ಶೀಘ್ರದಲ್ಲೇ ಮಾಧುರಿ ದೀಕ್ಷಿತ್ ಧಕ್ ಧಕ್ ವೆಬ್‌ಸೈಟ್
ಪಡ್ಡೆಗಳ ಎದೆ ಧಕ್ ಧಕ್ ಎನ್ನಿಸಿದ ಬೆಡಗಿ ಮಾಧುರಿ ದೀಕ್ಷಿತ್ ಯುಎಸ್‌ನಿಂದ ಮುಂಬೈಗೆ ಹಿಂತಿರುಗಿದ ಬಳಿಕ ಬಾಲಿವುಡ್‌ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವುದು ಗೊತ್ತೇ ಇದೆ. ಈಗವರು ಅಧಿಕೃತ ವೆಬ್‌ಸೈಟ್ ಆರಂಭಿಸಲು ಮುಂದಾಗಿದ್ದಾರೆ. ಶೀಘ್ರದಲ್ಲೇ ಮಾಧುರಿ ದೀಕ್ಷಿತ್ ವೆಬ್‌ಸೈಟ್ ಬಾಗಿಲು ತೆರೆಯಲಿದೆ.
ಈ ಬಗ್ಗೆ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ಟ್ವೀಟಿಸಿರುವ 44ರ ಹರೆಯದ ಮಾಧುರಿ, "ಇಲ್ಲಿದೆ ನೋಡಿ ಮಾಧುರಿ ದೀಕ್ಷಿತ್ ಅಧಿಕೃತ ವೆಬ್‌ಸೈಟ್ ಟೀಸರ್...ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ" ಎಂದಿದ್ದಾರೆ. ಅಧಿಕೃತ ಟೀಸರ್ ವಿಳಾಸ ಹೀಗಿದೆ www.madhuridixit-nene.com. ಈ ವೆಬ್‌ಸೈಟ್‌ನಲ್ಲಿ ಅಭಿಮಾನಿಗಳಿಗೆ ಮಾಧುರಿ ಎಕ್ಸ್‌ಕ್ಲೂಸೀವ್ ಮಾಹಿತಿ ನೀಡುವುದಾಗಿ ಪ್ರಾಮಿಸ್ ಮಾಡಿದ್ದಾರೆ.
ವೃತ್ತಿಯಲ್ಲಿ ವೈದ್ಯರಾದ ಶ್ರೀರಾಮ್ ಮಾಧವ ನೆನೆ ಅವರನ್ನು 2002ರಲ್ಲಿ ಮದುವೆಯಾದ ಬಳಿಕ ಮಾಧುರಿ ಯುಎಸ್‌ನಲ್ಲಿ ಕೆಲ ಕಾಲ ವಾಸವಾಗಿದ್ದರು. ಸದ್ಯಕ್ಕೆ ಸೋನಿ ಟಿವಿಯ "ಝಲಕ್ ದಿಖ್‌ಲಾ ಜಾ 4" ಎಂಬ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್)


Click it and Unblock the Notifications











