ಟಬುಗೆ ನಡುವಯಸ್ಸಲ್ಲಿ ಕೂಡಿಬಂತು ಕಂಕಣಭಾಗ್ಯ!
ಬಾಲಿವುಡ್ ಚಿತ್ರರಂಗ ಮತ್ತೊಂದು ಅದ್ದೂರಿ ಮದುವೆಯನ್ನು ಕಣ್ಣಾರೆ ಸವಿಯಲು ಸಜ್ಜಾಗಿದೆ. ಬಾಲಿವುಡ್ ತಾರೆ ಟಬು(39) ಅವರಿಗೆ ಕಂಕಣಬಲ ಕೂಡಿಬಂದಿದ್ದು ಶೀಘ್ರದಲ್ಲೆ ಅವರು ಉದ್ಯಮಿಯೊಬ್ಬರ ಕೈಹಿಡಿಯಲಿದ್ದಾರೆ. ಅವರದು ಪ್ರೀತಿ, ಪ್ರೇಮ, ಪ್ರಣಯ ಎಂದು ಅಲೆದಾಡು ವಯಸ್ಸಲ್ಲವಾದರೂ ಒಂಥರಾ ಪ್ರೇಮ ವಿವಾಹವಂತೆ.
ಮದುವೆಯಾಗುತ್ತಿರುವ ಹುಡುಗನನ್ನು ಕಂಡ ಕೂಡಲೆ ಮೊದಲ ನೋಟದಲ್ಲೆ ಪ್ರೇಮ ಪಲ್ಲವಿಸಿತಂತೆ. ಬಳಿಕ ಇಬ್ಬರೂ ಒಪ್ಪಿ ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದಾಗಿ ತಿಳಿಸಿದ್ದಾರೆ. ಶೀಘ್ರದಲ್ಲೆ ವರನ ಬಗ್ಗೆ ಹಾಗೂ ಮದುವೆ ವಿವರಗಳನ್ನು ತಿಳಿಸುವುದಾಗಿ ಟಬು ಪೋಷಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ತೆಲುಗು ಚಿತ್ರರಂಗದನಟ ನಾಗಾರ್ಜುನ ಅವರೊಂದಿಗೆ ಟಬು ಹೆಸರು ಕೇಳಿಬಂದಿತ್ತು. ಬಳಿಕ ಇವೆಲ್ಲಾ ಕೇವಲ ವದಂತಿಗಳಷ್ಟೆ ಎಂದು ಗೊತ್ತಾಗಿತ್ತು. ಟಬು ಅವರಿಗೆ ಮದುವೆ ವಯಸ್ಸು ಸಂಪೂರ್ಣ ಮೀರಿಹೋಗಿದ್ದರೂ ಕಡೆಗೂ ಮದುವೆಯಾಗುತ್ತಿದೆಯಲ್ಲಾ ಎಂಬುದೇ ಸಂತೋಷದ ವಿಚಾರ.


Click it and Unblock the Notifications











