ನಾಲ್ಕೇ ವರ್ಷಕ್ಕೆ ಮುರಿದು ಬಿತ್ತು ಸೂಪರ್ ಸ್ಟಾರ್‌ನ ದಾಂಪತ್ಯ, ₹30 ಕೋಟಿ ಜೀವನಾಂಶ ಕೇಳಿದ ಪತ್ನಿ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಅಕ್ಷರಶಃ ಪಾಲನೆಯಾಗುತ್ತಿತ್ತು. ಎಷ್ಟೇ ಸಮಸ್ಯೆ ಇದ್ದರೂ.. ಭಿನ್ನಾಭಿಪ್ರಾಯ ಇದ್ದರೂ ಕೂಡ ದಾಂಪತ್ಯದಲ್ಲಿ ಮನವೊಲಿಸಿ.. ಕಾಳಜಿ ತೋರಿಸಿ.. ಕ್ಷಮೆಯನ್ನು ಕೇಳಿ... ದಾಂಪತ್ಯದ ಬಂಡಿಯನ್ನು ಎಳೆಯುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ.ಬದಲಾದ ಈ ಕಾಲದಲ್ಲಿ..
ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಗಾದೆ ಮಾತಿಗೆ ಮಾತ್ರ ಸೀಮಿತವಾಗಿದೆ. ಉಂಡು ಮಲಗಿದ ನಂತರ ಕೂಡ ಮೂಡಿದ ಬಿರುಕು ಇನ್ನೂ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ 6 ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿಯೇ 1 ಲಕ್ಷ 95 ಸಾವಿರಕ್ಕೂ ಅಧಿಕ ಜನ ವಿಚ್ಛೇದನದ ಪ್ರಕರಣಗಳು ವರದಿಯಾಗಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇನ್ನೂ.. ಬಣ್ಣದ ಲೋಕದಲ್ಲಿ ಕೂಡ ಡಿವೋರ್ಸ್ ಈಗೀಗ ತುಂಬಾನೇ ಮಾಮೂಲಿ ಎನ್ನುವಂತಾಗಿದೆ. ಹಲವಾರು ತಾರೆಯರು ತಮ್ಮ ಸಂಬಂಧ ಕಡಿದುಕೊಳ್ಳುತ್ತಿದ್ದಾರೆ. ಆ ಪೈಕಿ ಕೆಲವರು ಗೌರವಯುತವಾಗಿ ದೂರವಾದರೆ ಮತ್ತೂ ಕೆಲವರು ರಂಪ ರಾಮಾಯಣ ಮಾಡಿಕೊಳ್ಳುತ್ತಾರೆ. ನಾಲ್ಕು ಗೋಡೆಗಳ ನಡುವೆ ಬಗೆಹರಿಯಬೇಕಾದ ವಿಚಾರವನ್ನು ಬೀದಿಗೆ ತರುತ್ತಾರೆ. ತಮ್ಮ ಈ ನಡತೆಯಿಂದ ನೋಡುಗರಿಗೆ ಆಹಾರವೂ ಆಗುತ್ತಾರೆ. ಉದಾಹರಣೆಗೆ ಪವನ್ ಸಿಂಗ್ ಅವರ ದಾಂಪತ್ಯ ಜೀವನವನ್ನೇ ತೆಗೆದುಕೊಳ್ಳಿ.
ಹೌದು. ಪವನ್ ಸಿಂಗ್ ಭೋಜ್‌ಪುರಿಯ ಪವರ್ ಸ್ಟಾರ್. ''ಪ್ರತಿಗ್ಯಾ''.. ''ಸತ್ಯ''.. ''ಗದ್ದಾರ್''.. ''ವಾಟೆಂಡ್''.. ''ಭೋಜ್‌ಪುರಿಯಾ ರಾಜಾ''.. ಹೀಗೆ ಹಲವು ಚಿತ್ರಗಳ ಮೂಲಕ ಉತ್ತರ ಪ್ರದೇಶ ಮತ್ತು ಬಿಹಾರದ ಸುತ್ತ ಮುತ್ತ ಜನರ ಹೃದಯ ಗೆದ್ದ ಪವನ್ ಸಿಂಗ್ ರಾಜಕಾರಣಿ ಕೂಡ ಹೌದು.
ಇಂಥಾ ಪವನ್ ಸಿಂಗ್ 2018ರಲ್ಲಿ ಜ್ಯೋತಿ ಸಿಂಗ್ ಅವರನ್ನು ಮದುವೆಯಾಗಿದ್ದರು. ಆದರೆ ಈ ಸಂಬಂಧ ಕೇವಲ ನಾಲ್ಕೇ ವರ್ಷಕ್ಕೆ ಹಳಸಿತ್ತು. 2022ರಿಂದ ಶುರುವಾದ ಇವರ ದಾಂಪತ್ಯದ ಕಲಹ ಇವತ್ತಿನವರೆಗೆ ಮುಂದುವರೆದಿದೆ. ಎರಡು ಬಾರಿ ಬಲವಂತದಿಂದ ಗರ್ಭಪಾತ ಮಾಡಿಸಿದ್ದಾರೆ ಎಂಬ ಆರೋಪದಿಂದ ಹಿಡಿದು ಪವನ್ ಸಿಂಗ್ ಅವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನ ಮಾಡಿರುವದಾಗಿನವರೆಗೆ ಹಲವು ಆರೋಪಗಳನ್ನು ಜ್ಯೋತಿ ಸಿಂಗ್ ತಮ್ಮ ಪತಿ ಪವನ್ ಸಿಂಗ್ ಅವರ ಮೇಲೆ ಮಾಡಿದ್ದಾರೆ.
ಇನ್ನು ಬಿಹಾರದಲ್ಲಿ ಈಗ ಚುನಾವಣೆಯ ಸಮಯ. ಈ ಸಮಯದಲ್ಲಿ ಪವನ್ ಸಿಂಗ್ ಅವರ ಈ ವ್ಯೆಯಕ್ತಿಕ ವಿಚಾರ ಬಿಜೆಪಿ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆ ಪವನ್ ಸಿಂಗ್ ರಾಜಕೀಯ ಭವಿಷ್ಯವನ್ನು ಸರ್ವನಾಶ ಮಾಡುವ ಉದ್ದೇಶದಿಂದಲೇ ಜ್ಯೋತಿ ಸಿಂಗ್ ಸಾಲು ಸಾಲು ಆರೋಪ ಮಾಡುತ್ತಿದ್ದಾರೆ ಎನ್ನುವ ಮಾತು ಕೂಡ ಸದ್ಯ ಕೇಳಿ ಬರುತ್ತಿದೆ.ಇದಕ್ಕೆ ಪೂರಕವಾಗಿ ಈ ಬಾರಿ ಜ್ಯೋತಿ ಸಿಂಗ್ ರಾಜಕೀಯದ ಅಖಾಡಕ್ಕೆ ಇಳಿಯುತ್ತಿದ್ದಾರೆ. ಪವನ್ ಸಿಂಗ್ ಅವರ ಕ್ಷೇತ್ರವಾದ ಬಿಹಾರದ ಕಾರಕಾಟ್ ಮೇಲೆ ಜ್ಯೋತಿ ಸಿಂಗ್ ಕಣ್ಣಿಟ್ಟಿದ್ದಾರೆ. ರಾಜಕೀಯದ ಚಾಣಕ್ಯ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾಗಿದ್ಧಾರೆ.

ಇದರ ನಡುವೆ ಇದೀಗ ಇಬ್ಬರು ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಪತಿಯಿಂದ ದೂರವಾಗಲು ಜ್ಯೋತಿ ಸಿಂಗ್ 30 ಕೋಟಿ ಜೀವನಾಂಶದ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಪವನ್ ಸಿಂಗ್ ಅವರ ವಕೀಲರು ಹೇಳಿದ್ದಾರೆ. ಆರಂಭದಲ್ಲಿ 5 ಕೋಟಿಯನ್ನು ಕೇಳಿದ್ದ ಜ್ಯೋತಿ ಸಿಂಗ್ ಈಗ ಏಕಾಏಕಿ ಜೀವನಾಂಶದ ಮೊತ್ತವನ್ನು ಹೆಚ್ಚಿಸಿದ್ದಾರೆ, ಹೆಚ್ಚಿನ ಹಣಕ್ಕೆ ಬೇಡಿಕೆ ಇಡ್ತಿದ್ದಾರೆ ಎಂದು ಹೇಳಿರುವ ಪವನ್ ಸಿಂಗ್ ವಕೀಲರು ಪವನ್ ಸಿಂಗ್ ಅವರ ಆದಾಯ ಮತ್ತು ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ನ್ಯಾಯಾಲಯ ತೀರ್ಪು ನೀಡಲಿದೆ ಎಂದು ಹೇಳಿದ್ಧಾರೆ.


Click it and Unblock the Notifications











