For Quick Alerts
  ALLOW NOTIFICATIONS  
  For Daily Alerts

  ಆಸ್ಟ್ರಿಯಾದ ಪೀಟರ್ ಹಾಗ್ ಕೈಹಿಡಿದ ಸೆಲೀನಾ ಜೇಟ್ಲಿ

  By Rajendra
  |

  ಸದ್ದುಗದ್ದಲವಿಲ್ಲದಂತೆ ಬಾಲಿವುಡ್ ಬೆಡಗಿ ಸೆಲೀನಾ ಜೇಟ್ಲಿ ಮದುವೆ ನಡೆದುಹೋಗಿದೆ. ತಮ್ಮ ಮದುವೆ ಸುದ್ದಿಯನ್ನು ಸೆಲೀನಾ ಟ್ವೀಟ್ ಮಾಡುವ ಮೂಲಕ ಬಹಿರಂಗಗೊಳಿಸಿದ್ದಾರೆ. ದುಬೈ ಮೂಲಕ ಹೋಟೇಲ್ ಉದ್ಯಮಿ ಪೀಟರ್ ಹಾಗ್ ಕೈಹಿಡಿದಿರುವುದಾಗಿ ಸೆಲೀನಾ ತಿಳಿಸಿದ್ದಾರೆ.

  ಕೆಲ ದಿನಗಳಿಂದ ಸೆಲೀನಾ ಮದುವೆ ಸುದ್ದಿ ಬಾಲಿವುಡ್‌ನಲ್ಲಿ ಒಂದು ಸುತ್ತು ಹಾಕಿಕೊಂಡು ಗಾಂಧಿನಗರದಲ್ಲೂ ಸುತ್ತುತ್ತಿತ್ತು. ಈಗ ಇಬ್ಬರು ಹಾರ ಬದಲಾಯಿಸಿಕೊಳ್ಳುವ ಮೂಲಕ ಸುದ್ದಿ ನಿಜವಾಗಿದೆ. ಒಂದು ತಿಂಗಳ ಹಿಂದೆಯೇ ಇವರಿಬ್ಬರ ಮದುವೆ ರಹಸ್ಯವಾಗಿ ನಡೆದಿದೆ. ಈ ಬಗ್ಗೆ ಸೆಲೀನಾ ಟ್ವ್ವೀಟ್ ಕೂಡ ಮಾಡಿದ್ದರು, "ಪೀಟರ್ ಹಾಗ್ ಕೈಹಿಡಿಯುತ್ತಿದ್ದೇನೆ. ನಿಮ್ಮ ಆಶೀರ್ವಾದ ಬೇಕು." ಎಂದಿದ್ದರು.

  ಮದುವೆ ಫೋಟೋದಲ್ಲಿ ಪೀಟರ್ ಹಾಗ್ ಜೊತೆ ಸೆಲೀನಾ ಹಾಗೂ ಆಕೆಯ ಸಹೋದರರನ್ನೂ ಕಾಣಬಹುದು. ಕನ್ನಡದಲ್ಲಿ ಸೆಲೀನಾ ಅಭಿನಯದ ಕೊನೆಯ ಚಿತ್ರ ಶ್ರೀಮತಿ. ಉಪೇಂದ್ರ ನಾಯಕನಾಗಿದ್ದ ಚಿತ್ರ ಇದು. ಈ ಚಿತ್ರದಲ್ಲಿ ಉಪೇಂದ್ರ ಅವರ ಶ್ರೀಮತಿ ಪ್ರಿಯಾಂಕಾ ಕೂಡ ಅಭಿನಯಿಸಿದ್ದರು. (ದಟ್ಸ್‌‍ಕನ್ನಡ ಸಿನಿವಾರ್ತೆ)

  English summary
  Celina Jaitly finally broke the news of her marriage to Dubai-based hotelier Peter Haag on Twitter over the weekend. The rumour mill was already doing the rounds regarding the impending union for some time now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X