ಬಾಣಂತಿ ಐಶೂ, ಡೇಟ್ ಯಾವಾಗ ಕೊಡುವುದೆಂಬ ಯೋಚನೆಯಲ್ಲಿ ಬಿದ್ದಿದ್ದಾರಂತೆ. ಕಾರಣ ಇದಕ್ಕೂ ಮೊದಲೇ ಸಾಕಷ್ಟು ಜನ ಐಶೂಗಾಗಿ ಕಾಯುತ್ತಿದ್ದಾರೆ, ಅವರಿಗೆ ಗೊಂದಲ ಗ್ಯಾರಂಟಿ. ಈಗ ಐಶೂ, 'ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮೂ...' ಅಂತ ಹಾಡುತ್ತಿದ್ದಾರೆಂದು ಸುದ್ದಿ. (ಏಜೆನ್ಸೀಸ್)

More from Filmibeat

English summary
Aishwarya Rai Bachchan acts in Super Star Rajinikanth's upcoming movie Kochadiyaan. She is reading for that. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X