twitter
    For Quick Alerts
    ALLOW NOTIFICATIONS  
    For Daily Alerts

    'ಸೂಪರ್ 30' ಸಿನಿಮಾಗೆ ಟ್ಯಾಕ್ಸ್ ಫ್ರೀ ನೀಡಿದ ಮೂರು ರಾಜ್ಯಗಳು

    |

    ಹೃತಿಕ್ ರೋಷನ್ ನಟನೆಯ 'ಸೂಪರ್ 30' ಸಿನಿಮಾಗೆ ದೊಡ್ಡ ಬೆಂಬಲ ಸಿಕ್ಕಿದೆ. ಮೂರು ರಾಜ್ಯಗಳಲ್ಲಿ ಸಿನಿಮಾಗೆ ಟ್ಯಾಕ್ಸ್ ಫ್ರೀ ನೀಡಲಾಗಿದೆ.

    ರಾಜಸ್ಥಾನ, ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಸಿನಿಮಾಗೆ ಯಾವುದೇ ತೆರಿಗೆಯನ್ನು ಹಾಕುತ್ತಿಲ್ಲ. ಮೊದಲು ಬಿಹಾರದಲ್ಲಿ ಬಂದ ಈ ನಿಯಮ ಬಳಿಕ ಇನ್ನು ಎರಡು ರಾಜ್ಯಗಳಲ್ಲಿ ಬಂದಿದೆ. ಚಿತ್ರಕ್ಕೆ ತೆರಿಗೆ ರಹಿತ ನೀಡಿದ ರಾಜ್ಯಗಳಿಗೆ ನಟ ಹೃತಿಕ್ ರೋಷನ್ ಧನ್ಯವಾದ ತಿಳಿಸಿದ್ದಾರೆ.

    'ಸೂಪರ್ 30' : ಹೃತ್ತಿಕ್ ನಟನೆಯೇ ಜೀವ... ಕಥೆಯೇ ದೈವ.. 'ಸೂಪರ್ 30' : ಹೃತ್ತಿಕ್ ನಟನೆಯೇ ಜೀವ... ಕಥೆಯೇ ದೈವ..

    'ಸೂಪರ್ 30' ಸಿನಿಮಾ ಖ್ಯಾತ ಗಣಿತಜ್ಞ ಆನಂದ್ ಕುಮಾರ್ ಅವರ ಜೀವನದ ಯಶೋಗಾಥೆ. ಇಂತಹ ಕಥೆ ಎಷ್ಟೊ ಜನರಿಗೆ ಸ್ಫೂರ್ತಿ ನೀಡುವ ರೀತಿಯಲ್ಲಿ ಇದೆ. ಈ ಕಾರಣಕ್ಕೆ ಒಂದು ಒಳ್ಳೆಯ ಸಿನಿಮಾಗೆ ಈ ಮೂರು ರಾಜ್ಯಗಳು ಸಹಾಯ ಮಾಡಿದೆ.

    3 states made tax free for Super 30 hindi movie

    ಆನಂದ್ ಕುಮಾರ್ ಕಥೆಯ ಜೊತೆಗೆ ಸದ್ಯದ ಶಿಕ್ಷಣ ವ್ಯವಸ್ಠೆಯನ್ನು ಸೇರಿಸಿ ಸಿನಿಮಾದಲ್ಲಿ ತೋರಿಸಲಾಗಿದೆ. ಹೃತಿಕ್ ರೋಷನ್ ಅದ್ಭುತ ನಟನೆ ಚಿತ್ರದ ದೊಡ್ಡ ಹೈಲೈಟ್. ಅವರ ಕೆರಿಯರ್ ನಲ್ಲಿ ಬರುವ ಬೆಸ್ಟ್ ಸಿನಿಮಾಗಳ ಪೈಕಿ ಇದು ಒಂದಾಗಿದೆ.

    'ಸೂಪರ್ 30' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿಯೂ ಒಳ್ಳೆಯ ಗಳಿಕೆ ಮಾಡುತ್ತಿದೆ. ಸದ್ಯ, ಸಿನಿಮಾ 100 ಕೋಟಿ ಗಳಿಕೆ ಮಾಡಿ ಮುನ್ನುಗುತ್ತಿದೆ. 'ಕಬೀರ್ ಸಿಂಗ್' ಹಾಗೂ 'ಲಯನ್ ಕಿಂಗ್' ಚಿತ್ರಗಳು 'ಸೂಪರ್ 30'ಗೆ ದೊಡ್ಡ ಸ್ಪರ್ಧೆ ನೀಡುತ್ತಿವೆ.

    3 states made tax free for Super 30 hindi movie

    'ಕ್ವೀನ್' ಸಿನಿಮಾ ನೀಡಿದ ವಿಕಾಸ್ ಬಹ್ಲ್ ಮತ್ತೊಂದು ಹಿಟ್ ಸಿನಿಮಾ ನೀಡಿದ್ದಾರೆ. 'ಸೂಪರ್ 30'ಯ ಪ್ರತಿ ದೃಶ್ಯವೂ ಚೆನ್ನಾಗಿದೆ. ಈ ಸಿನಿಮಾಗೆ ಅವರಿಗೆ ದೊಡ್ಡ ಹೆಸರು ನೀಡಿದೆ.

    English summary
    Bihar, Rajastan and Uttara Pradesh states made tax free for 'Super 30' movie. Bollywood suprstar Hrithik Roshan starrer 'Super 30' movie is a biopic of indian mathematician Anand Kumar
    Monday, July 22, 2019, 16:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X