ಕೊನೆಗೂ ಒಂದಾದ ವಿದ್ಯಾ ಬಾಲನ್ ಜಾನ್ ಅಬ್ರಹಾಂ ?

By Mahesh

ದಿ ಡರ್ಟಿ ಪಿಕ್ಚರ್ ಹವಾದಲ್ಲಿ ತೇಲುತ್ತಿರುವ ವಿದ್ಯಾ ಬಾಲನ್ ಹಾಗೂ ಬಿಪ್ಸ್ ಕಳೆದುಕೊಂಡಿರುವ ಜಾನ್ ಅಬ್ರಹಾಂರನ್ನು ಒಗ್ಗೂಡಿಸುವಲ್ಲಿ ನಿರ್ದೇಶಕ ಸಂಜಯ್ ಗುಪ್ತಾ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ಹೇಳುತ್ತಿದೆ.

2007ರಲ್ಲಿ ಸಲಾಮ್-ಎ-ಇಶ್ಕ್ ನಲ್ಲಿ ಕಾಣಿಸಿಕೊಂಡು ರಸಿಕರ ಎದೆಯಲಿ ಕಿಚ್ಚು ಹಬ್ಬಿಸಿದ್ದ ಈ ಜೋಡಿ ಮತ್ತೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ. ಇದಕ್ಕೆ ಬಿಪಾಶಾ ಬಸು ಹಾಕಿದ್ದ ಷರತ್ತು ಕಾರಣ ಎಂದು ಗುಸುಗುಸು ಸುದ್ದಿ ಇದೆ. ಯಾರ ಜೊತೆ ನಟಿಸಬೇಕು. ಯಾವ ನಟಿ ಜೊತೆ ನಟಿಸಬಾರದು ಎಂದು ಬಿಪ್ಸ್ ನಿರ್ಧರಿಸುತ್ತಿದ್ದಳಂತೆ.

2010ರಲ್ಲಿ ಕೇರಳ ಮೂಲದ ಯಶಸ್ವಿ ನಿರ್ದೇಶಕ ಪ್ರಿಯದರ್ಶನ್ ಕಾಮಿಡಿ ಸಿನಿಮಾಕ್ಕಾಗಿ ಈ ಜೋಡಿಯನ್ನು ಕೇಳಿದ್ದರು. ಅದರೆ, ಬಿಪಾಶಾ ಪಾಶಾದಲ್ಲಿದ್ದ ಜಾನ್ ಆಫರ್ ನಿರಾಕರಿಸಿ, ವಿದ್ಯಾ ಜೊತೆ ನಟಿಸಲು ಸಾಧ್ಯವಿಲ್ಲ ಎಂದು ಸೂಕ್ಷ್ಮವಾಗಿ ಹೇಳಿದ್ದ.

ಶೂಟೌಟ್ ಅಟ್ ವಡಾಲ ಚಿತ್ರ ನಿರ್ದೇಶಕ ಸಂಜಯ್ ಗುಪ್ತ, ಜಾನ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ ಬೆನ್ನಲ್ಲೇ ವಿದ್ಯಾ ಬಾಲನ್ ರನ್ನು ಅವರ ಪಕ್ಕದಲ್ಲಿ ನಿಲ್ಲಿಸುವ ಸಾಹಸ ಮಾಡುತ್ತಿದ್ದಾರೆ. ಜಾನ್ ಕೂಡಾ ಈಗ ಬಿಪ್ಸ್ ಸಂಗ ಬಿಟ್ಟಿರುವುದರಿಂದ ವಿದ್ಯಾ ಜೊತೆ ರೋಮಾನ್ಸ್ ಮಾಡಲು ಅಡ್ಡಿಯಿಲ್ಲ.

ಏಕ್ತಾ ಕಪೂರ್, ಶೋಭಾ ಕಪೂರ್ ನಿರ್ಮಾಣದ ಈ ಚಿತ್ರ ಶೂಟೌಟ್ ಅಟ್ ಲೋಖಂಡವಾಲಾ ಚಿತ್ರದ ಮುಂದುವರೆದ ಭಾಗವಾಗಿದೆ. ಅನಿಲ್ ಕಪೂರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮುಂಬೈನ ಗ್ಯಾಂಗ್ ಸ್ಟರ್ ಗಳ ರಕ್ತದೌತಣದ ಚಿತ್ರದಲ್ಲಿರುತ್ತದೆ. ಜೊತೆಗೆ ಜಾನ್ ವಿದ್ಯಾ ಡುಯೆಟ್ ಕೂಡಾ.

More from Filmibeat

English summary
Actress Vidya Balan has earlier starred alongside actor John Abaham in the movie Salaam-E-Ishq in 2007. Director Sanjay Gupta is trying to bring Vidya and John together for his upcoming movie Shootout at Wadala.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X