ಶಾರುಖ್ ಗೆ ಲಂಡನ್ ವಿವಿಯ ಗೌರವ ಡಾಕ್ಟರೇಟ್
ಲಂಡನ್ ನ ಪ್ರತಿಷ್ಠಿತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗೆ ಬಾಲಿವುಡ್ ನಟ ಶಾರುಖ್ ಖಾನ್ ಪಾತ್ರರಾಗಿದ್ದಾರೆ. ಕಲೆ ಮತ್ತು ಸಂಸ್ಕೃತಿಗೆ ಸಲ್ಲಿಸಿದ ಸೇವೆಗಾಗಿ ಬಾಲಿವುಡ್ ನ ಸೂಪರ್ ಸ್ಟಾರ್ ಗೆ ಲಂಡನ್ ನ ಬೆಡ್ ಫೋರ್ಡ್ ಶೈರ್ ವಿಶ್ವವಿದ್ಯಾಲಯ ಈಗೌರವ ಡಾಕ್ಟರೇಟನ್ನು ನೀಡುತ್ತಿದೆ.
'Routes To Roots' ಎಂಬ ಲಾಭಾಪೇಕ್ಷೆ ಇಲ್ಲದ ಸಂಸ್ಥೆ ಗೌರವ ಡಾಕ್ಟರೇಟ್ ಗೆ ಶಾರುಖ್ ರನ್ನು ನಾಮ ನಿರ್ದೇಶನ ಮಾಡಿತ್ತು. ಈ ಸ್ವತಂತ್ರ ಸಂಸ್ಥೆ ಜನ ಮತ್ತು ಸಂಸ್ಕೃತಿಗಳನ್ನು ಸಾರ್ಕ್ ದೇಶಗಳಲ್ಲಿ ಒಂದುಗೂಡಿಸುವ ಕೆಲಸವನ್ನು ಮಾಡುತ್ತಿದೆ. ನೈಸರ್ಗಿಕ ವಿಕೋಪಗಳ ಸಂಭವಿಸಿದಾಗ ಧರ್ಮಾರ್ಥ ಸಂಸ್ಥೆಗಳಿಗೆ ಶಾರುಖ್ ಸದಾ ಮುಂದಿರುತ್ತಾರೆ ಎಂದು ರೂಟ್ಸ್ ಟು ರೂಟ್ಸ್ ಸಂಸ್ಥೆ ಬಣ್ಣಿಸಿದೆ.
ತಮಗೆ ಗೌರವ ಡಾಕ್ಟರೇಟ್ ದೊರೆತ ಬಗ್ಗೆ ಶಾರುಖ್ ಪ್ರತಿಕ್ರಿಯಿಸುತ್ತಾ, ಯುಕೆಯ ಬೆಡ್ ಫೋರ್ಡ್ ಶೈರ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗೆ ರೂಟ್ಸ್ ಟು ರೂಟ್ಸ್ ಸಂಸ್ಥೆ ನನ್ನನ್ನು ನಾಮ ನಿರ್ದೇಶನ ಮಾಡಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಗೌರವ ಡಾಕ್ಟರೇಟನ್ನು ಸ್ವೀಕರಿಸಲು ಜುಲೈ 10 ರಂದು ಲಂಡನ್ ಗೆ ತೆರಳುತ್ತಿರುವುದಾಗಿ ಶಾರುಖ್ ತಿಳಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











