For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ಜಯಿಸಿ ನಟನೆಗೆ ಮರಳಿದ ತಾರೆ ಲೀಸಾ ರೇ

By Rajendra
|

ಬಾಲಿವುಡ್ ನಟಿ, ರೂಪದರ್ಶಿ ಲಿಸಾ ರೇ(38) ಕ್ಯಾನ್ಸರ್ ಜಯಿಸಿ ನಟನೆಗೆ ಮರಳಿದ್ದಾರೆ. 'ಮಲ್ಟಿಪಲ್ ಮೈಲೋಮಾ' ಎಂಬ ಬಿಳಿರಕ್ತ ಕಣಗಳ ಕ್ಯಾನ್ಸರ್ ನಿಂದಲೀಸಾ ರೇ ಬಳಲುತ್ತಿದ್ದರು. ಈಗ ಸಂಪೂರ್ಣ ಗುಣಮುಖರಾಗಿರುವ ಲೀಸಾ ರೇ ನಟನೆಗೆ ಮರಳಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಕಬೀರ್ ಬೇಡಿ ಜೊತೆ 'ತಾಜ್' ಎಂಬ ನಾಟಕದಲ್ಲಿ ಮೊಘಲ್ ದೊರೆ ಶಾ ಜಹಾನ್ ಮಗಳು ಜಹಾನ್ ಅರಾಳಾಗಿ ಅಭಿನಯಿಸಲಿದ್ದಾರೆ. ಈ ನಾಟಕ ಟೊರೊಂಟೋದಲ್ಲಿ ಜೂನ್ 10ರಂದು ಪ್ರದರ್ಶನಗೊಳ್ಳಲಿದೆ. ಈ ವರ್ಷ ಏಪ್ರಿಲ್ ತಿಂಗಳಲ್ಲೇ ತಾನು ಕ್ಯಾನ್ಸರ್‌‍ನಿಂದ ವಿಮುಕ್ತಳಾಗಿದ್ದಾಗಿ ಲೀಸಾ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ನಂಟು!: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಯುವರಾಜ' ಚಿತ್ರದಲ್ಲಿ ಲಿಸಾ ರೇ ಅಭಿನಯಿಸಿದ್ದರು. ಆದಾದ ನಂತರ ಅವರು ಮತ್ತೆ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಇವರ ತಂದೆ ಬಂಗಾಳಿ ಮೂಲದವರಾದರೆ ತಾಯಿ ಪೋಲೆಂಡಿನವರು. ಬೆಳೆದದ್ದು ಟೊರೆಂಟೋದಲ್ಲಿ. ಮೂಲತಃ ರೂಪದರ್ಶಿಯಾದ ಈಕೆ 2001ರಲ್ಲಿ ತೆರೆಕಂಡ ಹಿಂದಿ ಚಿತ್ರ 'ಕಸೂರ್' ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Indo-Canadian actress cum model Lisa ray is all set to make her comeback to acting after a long gap. She was diagnosed with a rare kind ‘cancer of the bone marrow’ called Multiple Myeloma in 2009. She will be acting in a play called ‘Taj’, alongside Kabir Bedi, in which she will be playing Jahan Ara, the daughter of Mughal emperor Shah Jahan.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more