ಮುನ್ನಾಭಾಯಿ ಚಿತ್ರ ಸರಣಿಯಿಂದ ಸಂಜಯ್ ದತ್ ಔಟ್
ಮುನ್ನಾಭಾಯಿ ಎಂದರೆ ಸಂಜಯ್ ದತ್, ಸಂಜಯ್ ದತ್ ಎಂದರೆ ಮುನ್ನಾಭಾಯಿ. ಆ ಪಾತ್ರದ ಪರಕಾಯ ಪ್ರವೇಶ ಮಾಡಿ ಹೊಸ ಹಾಸ್ಯ ಸರಣಿಗೆ ನಾಂದಿ ಹಾಡಿದ ಸಂಜಯ್ ದತ್ ಈಗ ಮುಂದಿನ ಚಿತ್ರದಿಂದ ಹೊರ ನಡೆದಿದ್ದಾರೆ.
ಸಂಜಯ್ ದತ್ ಜೊತೆಗೆ ಸರ್ಕಿಟ್ ಖ್ಯಾತಿಯ ಅರ್ಷದ್ ವಾರ್ಸಿಯನ್ನು ಹೊರ ಹಾಕಲು ಚಿತ್ರ ನಿರ್ಮಾಣ ಸಂಸ್ಥೆ ಯೋಜಿಸಿದೆ ಎಂಬ ಸುದ್ದಿ ಹಬ್ಬಿದೆ.
ಸಂಜಯ್ ದತ್ ಅವರನ್ನು ಮುಂದಿಟ್ಟುಕೊಂಡು ಸಕತ್ ಗಳಿಕೆ ಮಾಡಿದ ವಿದು ವಿನೋದ್ ಛೋಪ್ರಾ ಈಗ ಮುಂದಿನ ಮುನ್ನಾಭಾಯಿ ಸರಣಿಯಲ್ಲಿ ಹಳೆ ಮುಖಗಳು ಕಾಣಿಸುವುದಿಲ್ಲ. ರಾಜ್ ಕುಮಾರ್ ಹಿರಾನಿ ಕೂಡಾ ನಿರ್ದೇಶಕನ ಕುರ್ಚಿಯಿಂದ ಕೆಳಗಿಳಿದ್ದಾರೆ. ಅನುರಾಗ್ ಬಸು ಗೆ ಸದವಾಕಾಶ ಒಲಿಯಬಹುದು ಎನ್ನಲಾಗಿದೆ.
ಮುನ್ನಾಭಾಯಿ ಚಲೇ ಅಮೆರಿಕ ಎಂಬ ಮುನ್ನಾಭಾಯಿ ಸರಣಿಯ ಮೂರನೇ ಚಿತ್ರದ ಟ್ರೈಲರ್ ಗಳು ಈಗಾಗಲೇ ಜನಪ್ರಿಯವಾಗಿದೆ. ಟ್ರೈಲರ್ ನಲ್ಲಿ ಸಂಜಯ್ ದತ್ ಹಾಗೂ ಅರ್ಷದ್ ವಾರ್ಸಿ ಅವರಿರುವ ಕೆಲ ದೃಶ್ಯಗಳಿವೆ.
ಆದರೆ ಹೊಸ ಚಿತ್ರದಲ್ಲಿ ಈ ಇಬ್ಬರು ನಟರು ಕಾಣಿಸಿಕೊಳ್ಳುವುದು ಅನುಮಾನ. ಸಂಜಯ್ ಗೆ ಆಗಲೆ 52 ವರ್ಷ ಮೀರಿದೆ. ಅರ್ಷದ್ ಕೂಡಾ ಓಲ್ಡ್ ಆಗಿ ಕಾಣುತ್ತಾನೆ. ಚಿತ್ರಕಥೆಯನ್ನು ಬದಲಿಸಲು ಸಾಧ್ಯವಿಲ್ಲ ಎಂದು ವಿನೋದ್ ಛೋಪ್ರಾ ಪಟ್ಟು ಹಿಡಿದಿರುವುದರಿಂದ ಈ ಇಬ್ಬರು ನಟರಿಲ್ಲದೆ ಮುಂದಿನ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











