ಭಾರತ ಪಾಕಿಸ್ತಾನ ಸೆಮಿ ಫೈನಲ್ ನೋಡಲು ಬಿಗ್ ಬಿ ಕಾತುರ
ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಮಿ ಫೈನಲ್ ಪಂದ್ಯ ನೋಡಲು ಈಗಾಗಲೆ ಬಾಲಿವುಡ್ ರಜೆ ಘೋಷಿಸಿದೆ. ಬುಧವಾರ (ಮಾ.30) ಬಾಲಿವುಡ್ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಮ್ಯಾಚ್‌ನ ಕ್ಷಣಕ್ಷಣದ ರೋಚಕ ದೃಶ್ಯಗಳನ್ನು ಸವಿಯಲು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೂಡ ತುದಿಗಾಲಲ್ಲಿ ನಿಂತಿದ್ದಾರೆ.
"ಪಾಕಿಸ್ತಾನ ನಮ್ಮ ನೆರೆಯ ರಾಷ್ಟ್ರ. ಉತ್ಸಾಹ ಕುಗ್ಗದಿರಲಿ ಹಾಗೂ ಇಬ್ಬರಲ್ಲೂ ಒಂದೇ ಎಂಬ ಭಾವನೆ ಇರಲಿ ಎಂದು ನಾವೆಲ್ಲಾ ಹಾರೈಸೋಣ" ಎಂದು ಅಮಿತಾಬ್ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ 68ರ ಇಳಿ ವಯಸ್ಸಿನಲ್ಲೂ ಮೋಹಾಲಿ ಪಂದ್ಯದ ಬಗ್ಗೆ ಅಮಿತಾಬ್ ನವ ಯುವಕನಂತೆ ವಿವರಗಳನ್ನು ಬರೆದಿದ್ದಾರೆ.
"ಗೆದ್ದವರು ಫೈನಲ್ ಪ್ರವೇಶಿಸುತ್ತಾರೆ. ಈ ಪಂದ್ಯದ ಬಗ್ಗೆ ಊಹಿಸಲೂ ಆಗದಷ್ಟು ಉನ್ಮಾದಕತೆ ಇದೆ. ಇಡೀ ದೇಶವೇ ಎದುರು ನೋಡುವಂತಹ ಪರಿಸ್ಥಿತಿ ನೆಲೆಗೊಂಡಿದೆ. ಪಂದ್ಯ ಆರಂಭವಾಗುವುದಕ್ಕೂ ಎಷ್ಟೋ ದಿನಗಳ ಮುಂಚೆಯೇ ಟಿಕೆಟ್‌ಗಳೆಲ್ಲಾ ಮಾರಾಟವಾಗಿವೆ. ಕ್ರಿಕೆಟ್ ಅಭಿಮಾನಿಗಳು ಟಿಕೆಟ್‌ಗಾಗಿ ಪರದಾಡುವಂತಾಗಿದೆ" ಎಂದಿದ್ದಾರೆ ಬಿಗ್ ಬಿ.


Click it and Unblock the Notifications











