For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ರಾಣಿಗೆ ಆದಿತ್ಯ ಜತೆ ಗಟ್ಟಿಮೇಳ ಗ್ಯಾರಂಟಿ

  |

  ಹಿಂದೊಮ್ಮೆ ಬಾಲಿವುಡ್ ಟಾಪ್ ನಾಯಕಿಯರ ಸಾಲಿನಲ್ಲಿದ್ದು ಇದೀಗ ಮರೆಯಾಗುತ್ತಿರುವ ನಾಯಕಿ ರಾಣಿ ಮುಖರ್ಜಿ ಮದುವೆ ಆಗುವ ಸಂಭವ ಹೆಚ್ಚಿದೆ. ಬಹಳ ಕಾಲಗಳಿಂದ ಸ್ನೇಹಿತರಾಗಿರುವ ರಾಣಿ ಮುಖರ್ಜಿ ಮತ್ತು ಆದಿತ್ಯ ಚೋಪ್ರಾ ಜೋಡಿ ಸದ್ಯದಲ್ಲೇ ಮದುವೆ ಬಂಧನಕ್ಕೆ ಒಳಗಾಗಿ ಸತಿ-ಪತಿಗಳಾಗಲಿದ್ದಾರೆ. ಹೀಗೊಂದು ಸುದ್ದಿ ಬಾಲಿವುಡ್ ಅಂಗಳದಿಂದ ಬಂದಿದೆ.

  ನಿರ್ಮಾಪಕ ಯಶ್ ಚೋಪ್ರಾ ಮಗ, ಹಾಗೂ ಬಾಲಿವುಡ್ ಚಿತ್ರಗಳ ನಿರ್ಮಾಪಕ ಆದಿತ್ಯ ಚೋಪ್ರಾ ಜೊತೆ ನಟಿ ರಾಣಿಯ ಮದುವೆ ಬಹಳ ಹಿಂದೆಯೇ ನಡೆಯಬೇಕಿತ್ತು. ಆದರೆ ಎರಡೂ ಕುಟುಂಬಗಳೂ ಮದುವೆಯನ್ನು ಮುಂದೂಡುತ್ತಲೇ ಬಂದಿದ್ದವು. ಇದೀಗ ಚೋಪ್ರಾ ಕುಟುಂಬ ಒಂದು ಹೆಜ್ಜೆ ಮುಂದಿಟ್ಟಿದೆ.

  ಅಂದರೆ, ಮದುವೆಯ ಬಗ್ಗೆ ರಾಣಿ ಕುಟುಂಬದ ಜೊತೆ ತಾನೇ ಮುಂದಾಗಿ ಮಾತುಕತೆ ನಡೆಸಿದೆ. ಒಂದು ಹಂತ ಮುಂದಕ್ಕೆ ತಲುಪಿರುವ ಅವರಿಬ್ಬರ ಮದುವೆ ವಿಷಯಕ್ಕೆ ಇದೀಗ ದಿನಾಂಕ ನಿಗದಿಯಾಗುವುದೊಂದೇ ಬಾಕಿ ಎನ್ನಲಾಗುತ್ತಿದೆ. ಸದ್ಯಕ್ಕೆ ರಾಣಿ ಅಮೀರ್ ಖಾನ್ ಜೊತೆ 'ತಲಾಶ್' ಚಿತ್ರೀಕರಣದಲ್ಲಿದ್ದಾರೆ. ಬಳಿಕ ಮದುವೆ ನಡೆಯಲಿದೆ. (ಏಜೆನ್ಸೀಸ್)

  English summary
  Actress Rani Mukherjee, who was rumored to have a relationship with filmmaker Aditya Chopra, may soon announce her marriage.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X