ಬೂಮ್ ನಲ್ಲಿ ಬಿಕಿನಿ, ಧೂಮ್ ನಲ್ಲಿ ಏಕಿಲ್ಲ ಕತ್ರೀನಾ?
ಈಗ ಕಾಲ ಬದಲಾಗಿದೆ, ಆಕೆ ವಿಶ್ವದ ಅತ್ಯಂತ ಸೆಕ್ಸಿ ಮಹಿಳೆ ಪಟ್ಟವನ್ನು ಮೂರು ಬಾರಿ ಪಡೆದಿರಬಹುದು ಆದರೆ, ಬಿಕಿನಿ ತೊಡು ಎಂದರೆ ನಾ ಒಲ್ಲೆ ಎಂದು ಮುದುರಿಕೊಳ್ಳುತ್ತಿದ್ದಾಳೆ. ಬಿಕಿನಿ ತೊಡದಿದ್ದರೆ ಚಿತ್ರದಿಂದಲೇ ಗೇಟ್ ಪಾಸ್ ಪಡೆಯುವ ನಿರ್ಧಾರದಲ್ಲಿದ್ದಾರೆ ಆಂಗ್ಲೋ ಇಂಡಿಯನ್ ಬ್ಯೂಟಿ ಕತ್ರೀನಾ ಕೈಫ್.
ಯಶ್ ರಾಜ್ ಬ್ಯಾನರ್ ನ ಧೂಮ್ ಸರಣಿಯ ಮೂರನೇ ಚಿತ್ರದಲ್ಲಿ ಕನಿಷ್ಠ ಎರಡು ದೃಶ್ಯಗಳಲ್ಲಿ ಕತ್ರೀನಾ ಬಿಕಿನಿ ತೊಡಬೇಕಾಗುತ್ತದೆ. ಈ ದೃಶ್ಯಗಳು ಕಥೆಗೆ ಪೂರಕವಾಗಿದ್ದು, ಅತ್ಯಾವಶ್ಯಕವಾಗಿದೆ ಎನ್ನಲಾಗಿದೆ. 2003ರಲ್ಲಿ ಬಾಲಿವುಡ್ ಗೆ ಕಾಲಿಟ್ಟ ಕೈಫ್ "ಬೂಮ್" ಚಿತ್ರದಲ್ಲಿ ಬಿಕಿನಿ ತೊಟ್ಟು ಮೆರೆದಿದ್ದಳು. ಆನಂತರ ಟೂ ಪೀಸ್ ಸೀನ್ ಎಂದರೆ ನೋ ನೋ ಎನ್ನುತ್ತಿದ್ದಾಳೆ
ಧೂಮ್ ಸರಣಿಯಲ್ಲಿ ತನ್ನ ನಾಯಕಿಯರಿಗೆ ಅತಿ ಕಡಿಮೆ ಉಡುಪು ಧರಿಸುವಂತೆ ಮಾಡುವಲ್ಲಿ ಯಶ್ ರಾಜ್ ಬ್ಯಾನರ್ ಈ ವರೆಗೂ ಯಶಸ್ವಿಯಾಗಿದೆ. ಬಿಪ್ಸ್, ಐಶ್ ಕೂಡಾ ಮೈ ಚಳಿ ಬಿಟ್ಟು ಕುಣಿದಿದ್ದು ಈಗ ಇತಿಹಾಸ. ಕೈಫ್ ಗೋಸ್ಕರ ಸ್ಕ್ರಿಪ್ಟ್ ಬದಲಿಸುವ ಸಾಧ್ಯತೆ ಕಮ್ಮಿ. ಬಿಕಿನಿ ತೊಟ್ಟರೂ ಮಾದಕವಾಗಿ ಮಾತ್ರ ತೋರಿಸಲಾಗುವುದು, ಅಶ್ಲೀಲತೆ ಇರುವುದಿಲ್ಲ ಎಂದು ಕೈಫ್ ಅನ್ನು ಚಿತ್ರತಂಡ ಫುಸಲಾಯಿಸುತ್ತಿದೆ.
ಜೀರೋ ಫಿಗರ್ ಆದ ಕರೀನಾ, ಕಂಬಕ್ತ್ ಇಷ್ಕ್ ನಲ್ಲಿ ದೋಸ್ತಾನಾದಲ್ಲಿ ಪ್ರಿಯಾಂಕಾ ಛೋಪ್ರಾ ಬಿಕಿನಿ ಧರಿಸಿದ್ದು ಚಿತ್ರಕ್ಕೆ ಅಷ್ಟೇನೂ ಸಹಾಯವಾಗದಿದ್ದರೂ ಪಡ್ಡೆಗಳ ನಿದ್ದೆ ಕೆಡಿಸಿತ್ತು. ಆದರೆ, ಕತ್ರೀನಾ ಯಾಕೆ ಈ ರೀತಿ ಹಠ ಮಾಡುತ್ತಿದ್ದಾಳೆ ಅಂಥಾ ಬಾಲಿವುಡ್ ಮಂದಿ ತಲೆಕೆಡಿಸಿಕೊಂಡಿದ್ದಾರೆ.
ಹೀಗೆ ಆದರೆ, ಧೂಮ್ 3 ತಂಡದಿಂದ ಕೈಫ್ ಬದಲಿಗೆ ಹೊಸ ಹುಡುಗಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಬಹುಶಃ ಕೈಫ್ ಳ ವಿಚಿತ್ರ ಪ್ರೇಮಿ ಸಲ್ಮಾನ್ ಎಂದೋ ಹಾಕಿದ್ದ ಫತ್ವಾವನ್ನು ಕತ್ರೀನಾ ಇಂದಿಗೂ ಪಾಲಿಸುತ್ತಿದ್ದಾಳೆ ಎನ್ನಿಸುತ್ತದೆ.


Click it and Unblock the Notifications











