For Quick Alerts
  ALLOW NOTIFICATIONS  
  For Daily Alerts

  ಶುಭ ಶುಕ್ರವಾರ ವಿವೇಕ, ಪ್ರಿಯಾಂಕ ಶುಭವಿವಾಹ

  By Mahesh
  |

  ಮಂಗಳೂರಿನ 'ರೈ' ಸಿಗದಿದ್ದರೇನಂತೆ 'ಆಳ್ವಾ' ಸಿಕ್ಕಲಲ್ಲ ಎಂಬ ಖುಷಿ ಒಬೆರಾಯ್ ಮುಖದಲ್ಲಿ ಮನೆ ಮಾಡಿತ್ತು. 'ಕಡಲ ದಾಟಿ ಬಂದ ಕುದುರೆ ಏರಿಬಂದ. .. . ಚೆಲುವ ರಾಜಕುಮಾರ' ಎಂಬ ಹಾಡಿನ ನೈಜ ರೂಪ ಕಾಣಸಿಗುತ್ತಿತ್ತು. ಅ.30ರಂದು ಮದುವೆಯ 'ಬಾರಾತ್' ಗೂ ಮುನ್ನ ಮರ್ಸಿಡೆಸ್ ಬೆಂಜ್ ನಲ್ಲಿ ಪೋಷಕರೊಡನೆ ಸಂಜೆ 6 ಕ್ಕೆ ಹೋಟೆಲ್ ಛಾನ್ಸರಿಗೆ ಬಂದಿಳಿದ ವಿವೇಕ್ ಗೆ ಬಾಜಾ ಭಜಂತ್ರಿಗಳ ಭರ್ಜರಿ ಸ್ವಾಗತ ದೊರೆಯಿತು. ಪಂಜಾಬಿ ಶೇರ್ವಾನಿ ಧರಿಸಿದ್ದ 34 ವರ್ಷದ ವಿವೇಕ್ ಕುದುರೆ ಏರಿ ನಾಗಾವಾರದ ಲುಂಬಿನಿ ಗಾರ್ಡ್ ಬಳಿ ಇರುವ ಆಳ್ವಾಸ್ ಫಾರ್ಮ್ ಹೌಸ್ ನ ಮದುವೆ ಮಂಟಪದೆಡೆಗೆ ಸಾಗಿದರು.

  ಜೆಡಿ(ಯು) ಮುಖಂಡ ದಿ.ಜೀವರಾಜ್ ಆಳ್ವ, ನಂದಿನಿ ಆಳ್ವ ಅವರ ಪುತ್ರಿ ಪ್ರಿಯಾಂಕಾ ಆಳ್ವ ಅವರನ್ನು ಸೋದರ ಆದಿತ್ಯ ಆಳ್ವಾ ಮಂಟಪಕ್ಕೆ ಕರೆತಂದರು. ವೇದ ಘೋಷಗಳು, ಉತ್ತರ, ದಕ್ಷಿಣ, ಪಂಜಾಬಿ, ಮಂಗಳೂರು ಎಲ್ಲಾ ಸಂಸ್ಕೃತಿ, ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ವಿವಾಹ ವಿಜೃಂಭಣೆಯಿಂದ ನಡೆಯಿತು.

  ಕರ್ನಾಟಕದ ಅಳಿಯ: 'ನಾನು ಕರ್ನಾಟಕದ ಅಳಿಯಎಂದು ಖುಷಿಯಿಂದ ಹೇಳಿಕೊಂಡಿದ್ದ ವಿವೇಕ್, ಕರ್ನಾಟಕದ ಮುಖ್ಯಮಂತ್ರಿಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವಾರು ರಾಜಕೀಯ ಮುಖಂಡರನ್ನು ವಿವಾಹಕ್ಕೆ ಆಹ್ವಾನಿಸಿದ್ದರು.

  ಗಣ್ಯರಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದು ಖ್ಯಾತ ನಿರ್ದೇಶಕ ಮಣಿರತ್ನಂ, ನಂತರ ಬೆಡಗಿ ಸುಷ್ಮಿತಾ ಸೇನ್, ಕಿಚ್ಚ ಸುದೀಪ್, ಸಂಗೀತಾ ಬಿಜಲಾನಿ, ಅಂಬರೀಷ್, ಸುಮಲತಾ, ಎಸ್ ಎಂ ಕೃಷ್ಣ ದಂಪತಿಗಳು ಸೇರಿದಂತೆ ಹಲವಾರು ಗಣ್ಯರು ವಿವಾಹದಲ್ಲಿ ಪಾಲ್ಗೊಂಡು ನವವಧುವರರಿಗೆ ಶುಭ ಹಾರೈಸಿದರು. ಸ್ವರ ಮಾಂತ್ರಿಕ ಪ್ರವೀಣ್ ಗೋಡ್ಖಿಂಡಿ ಅವರ ಬಾನ್ಸುರಿ ವಾದನ ಎಲ್ಲರನ್ನು ಮೋಡಿ ಮಾಡಿತ್ತು.

  ಮುಂಬೈನಲ್ಲಿ ರಿಷಪ್ಷನ್ :ಶನಿವಾರ ಮುಂಬೈನ ಐಟಿಸಿ ಮೈದಾನದಲ್ಲಿ ಭರ್ಜರಿ ಆರತಕ್ಷತೆ ಸಮಾರಂಭವನ್ನು ವಿವೇಕ್ ದಂಪರಿ ಆಯೋಜಿಸಿದ್ದಾರೆ. ಮದುವೆಗೆ ಬರಲಾಗದೇ ಮಿಸ್ ಆದ ಬಾಲಿವುಡ್ ಮಂದಿ, ಆರತಕ್ಷತೆಗೆ ಬರುವ ನಿರೀಕ್ಷೆಯಿದೆ. ಆದರೆ, ವಿವೇಕ್ ನ ಮಾಜಿ ಪ್ರೇಯಸಿ, ಮಂಗಳೂರಿನ ಸುಂದರಿ ಐಶ್ವರ್ಯಾ ರೈ ಬರುತ್ತಾರೆಯೇ ಎಂಬುದು ಇನ್ನೂ ಯಕ್ಷ ಪ್ರಶ್ನೆ. ವಿವೇಕ್ ಅಂತೂ ವಿರಸ ಮರೆತು, ಮದುವೆ ಆಮಂತ್ರನ ಪತ್ರಿಕೆಯನ್ನು ಖುದ್ದು ಅಭಿಷೇಕ್ ಕೈಗಿತ್ತು ಬಂದಿದ್ದರು.

  ವಿವೇಕ್ ಗೆ ಬಾಳಸಂಗತಿ ಸಿಕ್ಕಾಯ್ತು. ಆದರೆ, ಮಧುಚಂದ್ರಕ್ಕೆ ಆತನ ಬಳಿ ಸಮಯವಿಲ್ಲ. ರಕ್ತಚರಿತ್ರ ಭಾಗ ಎರಡು ಬಿಡುಗಡೆ ನವೆಂಬರ್ ಎರಡನೇ ವಾರದಲ್ಲಿ ಆಗಲಿದ್ದು, ವರ್ಷಾಂತ್ಯದವರೆಗೆ ಮಧುಮಂದ್ರದ ಮಾತಾಡುವಂತಿಲ್ಲ ಎನ್ನುತ್ತಿದೆ ಆಪ್ತವಲಯ.


  ವಿಡಿಯೋಗಳು:
  .ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
  ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X