ಮಲ್ಲಿಕಾ ಶೆರಾವತ್ ಚುಂಬನ ದಾಖಲೆ ನಾಮಾವಶೇಷ!

By Rajendra

ಮಲ್ಲಿಕಾ ಶೆರಾವತ್ ಚುಂಬನ ದಾಖಲೆಯನ್ನು ನಾಮಾವಶೇಷ ಮಾಡುವಂತಹ ಅದ್ಭುತ ದಾಖಲೆಯೊಂದು ಬಾಲಿವುಡ್‌ನಲ್ಲಿ ಇತ್ತೀಚೆಗೆ ನಡೆದಿದೆ. ಹೇ ಸಾಲಿ ಝಿಂದಗಿ ಚಿತ್ರಕ್ಕಾಗಿ ಅರುಣೋದಯ್ ಸಿಂಗ್ ಹಾಗೂ ಅದಿತಿ ರಾವ್ ಒಬ್ಬರನ್ನೊಬ್ಬರು 22 ಬಾರಿ ಚುಂಬಿಸಿಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಸುಧೀರ್ ಮಿಶ್ರಾ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರವಿದು.

ಸೌಂದರ್ಯ ಶಾಸ್ತ್ರದಲ್ಲಿ ಚುಂಬನ ಎನ್ನುವುದು ಪ್ರೀತಿ ಪ್ರೇಮವನ್ನು ವ್ಯಕ್ತಪಡಿಸುವ ನೈಸರ್ಗಿಕ ಕ್ರಿಯೆ ಎಂದು ಚುಂಬನದ ಬಗ್ಗೆ ಹೊಸ ವ್ಯಾಖ್ಯೆ ನೀಡಿದ್ದಾರೆ ನಿರ್ದೇಶಕರು. ಪಡ್ಡೆಗಳ ಮೈನವಿರೇಳಿಸುವ ಚುಂಬನದ ಬಗ್ಗೆ ಬಾಲಿವುಡ್ ವಲಯದಲ್ಲಿ ಈಗಾಗಲೆ ಬಿಸಿಬಿಸಿ ಚರ್ಚೆ ಶುರುವಾಗಿದೆ.

ಇನ್ನು ಚಿತ್ರದ ನಾಯಕ ನಾಯಕಿಯರ ಬಗ್ಗೆ ಹೇಳಬೇಕಾದರೆ, ಇಬ್ಬರೂ ಶ್ರೀಮಂತ ಹಿನ್ನೆಲೆಯಿಂದ ಬಂದವರು. ರಾಜಕೀಯ ಧುರೀಣ ಅರ್ಜುನ್ ಸಿಂಗ್ ಅವರ ಮೊಮ್ಮಗ ಅರುಣೋದಯ್ ಸಿಂಗ್. ಇನ್ನು ನಾಯಕಿ ಅದಿತಿ ರಾವ್ ರಾಜವಂಶಸ್ಥಳು. ಈ ರೀತಿಯ ಸನ್ನಿವೇಶಗಳಲ್ಲಿ ಪಾಲ್ಗೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಇಬ್ಬರ ಮನೆಯಲ್ಲೂ ತಲೆಎತ್ತಿದೆಯಂತೆ.

ಈ ಬಗ್ಗೆ ತಲೆಕೆಡಿಸಿಕೊಳ್ಳದ ಇವರಿಬ್ಬರೂ ಡೇಂಡ್ ಕೇರ್ ಎಂದಿದ್ದಾರಂತೆ. ಈ ಹಿಂದೆ ಅದಿತಿ ರಾವ್ ತಮಿಳಿನ ಶೃಂಗಾರಂ ಎಂಬ ಚಿತ್ರದಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಈಗ ಆಕೆ ಚುಂಬನ ದೃಶ್ಯಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ದೆಹಲಿ ಮೂಲದ ದಂಪತಿಗಳಾಗಿ ಅಭಿನಯಿಸಿರುವ ಇವರು, ಜಗಳ ಮನಸ್ತಾಪ ಬಂದಾಗ ಕಿತ್ತಾಡದೆ ಪರಸ್ಪರ ಚುಂಬಿಸಿಕೊಂಡು ಸಂಸಾರನೌಕೆ ದೂಡುತ್ತಿರುತ್ತಾರೆ. ಹಾಗಾಗಿ ಚಿತ್ರದಲ್ಲಿ ಇಷ್ಟೊಂದು ಚುಂಬನ ದೃಶ್ಯಗಳಿಗೆ ಎನ್ನುತ್ತಾರೆ ನಿರ್ದೇಶಕರು. [ಚುಂಬನ]

More from Filmibeat

English summary
Aditi Rao and Arunoday Singh makes a new kiss record on screen in Yeh Saali Zindagi. They are kissing 22 times in Sudhir Mishra’s upcoming film Yeh Saali Zindagi. Irrfan Khan and Chitrangada Singh are also in cast.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X