»   »  'ಸಣ್ಣ ಎದೆಯ ಕಾರಣ ಟಿವಿಯಲ್ಲಿ ಕೆಲಸ ಸಿಗಲಿಲ್ಲ'

'ಸಣ್ಣ ಎದೆಯ ಕಾರಣ ಟಿವಿಯಲ್ಲಿ ಕೆಲಸ ಸಿಗಲಿಲ್ಲ'

Subscribe to Filmibeat Kannada
Freida Pinto
ಮಂಗಳೂರು ಮೂಲದ ಬೆಡಗಿ, 'ಸ್ಲಂ ಡಾಗ್ ಮಿಲಿಯನೇರ್' ಚಿತ್ರದ ನಾಯಕಿ ಫ್ರೀಡಾ ಪಿಂಟೋ ಈಗ ಮನೆಮಾತಾಗಿದ್ದಾರೆ. ಅವರು ಬೆಳ್ಳಿತೆರೆಗೆ ಬಂದ ಹಿನ್ನೆಲೆಯನ್ನು ನಿಯತಕಾಲಿಕೆಯೊಂದಕ್ಕೆ ತಿಳಿಸಿದ್ದಾರೆ.  ಸಾಕಷ್ಟು ಪ್ರಯತ್ನಿಸಿದರೂ ಟಿವಿ ಚಾನೆಲ್ ನಲ್ಲಿ ನಿರೂಪಕಿಯ ಕೆಲಸ ಸಿಗಲಿಲ್ಲವಂತೆ. ಅವರ ಎದೆಯ ಗಾತ್ರ ತೀರಾ ಸಣ್ಣದಾಗಿದ್ದದ್ದೇ ಇದಕ್ಕೆ ಕಾರಣವೆಂದು ಸ್ವತಃ ಆಕೆಯೇ ಹೇಳಿಕೊಂಡಿದ್ದಾರೆ. 'ಕಾಂಪ್ಲೆಕ್ಸ್' ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ ಆಕೆ ಈ 'ಸಣ್ಣ'ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಸಂದರ್ಶಕರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಆಕೆ, ನನ್ನ ಎದೆಯ ಗಾತ್ರ ಸಣ್ಣದಾಗಿದ್ದ ಕಾರಣ ಗ್ಲಾಮರ್ ಸಾಲದು ಎಂಬ ಕಾರಣಕ್ಕೆ ಟಿವಿ ಚಾನಲ್ ನವರು ಕೆಲಸ ನೀಡಲಿಲ್ಲ. ನನ್ನ ಸಂಬಂಧಿಕರು ಸಹ ಈ 'ಸಣ್ಣ' ವಿಚಾರದ ಬಗ್ಗೆಯೇ ಮಾತನಾಡುತ್ತಾರೆ. ಎಷ್ಟಿದೆಯೋ ಅಷ್ಟಕ್ಕೇ ನಾನು ತೃಪ್ತಳಾಗಿದ್ದೇನೆ ಎಂದು ಎದೆಯುಬ್ಬಿಸಿ ಹೇಳಿದ್ದಾರೆ ಪಿಂಟೋ. ಹಾಲಿವುಡ್ ನ ಸೆಕ್ಸಿ ನಟ ಲಿಯಾನಾರ್ಡೋ ಡಿಕ್ಯಾಪ್ರಿಯೋ ಜತೆ ನಟಿಸಬೇಕು ಎಂಬುದು ನನ್ನ ಕೋರಿಕೆ ಎಂದೂ ಅವರು ಹೇಳಿದ್ದಾರೆ.

(ಏಜೆನ್ಸೀಸ್)

ಪೂರಕ ಓದಿಗೆ
ರೆಹಮಾನ್,ಅನಿಲ್ ವಿರುದ್ಧ ಮಾನನಷ್ಟ ದಾವೆ
ಸ್ಲಂ ಡಾಗ್ ಮಿಲಿಯನೇರ್ ಚಿತ್ರ ವಿಮರ್ಶೆ
ವಿಮರ್ಶಕರ ಆಯ್ಕೆ ಪ್ರಶಸ್ತಿ ಬಾಚಿಕೊಂಡ ಸ್ಲಂ ಡಾಗ್

Please Wait while comments are loading...