»   » ಕರೀನಾ 'ಹೀರೋಯಿನ್' ಕತೆ ಗೋವಿಂದ ಗೋವಿಂದ

ಕರೀನಾ 'ಹೀರೋಯಿನ್' ಕತೆ ಗೋವಿಂದ ಗೋವಿಂದ

Posted By:
Subscribe to Filmibeat Kannada

ಇನ್ನೇನು ಎಲ್ಲಾ ಸುಸೂತ್ರವಾಗಿ ಆರಂಭವಾಗುತ್ತದೆ ಎಂದಿದ್ದ 'ಹೀರೋಯಿನ್' ಚಿತ್ರಕ್ಕೆ ಮತ್ತೊಂದು ವಿಘ್ನ ಎದುರಾಗಿದೆ. ಐಶ್ವರ್ಯ ರೈ ಪ್ರೆಗ್ನೆಂಟ್ ಆಗುವ ಮೂಲಕ ಮಧುರ್ ಭಂಡಾರಕರ್ ಅವರ ಈ ಚಿತ್ರ ನೆನೆಗುದಿಗೆ ಬಿದ್ದಿತ್ತು. ಬಳಿಕ ಈ ಚಿತ್ರಕ್ಕೆ ಕರೀನಾ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದರು. ಈಗ ಕರೀನಾ ಕೂಡ ಚಿತ್ರಕ್ಕೆ ಕೈಯೆತ್ತುವ ಸೂಚನೆಗಳು ಢಾಳಾಗಿ ಗೋಚರಿಸುತ್ತಿವೆ.

ಕರೀನಾಗಾಗಿ ಮಧುರ್ ಭಂಡರಕರ್ ಹೊಸ ಹೊಸ ವಿನ್ಯಾಸ ವಸ್ತ್ರಗಳನ್ನು ಸಿದ್ಧಪಡಿಸಿದ್ದರು. ಈ ಚಿತ್ರದ ಕೊಂಚ ಭಾಗದ ಚಿತ್ರೀಕರಣವೂ ನಡೆದಿತ್ತು. ಮುಂದಿನ ಹಂತದ ಚಿತ್ರೀಕರಣ ಫೆಬ್ರವರಿಯಲ್ಲಿ ಆರಂಭಿಸಿ ಏಪ್ರಿಲ್ ಒಳಗೆ ಮುಗಿಸಲು ಮಧುರ್ ಭಂಡಾರಕರ್ ಪ್ಲಾನ್ ಹಾಕಿದ್ದರು.

ಆದರೆ ಅವರ ಪ್ಲಾನೆಲ್ಲಾ ಉಲ್ಟಾಪಲ್ಟಾ ಆಗುವ ಸೂಚನೆಗಳಿವೆ. ಕರೀನಾ, ಸೈಫ್ ಆಲಿಖಾನ್ ಮದುವೆಗೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದು. ಇದರಿಂದ ಹೀರೋಯಿನ್ ನಿರ್ದೇಶಕ ಮಧುರ ಭಂಡಾರಕರ್‌ಗೆ ಮತ್ತೆ ತಲೆನೋವು ಎದುರಾಗಿದೆ.

ಮಾರ್ಚ್‌ ಒಳಗೆ ಸ್ವಲ್ಪ ಚಿತ್ರೀಕರಣ ಮುಗಿಸಿ, ಮೇ ನಂತರ ಚಿತ್ರೀಕರಣ ಮುಂದುವರೆಸೋಣ ಎಂದುಕೊಂಡಿದ್ದಾರೆ. "ಕರೀನಾ ಮದುವೆಯ ಕಾರಣ ಕೆಲವ ಬದಲಾವಣೆಗಳನ್ನು ಮಾಡಿಕೊಂಡಿರುವುದು ನಿಜ. ಮಾರ್ಚ್ ಕೊನೆಯ ವಾರದಲ್ಲಿ ವಿವಾಹ ನಡೆಯಲಿದೆ" ಎಂದಿದೆ ಚಿತ್ರತಂಡ. (ಏಜೆನ್ಸೀಸ್)

English summary
The shooting of Bollywood movie Heroine starring Kareena Kapoor, Arjun Rampal, Randeep Hooda and Shahana Goswami may be stalled says bollywood sources. Because Kareena getting ready for marriage with her buea Sai Ali Khan. The actress is all set to tie the knot in 2nd January.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada