ಐಶ್ವರ್ಯ ರೈ ಬೇಬಿ ನಾಮಕರಣಕ್ಕೆ ಭರ್ಜರಿ ಸಿದ್ಧತೆ

By Rajendra

ಐಶ್ವರ್ಯ ರೈ ಬೇಬಿ ನಾಮಕರಣಕ್ಕೆ ಭಾರಿ ಸಿದ್ಧತೆಗಳು ನಡೆಯುತ್ತಿವೆ. ಅಭಿಷೇಕ್ ಬಚ್ಚನ್ ಅವರಂತೂ ಈ ಬಗ್ಗೆ ಸಿಕ್ಕಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ತಮ್ಮ ಚೊಚ್ಚಲ ಮಗಳಿಗೆ ಏನು ಹೆಸರಿಡಬೇಕು ಎಂಬುದೇ ಅವರಿಗೆ ದೊಡ್ಡ ತಲೆನೋವಾಗಿದೆ. ಸೂಕ್ತ ಹೆಸರಿನ ಹುಡುಕಾಟದಲ್ಲಿ ಅವರು ಸಿಕ್ಕಪಟ್ಟೆ ಬಿಜಿಯಾಗಿದ್ದಾರೆ.

ತಮ್ಮ ಮಗಳಿಗೊಂದು ಸೂಕ್ತವಾದ ಹೆಸರನ್ನು ಸಜೆಸ್ಟ್ ಮಾಡಿ ಎಂದು ಅಭಿ ತಮ್ಮ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಅವರ ಕರೆಗೆ ಓಗೊಟ್ಟಿರುವ ಅಭಿಮಾನಿಗಳು ತಮಗೆ ತೋಚಿದ ಹೆಸರುಗಳನ್ನು ಸೂಚಿಸುತ್ತಿದ್ದಾರೆ. ಆದರೆ ಅಭಿಗೆ ಇನ್ನೂ ಯಾವ ಹೆಸರನ್ನೂ ಓಕೆ ಮಾಡಿಲ್ಲ.

ಅಭಿ ಟ್ವಿಟ್ಟರ್ ಖಾತೆಗೆ ಸಾಲು ಸಾಲು ಹೆಸರುಗಳು ರವಾನೆಯಾಗುತ್ತಿವೆ. ಅಭಿ ಒಂದಷ್ಟು ಹೆಸರುಗಳನ್ನು ಮನಸ್ಸಿನಲ್ಲೇ ಗುಣಾಕಾರ ಭಾಗಾಕಾರ ಹಾಕಿ ಎತ್ತಿಟ್ಟುಕೊಂಡಿದ್ದಾರೆ. ತಮ್ಮ ಮನೆಯವರೊಂದಿಗೆ ಮಾತನಾಡಿ ಅಂತಿಮವಾಗಿ ಹೆಸರನ್ನು ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಕಾಮೆಂಟ್ ಬಾಕ್ಸಲ್ಲಿ ಐಶ್ವರ್ಯ ರೈ ಮಗಳಿಗೆ ನೀವೂ ಯಾಕೆ ಒಂದು ಹೆಸರನ್ನು ಸೂಚಿಸಬಾರದು. (ಒನ್‌ಇಂಡಿಯಾ ಕನ್ನಡ)

More from Filmibeat

English summary
As fans eagerly wait for Beti B’s ’naam karan’, new B-town daddy Abhishek Bachchan is still struggling to finalise a name for his daughter. The Bachchan family welcomed the baby girl Nov 16. Since then Bachchan junior has asked fans to suggest names for the new member on a micro-blogging site.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X