ಸಲಿಂಗಕಾಮಿಯಾದ ಬಾಲಿವುಡ್ ನಟ ರಿಷಿಕಪೂರ್

ಬಾಲಿವುಡ್ ನಟ, ಹಿಂದೊಮ್ಮೆ ಹ್ಯಾಂಡ್ ಸಮ್ ಬಾಯ್ ಎನಿಸಿಕೊಂಡಿದ್ದ ರಿಷಿಕಪೂರ್ ಈಗ ಸಲಿಂಗಕಾಮಿ ಎನಿಸಿಕೊಳ್ಳಲಿದ್ದಾರೆ. ಕಾರಣ, ಕರಣ್ ಜೋಹರ್ ನಿರ್ಮಿಸುತ್ತಿರುವ ಮುಂದಿನ ಚಿತ್ರ 'ಸ್ಟೂಡೆಂಟ್ ಆಫ್ ದಿ ಈಯರ್' ನಲ್ಲಿ ರಿಷಿಕಪೂರ್ ಸಲಿಂಗಕಾಮಿ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಪಾತ್ರ ಹೆಣೆಯುವಾಗ ಕರಣ್ ಚಿತ್ತದಲ್ಲಿ ಇದ್ದದ್ದು ಶಾರುಖ್ ಖಾನ್. ಆದರೆ ನಂತರ ಆ ಪಾತ್ರ ರಿಷಿಕಪೂರ್ ಪಾಲಾಗಿದೆ. ಈ ವಿಷಯ ಸುದ್ದಿಮೂಲಗಳಿಂದ ಬಯಲಾಗಿದೆಯಾದರೂ ಹೆಚ್ಚಿನ ವಿವರ ಲಭ್ಯವಿಲ್ಲ. ರಿಷಿಕಪೂರ್ ಪಾತ್ರ ರೋನಿತ್ ರಾಯ್ ಪಾತ್ರದ ಜೊತೆ ಹೊಂದಿರುವ ವಿಶೇಷ ಸಂಬಂಧ ಈ ಚಿತ್ರದಲ್ಲಿ ಕುತೂಹಲದ ಕೇಂದ್ರಬಿಂದುವಾಗಿದೆ.

ಇದಕ್ಕೆ ರಿಷಿಕಪೂರ್ " ಹೌದು, ನನ್ನ ಪಾತ್ರ ರೋನಿತ್ ಜೊತೆ ಮೃದುತ್ವದ ನಡವಳಿಕೆಯಿಂದ ಕೂಡಿದೆ. ಇದು ಸಲಿಂಗ ಕಾಮಿಯ ಪಾತ್ರ. ನನ್ನ ಈಗಿನ ವೃತ್ತಿಜೀವನದಲ್ಲಿ ಇದು ಸಾಕಷ್ಟು ವಿಶೇಷತೆಯುಳ್ಳ ಪಾತ್ರ. ಈ ವಯಸ್ಸಿನಲ್ಲಿ ತಂದೆಯ ಪಾತ್ರ ಮಾತ್ರ ಮಾಡಿಕೊಂಡಿರಲು ನಾನು ಇಷ್ಟಪಡುವುದಿಲ್ಲ. ನನ್ನನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳಲಿದ್ದೇನೆ" ಎಂದಿದ್ದಾರೆ.

More from Filmibeat

English summary
Rishi Kapoor will play homosexual (gay) in Student Of The Year. He will share a very special relationship with Ronit Roy's character.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X