ಮುನ್ನಾಭಾಯಿ ಆಸ್ತಿ ಮುಟ್ಟುಗೋಲಿಗೆ ಆದೇಶ

By Rajendra

"ನಾಯಕ್ ನಹೀ ಖಳ ನಾಯಕ್ ಹೂ ಮೈ" ಎಂದು ಬಾಲಿವುಡ್ ನಿರ್ಮಾಪಕ ಶಕೀಲ್ ನೂರಾನಿ ಅವರಿಗೆ ಬಾಲಿವುಡ್‌ನ ಮುನ್ನಾಭಾಯಿ ಸಂಜಯ್ ದತ್ ಅಪಾರ ಪ್ರಮಾಣದ ನಷ್ಟ ತಂದೊಡ್ಡಿದ್ದಾರೆ. ಈ ಸಂಬಂಧ ಸಂಜಯ್ ದತ್ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಮುಂಬೈ ಹೈಕೋರ್ಟ್ ಆದೇಶ ನೀಡಿದೆ. ಸುದ್ದಿ ವಿವರಗಳು ಹೀಗಿವೆ...

ಸದಾ ಒಂದಲ್ಲೊಂದು ವಿವಾದಗಳಿಂದ ಸುದ್ದಿಯಾಗಿರುವ ಸಂಜಯ್, ಚಿತ್ರ ನಿರ್ಮಾಪಕರೊಬ್ಬರಿಗೆ ವಂಚಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಸಿದಂತೆ ಸಂಜಯ್ ದತ್ ಅವರ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕುವಂತೆ ಆದೇಶ ನೀಡಿ ಕೋರ್ಟ್ ವಾರಂಟ್ ಜಾರಿ ಮಾಡಿದೆ.

2002 ರಲ್ಲಿ 'ಜಾನ್ ಕಿ ಬಾಜಿ' ಎಂಬ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದ ತಮಗೆ ಚಿತ್ರದಲ್ಲಿ ನಟಿಸುವುದಾಗಿ ಹೇಳಿ ಸಂಜಯ್ ವಂಚಿಸಿದ್ದಾರೆ. ಇದರಿಂದ ತಮಗೆ ಅಪಾರ ಪ್ರಮಾಣದ ಹಣ ನಷ್ಟವಾಗಿದೆ ಎಂದು ನಿರ್ಮಾಪಕ ಶಕೀಲ್ ನೂರಾನಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ಬಾಂಬೆ ಹೈಕೋರ್ಟ್ ಸಂಜಯ್ ದತ್ ಆಸ್ತಿ ಮುಟ್ಟುಗೋಲಿಗೆ ಆದೇಶ ನೀಡಿದೆ. ಆದರೆ ಸಂಜಯ್, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಗುವ ಇರಾದೆ ವ್ಯಕ್ತ ಪಡಿಸಿದ್ದಾರೆ.[ಸಂಜಯ್ ದತ್]

More from Filmibeat

English summary
Sanjay Dutt was given a notice by the Mumbai High court to pay a compensation of Rs.2.03 crores to producer Shakeel Noorani for leaving his film in the half way. When the actor did not response. The sheriff attached the actor’s property in Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X