ಡರ್ಟಿ 'ವಿದ್ಯಾ ಬಾಲನ್' ಮಾದಕ ಮೈಮಾಟದ ಸೀಕ್ರೆಟ್
ವಿದ್ಯಾ ಬಾಲನ್ ಮೈಮಾಟಕ್ಕೆ ಈಗ ಮಾರುಹೋಗದವರಿಲ್ಲ. ಅದರಲ್ಲೂ 'ದಿ ಡರ್ಟಿ ಪಿಕ್ಚರ್' ಚಿತ್ರದ ಮುಹೂರ್ತದ ನಂತರವಂತೂ ವಿದ್ಯಾ ಪಡ್ಡೆಗಳ ಪಾಲಿನ ಮೃಷ್ಟಾನ್ನ ಬೋಜನ. ವಿದ್ಯಾ ನಟನೆಯ ಚಿತ್ರ 'ದಿ ಡರ್ಟಿ ಪಿಕ್ಚರ್' ಸದ್ಯದಲ್ಲೇ ತೆರೆಗೆ ಬರಲಿದೆ. ನಟಿ ಸಿಲ್ಕ್ ಸ್ಮಿತಾ ಜೀವನ ಕಥೆಯನ್ನು ಆಧರಿಸಿ ಮಾಡಿದ ಈ ಚಿತ್ರದಲ್ಲಿ ವಿದ್ಯಾ ಅತ್ಯಂತ ಮಾದಕವಾಗಿ ಕಾಣಿಸಿಕೊಂಡಿದ್ದಾರೆ.
ಡೀಪ್ ನೆಕ್ ಹಾಗೂ ಸಾಕಷ್ಟು ವಿಶೇಷ ವಿನ್ಯಾಸಗಳಿರುವ ಬಟ್ಟೆಯನ್ನು ಈ ಚಿತ್ರದಲ್ಲಿ ಧರಿಸಿರುವ ವಿದ್ಯಾ, ತುಂಬಾ ಗ್ಲಾಮರಸ್ ಆಗಿ ಕಾಣಿಸುತ್ತಾರೆ. ಈಗಾಗಲೇ ಪ್ರಚಾರ ಮೂಲಕ ಸಿನಿಮಾ ತುಣುಕುಗಳನ್ನು ನೋಡಿರುವ ಪ್ರೇಕ್ಷಕರು, ವಿದ್ಯಾರನ್ನು ತೆರೆಯ ಮೇಲೆ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
ಆದರೆ ದಿ ಡರ್ಟಿ ಚಿತ್ರದಲ್ಲಿ ಕಾಣುವ ವಿದ್ಯಾ ದೇಹಸಿರಿ ನಿಜವಾದುದೇ? ಆ ಚಿತ್ರಕ್ಕೆ ವಿದ್ಯಾಗೆ ವಸ್ತ್ರ ವಿನ್ಯಾಸಕಿ ಆಗಿದ್ದ ನಿಹಾರಿಕಾ ಖಾನ್ ಹೇಳುತ್ತಾರೆ, "ಅಲ್ಲವೇ ಅಲ್ಲ. ಗ್ಲಾಮರಸ್ ಆಗಿ ಕಾಣಲು ವಿದ್ಯಾರ ದೇಹದ ಉಬ್ಬ-ತಗ್ಗುಗಳಿಗೆ ವಿಶೇಷ ವಿನ್ಯಾಸದ ಪ್ಯಾಡ್ ಬಳಸಲಾಗಿದೆ. ಸಿನಿಮಾದಲ್ಲಿ ಕಾಣಲಿರುವ ಮಾದಕ ಮೈಮಾಟ ಒರಿಜಿನಲ್ ಅಲ್ಲ." ಆದರೂ ಪ್ರೇಕ್ಷಕರು ಎಲ್ಲಾದರೂ ಚೂರು ವಿದ್ಯಾರ 'ಒರಿಜಿನಲ್' ನಿಜದರ್ಶನ ಆಗಬಹುದೆಂದು ಕಾಯಬಹುದು. (ಏಜೆನ್ಸೀಸ್)


Click it and Unblock the Notifications











