ಯುಎಸ್‌ನಲ್ಲಿ ಶಾಪಿಂಗ್ ಮಾಲ್ ತೆರೆದ ಮಾಧುರಿ ದೀಕ್ಷಿತ್

By Rajendra

ಇದು ಧಕ್ ಧಕ್ ಬೆಡಗಿಯ ಝಣ ಝಣ ಸುದ್ದಿ. ಬಾಲಿವುಡ್ ತಾರೆ ಮಾಧುರಿ ದೀಕ್ಷಿತ್ ಯುಎಸ್‌ನಲ್ಲಿ ಕೋಟ್ಯಾಂತರ ಬಂಡವಾಳ ಹೂಡಿರುವ ಅಂಶ ಬೆಳಕಿಗೆ ಬಂದಿದೆ. ಫ್ಲೋರಿಡಾದಲ್ಲಿ ಮಿಲಿಯಾಂತರ ಡಾಲರ್ ಬೆಲೆಬಾಳುವ ಶಾಪಿಂಗ್ ಮಾಲನ್ನು ತನ್ನದಾಗಿಸಿಕೊಂಡಿರುವ ವಿಷಯ ಈಗ ಬಾಲಿವುಡ್‌ನ ಹುಬ್ಬೇರಿಸಿದೆ.

ವಾಣಿಜ್ಯ ಚಟುವಟಿಕೆಗಳ ಆಯಕಟ್ಟಿನ ಜಾಗವಾದ ಡೌನ್‌ಟೌನ್ ಮಿಯಾಮಿಯಲ್ಲಿ ಶಾಪಿಂಗ್ ಮಾಲ್ ಖರೀದಿಸಿರುವುದಾಗಿ ಸುದ್ದಿ. ಕೇವಲ ಬಂಡವಾಳ ಹೂಡಿರುವ ಮಾಧುರಿ, ಶಾಪಿಂಗ್ ಮಾಲ್‌ನಲ್ಲಿ ಯಾವುದೇ ಬ್ಯುಸಿನೆಸ್ ಮಾಡುತ್ತಿಲ್ಲ ಎನ್ನಲಾಗಿದೆ. ಇದಕ್ಕಾಗಿ ಬ್ಯಾಂಕ್ ಸಾಲವನ್ನೂ ಪಡೆದಿರುವ ಆಕೆ ಲಾಭದ ದಿಶೆಯಲ್ಲಿ ಕೊಂಡೊಯ್ಯ್ಯವ ಉದ್ದೇಶವನ್ನು ಹೊಂದಿದ್ದಾರೆಎನ್ನುತ್ತವೆ ಮೂಲಗಳು.

ಗುಟ್ಟಾಗಿ ಮಾಡುತ್ತಿರುವ ಈ ವ್ಯವಹಾರವನ್ನು ಮೂರನೆ ಕಣ್ಣಿಗೆ ಗೊತ್ತಗದಂತೆ ಮಾಧುರಿ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಆಕೆಯ ಪತಿ ಡಾ.ಶ್ರೀರಾಮ್ ಬೆಂಬಲವೂ ಇದೆಯಂತೆ. ಸದ್ಯಕ್ಕೆ ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿರುವ ಮಾಧುರಿ ಈ ವಿಷಯವನ್ನು ಯಾರಿಗೂ ತಿಳಿಸದಂತೆ ತನ್ನ ಮ್ಯಾನೇಜರ್‌ಗೂ ತಾಕೀತು ಮಾಡಿದ್ದಾರಂತೆ. "ಭಾರತದಲ್ಲಾಗಲಿ ಯುಎಸ್‌‍ನಲ್ಲಾಗಿ ಮಾಧುರಿ ಯಾವುದೇ ಶಾಪಿಂಗ್ ಮಾಲ್ ಖರೀದಿಸಿಲ್ಲ" ಎಂದು ಆಕೆಯ ಮ್ಯಾನೇಜರ್ ಕೂಡ ಅದನ್ನೇ ಒತ್ತಿ ಹೇಳಿದ್ದಾರೆ. (ಏಜೆನ್ಸೀಸ್)

More from Filmibeat

English summary
The industry is abuzz with the news that Madhuri Dixit has invested in a mega property in the US. An insider swears that the dhak dhak actress has bought a mall in Florida worth millions of dollars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X