'ಬಾಡಿಗಾರ್ಡ್' ಸಲ್ಮಾನ್ ಖಾನ್ ಮೇಲೆ FIR

By Mahesh

ಬಾಲಿವುಡ್ ನಟ ಸಲ್ಮಾನ್ ಖಾನ್ ಹೆಜ್ಜೆ ಇಟ್ಟೆಡೆಯೆಲ್ಲಾ ಏನಾದರೂ ಕಿರಿಕ್ ಗ್ಯಾರಂಟಿ. ದೇಶದಲ್ಲಿ ಅಣ್ಣಾ ಹಜಾರೆ ಹವಾ ಹೆಚ್ಚಾಗಿದ್ದ ಕಾಲದಲ್ಲಿ ಸುಮ್ಮ ಸುಮ್ಮನೆ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದರು.

ಈಗ ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಹಾಗೂ ಅವರ ಬಾಡಿಗಾರ್ಡ್ ಶೇರಾ ಹಾಗೂ ಐವರ ಮೇಲೆ ಕಾನ್ ಪುರದ ಪೊಲೀಸರು FIR ದಾಖಲಿಸಿದ್ದಾರೆ.

ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತ ಒಮೆಂದ್ರ ಭರತ್ ಎಂಬವರ ಮೇಲೆ ಹಲ್ಲೆ ನಡೆಸಿದ ಆರೋಪವನ್ನು ಬಾಲಿವುಡ್ ನಟ ಸಲ್ಮಾನ್ ಮೇಲೆ ಹೊರೆಸಲಾಗಿದೆ. ಈ ಬಗ್ಗೆ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಕಡೆಯೊ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.

ಜನ್ ರಾಜ್ಯಪಾರ್ಟಿಯ ಕಾರ್ಯದರ್ಶಿಯಾಗಿರುವ ಒಮೇಂದ್ರ ಐಐಟಿಯ ಹಳೆ ವಿದ್ಯಾರ್ಥಿಯಾಗಿದ್ದು, ಕಾನ್ ಪುರಕ್ಕೆ ಬಂದಿದ್ದ ಸಲ್ಮಾನ್ ರನ್ನು ತಡೆದು ಅಣ್ಣಾ ಹಜಾರೆ ಬಗ್ಗೆ ಹೇಳಿಕೆ ನೀಡುವಂತೆ ಆಗ್ರಹಿಸಿದ್ದರು.

ಈ ಸಂದರ್ಭದಲ್ಲಿ ಕಾರಿನೊಳಗೆ ಹೋದ ಸಲ್ಮಾನ್ ಗೆ ಗಾಂಧಿ ಟೋಪಿ ನೀಡಿ, ನಮ್ಮ ಜೊತೆ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಕಾರ್ಯಕರ್ತರು ಕೇಳಿಕೊಂಡರು. ಈ ಸಮಯದಲ್ಲಿ ಸಲ್ಮಾನ್ ಖಾನ್ ಅಂಗರಕ್ಷಕರು ಕಾರ್ಯಕರ್ತರನ್ನು ಹಿಗ್ಗಾಮುಗ್ಗಾ ಥಳಿಸಿ ದೂರಕ್ಕೆ ಓಡಿಸಿದರು.

More from Filmibeat

English summary
The police have filed an FIR against the Bollywood actor Salman Khan, his bodyguard Shera and five others at the Kakadeo police station. They are alleged for assaulting Omendra Bharat, an anti-corruption activist.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X