ಬಾಲಿವುಡ್ ತಾರೆ ಐಶ್ವರ್ಯ ರೈ ಮ್ಯಾನೇಜರ್ ರಾಜೀನಾಮೆ

By Rajendra

ಬಾಲಿವುಡ್ ತಾರೆ ಐಶ್ವರ್ಯ ರೈ ಅವರ ಬಲುಕಾಲದ ಅಂತಾರಾಷ್ಟ್ರೀಯ ಮ್ಯಾನೇಜರ್ ಸೈಮನ್ ಶಫೀಲ್ಡ್ ಅವರು ರಾಜೀನಾಮೆ ಪತ್ರ ಕೊಟ್ಟು ಹೊರನಡೆದಿದ್ದಾರೆ. ಸರಿಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಅವರು ಐಶ್ವರ್ಯ ರೈ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಇಷ್ಟು ಸುದೀರ್ಘ ಸಮಯ ಕಾರ್ಯನಿರ್ವಹಿಸಿದ ಈತ ಇದ್ದಕ್ಕಿಂದ್ದಂತೆ ಕೆಲಸ ಬಿಟ್ಟಿದ್ದು ಏಕೆ?

ಸೈಮನ್ ಕೆಲಸ ಬಿಡಲು ಸೂಕ್ತವಾದ ಕಾರಣ ಕೊಡದಿದ್ದರೂ, ತನ್ನೊಂದಿಗಿನ ವ್ಯವಹಾರಿಕ ಒಪ್ಪಂದಗಳನ್ನು ಐಶ್ವರ್ಯ ರೈ ಹಂತಹಂತವಾಗಿ ಕಡಿಮೆ ಮಾಡಿಕೊಂಡಿದ್ದೇ ಕಾರಣ ಎನ್ನಲಾಗಿದೆ. ಎನ್‌ಡಿ ಟಿವಿಯೊಂದಿಗೆ ಮಾತನಾಡುತ್ತಿದ್ದ ಅವರು, "ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅವರನ್ನು ಪರಿಚಯಿಸಿದ ಬಳಿಕ ವ್ಯವಹಾರಿಕವಾಗಿ ನಮ್ಮಿಬ್ಬರ ಟೈಮ್ ತುಂಬಾ ಚೆನ್ನಾಗಿತ್ತು. ಮುಂದೆಯೂ ಹಾಗೆಯೇ ಇರಲಿ ಎಂದು ಹಾರೈಸುತ್ತಿದ್ದೇನೆ " ಎಂದಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಐಶ್ವರ್ಯ ರೈ ಅವರ ಯುಎಸ್ ವ್ಯವಹಾರಗಳನ್ನು ಸೈಮನ್ ನಿಭಾಯಿಸುತ್ತಿದ್ದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಕೆ ಹೆಸರು ಜಾಲ್ತಿಗೆ ಬರುವಂತೆ ಮಾಡಿದ ಖ್ಯಾತಿ ಸೈಮನ್ ಅವರಿಗೆ ಸಲ್ಲುತ್ತದೆ. ಲೋರೆಲ್ ಸೌಂದರ್ಯ ವರ್ಧಕಗಳ ರಾಯಭಾರಿ; ಸಿಕ್ಸ್‌‍ಟಿ ಮಿನಿಟ್ಸ್ ಹಾಗೂ ಅರ್ಫನ್ ವಿನ್‌ಫ್ರೇ ಶೋಗಳಲ್ಲಿ ಭಾಗವಹಿಸಲು; ಜಗತ್ಪ್ರಸಿದ್ಧ ನಿಯತಕಾಲಿಕೆ ಟೈಮ್‌ ಮುಖಪುಟ ಅಲಂಕರಿಸಲು ಸಾಧ್ಯವಾಗಿದ್ದು ಸೈಮನ್ ಸತತ ಪ್ರಯತ್ನಗಳಿಂದಲೆ.

ಸೈಮನ್ ಅವರ ಅಂತಾರಾಷ್ಟ್ರೀಯ ಸಂಪರ್ಕಗಳು ಐಶ್ವರ್ಯ ರೈ ಅವರು ಪ್ರಪ್ರಥಮ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಕಾರಣವಾಯಿತು. ಪಿಂಕ್ ಪಾಂಥರ್ 2, ದಿ ಲಾಸ್ಟ್ ಲೆಜಿಯನ್, ಬ್ರೈಡ್ ಅಂಡ್ ಪ್ರೆಜ್ಯುಡೀಸ್, ಮಿಸ್ಟ್ರೆಸ್ ಆಫ್ ಸ್ಪೈಸಸ್ ಹಾಗೂ ಪ್ರೊವೋಕ್ಡ್‌‍ನಂತಹ ಹಾಲಿವುಡ್ ಚಿತ್ರಗಳ ಕಾಲ್‌ಶೀಟ್ ಸಿಕ್ಕಿದ್ದು ಸೈಮನ್ ಅವರ ಬುದ್ಧಿವಂತಿಕೆಗೆ ಸಾಕ್ಷಿ.

More from Filmibeat

English summary
Bollywood actress Aishwarya Rai Bachchan's international manager Simone Sheffield has parted ways with her after a decade. Sheffield did not give any reason for the split between the two and just informed that she is terminating their business relationship.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X