twitter
    For Quick Alerts
    ALLOW NOTIFICATIONS  
    For Daily Alerts

    ತ್ರಿಡಿಯಲ್ಲಿ ಬರಲಿದೆ ಸೈನ್ಸ್ ಫಿಕ್ಷನ್ ಮಿಸ್ಟರ್ ಇಂಡಿಯಾ

    By Rajendra
    |

    ಹದಿನೈದು ವರ್ಷಗಳ ಹಿಂದೆ ಬಂತಂತಹ 'ಟೈಟಾನಿಕ್' ಚಿತ್ರವನ್ನು ತ್ರಿಡಿಯಲ್ಲಿ ತೋರಿಸಿ ಪ್ರೇಕ್ಷಕರನ್ನು ಮತ್ತೊಮ್ಮೆ ಮಂತ್ರಮುಗ್ಧಗೊಳಿಸಿದ್ದಾರೆ ಜೇಮ್ಸ್ ಕ್ಯಾಮೆರಾನ್. ಟೈಟಾನಿಕ್ ತ್ರಿಡಿ ಚಿತ್ರಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಬಾಲಿವುಡ್ ನಿರ್ದೇಶಕರನ್ನು ಚಿಂತನೆಗೆ ಹಚ್ಚಿದೆ.

    ಈಗವರು 1987ರಲ್ಲಿ ತೆರೆಕಂಡಿದ್ದ 'ಮಿಸ್ಟರ್ ಇಂಡಿಯಾ' ಚಿತ್ರವನ್ನು ತ್ರಿಡಿಗೆ ತರಲು ಮುಂದಾಗಿದ್ದಾರೆ. "ಹವಾ ಹವಾಯಿ..." ಎಂದು ಅನಿಲ್ ಕಪೂರ್, ಶ್ರೀದೇವಿ ಅಭಿನಯಿಸಿದ್ದ ಈ ಚಿತ್ರಕ್ಕೆ ಶೇಖರ್ ಕಪೂರ್ ಆಕ್ಷನ್ ಕಟ್ ಹೇಳಿದ್ದರು. 'ಮೊಗಾಂಬೋ' ಪಾತ್ರದಲ್ಲಿ ಅಮ್ರೀಷ್ ಪುರಿ ಅಮೋಘ ಅಭಿನಯ ನೀಡಿದ್ದರು. ಏತನ್ಮಧ್ಯೆ ಈ ಚಿತ್ರದ ಎರಡನೇ ಭಾಗವನ್ನು ತೆಗೆಯಲು ನಿರ್ಮಾಪಕ ಬೋನಿ ಕಪೂರ್ ನಿರ್ಧರಿಸಿದ್ದರು.

    ಈಗ ತ್ರಿಡಿಗೆ ಬದಲಾಯಿಸಲು ಮುಂದಾಗಿರುವುದಾಗಿ ಬೋನಿ ಕಪೂರ್ ತಿಳಿಸಿದ್ದಾರೆ. ಬಹುಶಃ ಮುಂದಿನ ವರ್ಷದಿಂದ ತ್ರಿಡಿ ಕೆಲಸ ಆರಂಭವಾಗಿ 2014ಕ್ಕೆ 'ಮಿಸ್ಟರ್ ಇಂಡಿಯಾ' ಚಿತ್ರ ಪ್ರೇಕ್ಷಕರ ಮುಂದೆ ಬರಬಹುದು. ಆ ಬಳಿಕವಷ್ಟೇ ಭಾಗ ಎರಡನ್ನು ಕೈಗೆತ್ತಿಕೊಳ್ಳುವುದಾಗಿ ಬೋನಿ ತಿಳಿಸಿದ್ದಾರೆ. (ಏಜೆನ್ಸೀಸ್)

    English summary
    Hindi science fiction superhero film Mr. India (1987) directed by Shekhar Kapur is going 3D. It stars Anil Kapoor in the title role, Sridevi as his romantic interest and Amrish Puri in one of his best-known roles as the villain Mogambo.
    Monday, April 30, 2012, 15:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X