ಬಾಲಿವುಡ್‌ಗೆ ಉಪೇಂದ್ರ ಪತ್ನಿ ಪ್ರಿಯಾಂಕಾ ಎಂಟ್ರಿ

By Rajendra

ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮಿಥುನ್ ಚಕ್ರವರ್ತಿ ನಿರ್ಮಿಸುತ್ತಿರುವ 'ಎನಿಮಿ' ಚಿತ್ರದಲ್ಲಿ ಪ್ರಿಯಾಂಕಾ ಅಭಿನಯಿಸಲಿದ್ದಾರೆ. ಇದೆಲ್ಲಾ ದಿಢೀರ್ ಎಂದು ನಡೆದುಹೋಗಿದೆ ಎಂದು ಪ್ರಿಯಾಂಕಾ ಪ್ರತಿಕ್ರಿಯಿಸಿದ್ದಾರೆ.

ಅಚಾನಕ್ಕಾಗಿ ಹೈದರಾಬಾದಿನಲ್ಲಿ ಮಿಥುನ್ ಚಕ್ರವರ್ತಿಯನ್ನು ಉಪೇಂದ್ರ ಭೇಟಿ ಮಾಡಿದ್ದರಂತೆ. ಬಳಿಕ ಅದೂ ಇದೂ ಮಾತುಕತೆ ನಡೆದು ಪ್ರಿಯಾಂಕಾ ಈಗೇನು ಮಾಡುತ್ತಿದ್ದಾರೆ ಎಂದು ಕೇಳಿ, ಕೂಡಲೆ ಬಾಲಿವುಡ್ ಚಿತ್ರದ ಆಫರ್ ಕೊಟ್ಟಿದ್ದಾರೆ.

ಪ್ರಿಯಾಂಕಾ ಅವರು ಈ ಚಿತ್ರದಲ್ಲಿ ಸುನಿಲ್ ಶೆಟ್ಟಿ ಪತ್ನಿಯಾಗಿ ಅಭಿನಯಿಸಲಿದ್ದಾರೆ. ಹಿಂದಿ ಭಾಷೆಯ ಮೇಲೆ ಪ್ರಿಯಾಂಕಾ ಅವರಿಗೆ ಹಿಡಿತ ಇರುವ ಕಾರಣ ಈ ಆಫರ್ ಬಂದಿದೆ. ಹಿಂದಿ ಚಿತ್ರದಲ್ಲಿ ಅಭಿನಯಿಸುವ ಆತ್ಮವಿಶ್ವಾಸವನ್ನು ಪ್ರಿಯಾಂಕಾ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಪ್ರಿಯಾಂಕಾ ಅವರು ಹಿಂದಿಯ ಬಡಾ ದಿನ್, ಸೌತೇಲಾ, ಮುಜೆ ಮೇರಿ ಬೀವಿ ಸೆ ಬಚಾವೋ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಶು ತ್ರಿಖಾ ನಿರ್ದೇಶನದ ಚಿತ್ರದಲ್ಲಿ ಜಾನಿ ಲೀವರ್, ಮಹಾಕ್ಷಯ್ ಚಕ್ರವರ್ತಿ ಮುಂತಾದವರ ತಾರಾಬಳಗವಿದೆ. (ಏಜೆನ್ಸೀಸ್)

More from Filmibeat

English summary
Actress and the wife of Real Star Upendra, Priyanka Upendra, who made her comeback with Shrimathi, is flying to Bollywood! The H20 star has signed forthcoming Hindi movie Enemmy, which is produced by Mithun Chakraborty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X