ಅಮಿತಾಬ್ ಬಚ್ಚನ್ ಜೊತೆ ಊಟಕ್ಕೆ ಈ ಪಾಟಿ ದುಡ್ಡೇ

By Rajendra

ನಟನೊಬ್ಬನ ಜೊತೆ ಕೂತು ಹರಟೆ ಹೊಡೆಯುತ್ತಾ, ಅವರ ಚಿತ್ರಗಳ ಕುರಿತು ಪಟ್ಟಾಂಗ ಹೊಡೆಯುತ್ತಾ ಊಟ ಮಾಡುವುದೆಂದರೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ. ಅಂತಹ ಒಂದು ಸದವಕಾಶವನ್ನು ಬಿಗ್ ಬಿ ಅಮಿತಾಬ್ ಬಚ್ಚನ್ ಕಲ್ಪಿಸಿದ್ದಾರೆ. ಸುಮ್ಮನೆ ಊಟಕ್ಕೆ ಬನ್ನಿ ಎಂದರೆ ಏನ್ ಮಜಾ ಇರುತ್ತೆ. ತನ್ನ ಜೊತೆ ಮಧ್ಯಾಹ್ನದ ಊಟ ಮಾಡುವ ಅವಕಾಶವನ್ನು ಹರಾಜಿಗಿಟ್ಟರು.

ಆಗ ಶುರುವಾಯಿತು ನೋಡಿ ನಿಜವಾದ ಅಭಿಮಾನಿಗಳ ನಡುವೆ ಪೈಪೋಟಿ. ನಿನಗಿಂತ ನಾನೇನು ಕಮ್ಮಿ ಎಂದು ಅಭಿಮಾನಿಗಳು ಹರಾಜು ಕೂಗುತ್ತಾ ಹೋದರು. ಕಡೆಗೆ ಹರಾಜು ಮೊತ್ತ ರು.6 ಲಕ್ಷಕ್ಕೆ ಬಂದು ನಿಂತಿದೆ. ಒಂದು ಹೊತ್ತಿನ ಊಟಕ್ಕೆ ಈ ಪಾಟಿ ಹಣವೇ? ಎಂದು ಹುಬ್ಬೇರಿಸುವಂತಾಗಿದೆ.

ಆನ್ ಲೈನ್ ಮಾರುಕಟ್ಟೆ ಇ ಬೇಯಲ್ಲಿ ರು.1001ಕ್ಕೆ ಆರಂಭವಾದ ಹರಾಜು ಒಂದೇ ಗಂಟೆಯಲ್ಲಿ ರು.6 ಲಕ್ಷಕ್ಕೆ ಏರಿಕೆಯಾಯಿತು. ಬಿಡ್ಡಿಂಗ್ ಮೊತ್ತ್ತದಲ್ಲಿ ಬಿಗ್ ಬಿ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮತ್ತು ಖಿಲಾಡಿ ಅಕ್ಷಯ್ ಕುಮಾರ್ ಅವರನ್ನು ಹಿಂದಿಕ್ಕಿದ್ದಾರೆ. ಅಕ್ಷಯ್ ಜೊತೆ ಬೆಳಗಿನ ಉಪಹಾರ ಇಷ್ಟರ ತನಕ ರು.4.52 ಲಕ್ಷಕ್ಕೆ ಹರಾಜಾಗಿದೆ.

ನಮ್ಮ ದೇಶದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಲಕ್ಷಾಂತರ ಜನ ಪರದಾಡುತ್ತಿದ್ದಾರೆ. ಬಿಗ್ ಬಿ ಜೊತೆ ಒಂದು ಹೊತ್ತಿನ ಊಟ ಮಾಡಲು ಇಷ್ಟು ಹಣವೇ? ಎಂದು ಮೂಗು ಮುರಿಯಬೇಡಿ, ಕೊಂಚ ತಾಳಿ. ಹರಾಜಿನಿಂದ ಬಂದ ಹಣವನ್ನು ಬಿಗ್ ಬಿ ತಮ್ಮ ಸ್ವಂತಕ್ಕೆ ಬಳಕೆ ಮಾಡುತ್ತಿಲ್ಲ. ಈ ಹಣವನ್ನು ಸಮಾಜ ಸೇವೆಗೆ ಮುಡಿಪಾಗಿಡಲಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X