For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್-ಕತ್ರಿನಾ ಹಾಲಿವುಡ್ ಸ್ಟಂಟ್ ಗೆ ಮೊರೆ

  |

  ಬಾಲಿವುಡ್ ಮಾಜಿ ಪ್ರೇಮಿಗಳಾಗಿರುವ ಕತ್ರಿನಾ ಮತ್ತು ಸಲ್ಮಾನ್ ಖಾನ್, ಏಕ್ತಾ ಟೈಗರ್ ಚಿತ್ರದ ಆಕ್ಷನ್ ಗಾಗಿ ಸ್ಟಂಟ್ ಮಾಡುತ್ತಾ ಮಿಂಚುತ್ತಿದ್ದಾರೆ. ಅವರಿಗೆ ಬೆಸ್ಟ್ ಸ್ಟಂಟ್ ಟ್ರೇಂಡ್ ಮಾಡಲು ಹಾಲಿವುಡ್ ಖ್ಯಾತ ಸಾಹಸ ನಿರ್ದೆಶಕ ಕಾನ್ರಾಡ್ ಪಾಲ್ಮಿಸಾನೊ (Conrad Palmisano) ಅವರನ್ನು ನೇಮಿಸಲಾಗಿದೆ. ಹೀಗಾಗಿ ಸಲ್ಮಾನ್-ಕತ್ರಿನಾ ಜೋಡಿ ಸಖತ್ ಸ್ಟಂಟ್ ಮಾಡಲು ಸಿದ್ಧವಾಗಿದೆ.

  ಸಲ್ಮಾನ್ ಜೊತೆ 'ಫ್ರೀ ಫಾಲ್ಸ್ ಮತ್ತು ಮಿಡ್ ಏರ್ ಫೈಟ್ಸ್'ನಂತಹ ಡೇಂಜರಸ್ ಸ್ಟಂಟ್ ಮಾಡುತ್ತಿರುವ ಕತ್ರಿನಾ, "ಇದು ಕಷ್ಟ, ಆದರೆ ಸಾಕಷ್ಟು ತಮಾಷೆಯಾಗಿ ಮಜಕೊಡುತ್ತಿದೆ. ನಾನು ಇದಕ್ಕೂ ಮೊದಲು ಸೂಕ್ಷಸಂವೇದಿ ಮಹಿಳಾಪ್ರಧಾನ ಪಾತ್ರವನ್ನು ನಿರ್ವಹಿಸಿದ್ದೆ. ಆದರೆ ಇದು ನಾನು ನನ್ನ ವೃತ್ತಿಜೀವನದಲ್ಲಿ ಬಯಸಿದಂತಹ ಪಾತ್ರ" ಎಂದಿದ್ದಾರೆ.

  ಮಾಜಿ ಪ್ರೇಮಿಗಳಿಬ್ಬರೂ ಹಾಲಿ ಪ್ರೇಮಿಗಳಿಗಿಂತ ಹೆಚ್ಚಾಗಿ ಒಬ್ಬರಿನ್ನೊಬ್ಬರಿಗೆ ಸಪೋರ್ಟ್ ನೀಡುತ್ತಿದ್ದಾರೆ, ಜೊತೆಜೊತೆಯಾಗಿ ವೃತ್ತಿ ನಿಭಾಯಿಸುತ್ತಿದ್ದಾರೆ. ಪ್ರೇಮ ಮುರಿದುಬಿದ್ದರೂ ಸ್ನೇಹವನ್ನು ಮುಂದುವರಿಸಿರುವ ಈ ಜೋಡಿಯ ಆದರ್ಶ ಸದ್ಯಕ್ಕೆ ಇತರರಿಗೆ ಮಾದರಿ ಎನ್ನಬಹುದಲ್ಲವೇ? (ಒನ್ ಇಂಡಿಯಾ ಕನ್ನಡ)

  English summary
  Katrina Kaif and Salman Khan are getting trained for performing the best stunts under the ace Hollywood action director Conrad Palmisano for the film Ek Tha Tiger.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X