ವೇಲಾಯುಧಮ್, 7 ಅಮ್ ಅರಿವು ರಾ ಒನ್ ಗೆ ವಿಲನ್
ಶಾರೂಖ್ ಖಾನ್ ನಟನೆ ಮತ್ತು ನಿರ್ಮಾಣದ ರಾ. ಒನ್ ಚಿತ್ರ ತಮಿಳು ಮತ್ತು ತೆಲುಗು ಭಾಷೆಗಳಿಗೂ ಡಬ್ ಆಗಿ 26 ರಂದೇ ಬಿಡುಗಡೆ ಕಂಡಿದೆ. ಆದರೆ ಅದೇ ದಿನ ತಮಿಳು ಸ್ಟಾರ್ ಗಳಾಗಿರುವ ವಿಜಯ್ ಮತ್ತು ಸೂರ್ಯ ನಟನೆಯ ವೇಲಾಯುಧಮ್ ಮತ್ತು 7 ಅಮ್ ಅರಿವು ಕೂಡ ಬಿಡುಗಡೆ ಕಂಡಿದೆ.
ಹೀಗಾಗಿ ಸಹಜವಾಗಿಯೇ ಶಾರುಖ್ ಖಾನ್ ರಾ ಒನ್, ತಮಿಳು ಚಿತ್ರಗಳಿಂದ ಪ್ರಬಲ ಸ್ಪರ್ಧೆ ಎದುರಿಸಿದೆ. ದಕ್ಷಿಣ ಭಾರತದಲ್ಲಿ ಮೊದಲ ದಿನ ರಾ ಒನ್ ಸುಮಾರು 2 ರಿಂದ 2.5 ಕೋಟಿ ಗಳಿಕೆ ಕಂಡಿದ್ದು ನಂತರದ 2 ದಿನದಲ್ಲಿ 6 ಕೋಟಿ ಗಳಿಸಿದೆ. 400 ಥಿಯೇಟರ್ ಗಳನ್ನು ತಮಿಳುನಾಡಿನಲ್ಲಿ ಸೂರ್ಯ ಹಾಗೂ ವಿಜಯ ಚಿತ್ರಗಳಿಂದ ರಾ ಒನ್ ಕಳೆದುಕೊಂಡಿದೆ.
ರಜನಿಕಾಂತ್ ಇರುವುದರಿಂದ ರಾ ಒನ್ ಗಳಿಕೆ ದಕ್ಷಿಣ ಭಾರತದಲ್ಲಿ ಮೇಲೆರಲು ಸಾಧ್ಯವಾಗಿರುವುದನ್ನು ಸುದ್ದಿಮೂಲಗಳು ಖಚಿತಪಡಿಸಿವೆ. ಆದರೂ ತಮಿಳು ಸ್ಟಾರ್ ಗಳಿಬ್ಬರ ಆರ್ಭಟಕ್ಕೆ ರಾ ಒನ್ ನಲುಗಿದ್ದು ಕಂಡುಬರುತ್ತಿದೆ. ಕಡಿಮೆ ಥಿಯೇಟರುಗಳಲ್ಲಿ ಪ್ರದರ್ಶನವಾಗುತ್ತಿದ್ದರೂ ವೇಲಾಯುಧಮ್ ಗಳಿಕೆ 7 ಅಮ್ ಅರಿವು ಗಿಂತ ಹೆಚ್ಚಾಗಿದ್ದು ಆಶ್ಚರ್ಯ ತಂದಿದೆ. ಆದರೂ ತಮಿಳು ಚಿತ್ರಗಳೆರಡೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. (ಏಜೆನ್ಸೀಸ್)


Click it and Unblock the Notifications











