ಕಾಳ ಸರ್ಪಕ್ಕೆ ನಾಗಕನ್ಯೆ ಮಲ್ಲಿಕಾ ಶೆರಾವತ್ ಫ್ರೆಂಚ್ ಕಿಸ್!
ಹೆಡೆ ಬಿಚ್ಚಿ ಬುಸುಗುಟ್ಟುತ್ತಿರುವ ಕಾಳ ಸರ್ಪದ ತಲೆಯನ್ನು ಚುಂಬಿಸಲು ಸಾಧ್ಯವೆ? ಒಂದು ವೇಳೆ ಚುಂಬಿಸಬೇಕು ಎಂದರೆ ಅವರಿಗೆ ಎರಡು ಗುಂಡಿಗೆ ಇರಬೇಕು. ಅದೇ ಹಾವಿಗೆ ಫ್ರೆಂಚ್ ಕಿಸ್ ಕೊಡುವುದೆಂದರೆ ಹೇಗಿರುತ್ತೇ ಹೇಳಿ? ಅಂತಹ ಒಂದು ಅದ್ಭುತ ಸಾಹಸವನ್ನು ಬಾಲಿವುಡ್ ನಟಿ ಮಲ್ಲಿಕಾ ಶರಾವತ್ ಮಾಡಿ ತೋರಿಸಿದ್ದಾರೆ 'ಹಿಸ್' ಚಿತ್ರದಲ್ಲಿ.
ಆರಂಭದಲ್ಲಿ ಹಾವನ್ನು ಚುಂಬಿಸಲು ಮಲ್ಲಿಕಾ ಶೆರಾವತ್ ಬಿಲ್ ಕುಲ್ ಎಂದರೂ ಒಪ್ಪಲಿಲ್ಲವಂತೆ. ಬಳಿಕ ಆ ಸನ್ನಿವೇಶದ ಮಹತ್ವವನ್ನು ನಿರ್ದೇಶಕ ಜೆನ್ನಿಫರ್ ಲಿಂಚ್ ಇಂಚು ಇಂಚಾಗಿ ಹೇಳಿದ ಬಳಿಕ ಒಲ್ಲದ ಮನಸ್ಸಿನಿಂದಲೇ ಓಕೆ ಎಂದರಂತೆ! ಹಲವಾರು ಪ್ರಯತ್ನಗಳ ಬಳಿಕ ಜೀವಂತ ಹಾವಿಗೆ ಫ್ರೆಂಚ್ ಕಿಚ್ ಕೊಡಲು ಸಾಧ್ಯವಾಯಿತಂತೆ.
" ಈ ಹಿಂದೆ ನಾನು ಹಲವಾರು ಚುಂಬನ ದೃಶ್ಯಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಹಾವಿನ ಜೊತೆ ಸರಸವಾಡುತ್ತಾ ಚುಂಬಿಸುತ್ತಿರುವುದು. ಈಗ ನೀನೊಬ್ಬಳು ನಾಗಕನ್ಯೆ ಎಂಬುದು ನೆನಪಿರಲಿ ಎಂದು ನಿರ್ದೇಶಕರು ಪದೇ ಪದೇ ಎಚ್ಚರಿಸುತ್ತಿದ್ದರು. ಕಡೆಗೂ ಹಾವನ್ನು ಚುಂಬಿಸುವಲ್ಲಿ ಯಶಸ್ವಿಯಾದೆ " ಎಂದಿದ್ದಾರೆ ಮಲ್ಲಿಕಾ ಶೆರಾವತ್.
ಬಾಲಿವುಡ್ ಚಿತ್ರಗಳಲ್ಲಿ ಹೀಗೆ ಹಾವೊಂದನ್ನು ತುಟಿಗೆ ತುಟಿಗೆ ಕೊಟ್ಟು ಚುಂಬಿಸುತ್ತಿರುವುದು ಇದೇ ಮೊದಲು. ಆ ಮಟ್ಟಿಗೆ ಈ ಚಿತ್ರ ದಾಖಲೆ ಎಂದೇ ಹೇಳಬೇಕು. 'ಹಿಸ್' ಯಾವಾಗ ಬಿಡುಗಡೆಯಾಗುತ್ತದೋ ಎಂದು ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಅಕ್ಟೋಬರ್ 22ರ ತನಕ ಕಾಯಿರಿ, ನಿಮ್ಮ ಎಲ್ಲ ಕುತೂಹಲ, ಕಾತುರಗಳಿಗೆ ತೆರೆ ಬೀಳಲಿದೆ ಎನ್ನುತ್ತಾರೆ ನಿರ್ದೇಶಕರು.


Click it and Unblock the Notifications











