For Quick Alerts
  ALLOW NOTIFICATIONS  
  For Daily Alerts

  ಕಲ್ಯಾಣ್ ಜ್ಯುವೆಲ್ಲರ್ಸ್‌ ರಾಯಭಾರಿಯಾಗಿ ಐಶ್ವರ್ಯ ರೈ

  By Rajendra
  |

  ಬಾಲಿವುಡ್ ತಾರೆ ಐಶ್ವರ್ಯ ರೈ ಆಭರಣ ಸುಂದರಿಯಾಗಿ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅಮ್ಮನಾದ ಬಳಿಕ ಐಶ್ವರ್ಯ ರೈ ಭರ್ಜರಿ ಆಫರ್ ಸಿಕ್ಕಿದೆ. ಕೇರಳದ ಪ್ರಮುಖ ಚಿನ್ನಾಭರಣ ಮಳಿಗೆ ಕಲ್ಯಾಣ್ ಜ್ಯುವೆಲರ್ಸ್‌ನ ರಾಯಭಾರಿಯಾಗಿ ಐಶ್ವರ್ಯ ರೈ ಸಹಿ ಮಾಡಲಿದ್ದಾರೆ. ಶೀಘ್ರದಲ್ಲೇ ಕಲ್ಯಾಣ್ ಜ್ಯುವೆಲ್ಲರ್ಸ್ ಜಾಹೀರಾತಿನ ಚಿತ್ರೀಕರಣದಲ್ಲಿ ಅವರು ತೊಡಗಿಕೊಳ್ಳಲಿದ್ದಾರೆ.

  ಇದಕ್ಕಾಗಿ ಐಶ್ವರ್ಯ ರೈ ಪಡೆದಿರುವ ಸಂಭಾವನೆ ರು.10 ಕೋಟಿ. ವಿಶೇಷ ಎಂದರೆ ಇದೇ ಸಂಸ್ಥೆಗೆ ಐಶ್ವರ್ಯ ಮಾವ ಅಮಿತಾಬ್ ಬಚ್ಚನ್ ಕೋ-ಅಂಬಾಸಡರ್. ಆದರೆ ಬಚ್ಚನ್‌ಗೆ ಎಷ್ಟು ಸಂಭಾವನೆ ಕೊಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇಬ್ಬರೂ ಈ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

  ಮಗುವಾದ ಬಳಿಕ ಐಶ್ವರ್ಯ ರೈ ಎಲ್ಲೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ತೀರಾ ಇತ್ತೀಚೆಗೆ ತನ್ನ ಮಗು ಆರಾಧ್ಯ ಬಚ್ಚನ್ ಜೊತೆ ದುಬೈಗೆ ಹಾರಿದ್ದರು. ಅಲ್ಲೂ ಅಷ್ಟೇ ಹೆಚ್ಚಾಗಿ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇನೆ ಸುದ್ದಿ ಮಾಡಿದ್ದರು. (ಏಜೆನ್ಸೀಸ್)

  English summary
  Beauty queen Aishwarya Rai Bachchan is making few toddler footsteps into the glamour world post-delivery. Reportedly, Aishwarya might soon turn the brand ambassador for Kalyan Jewellers. She is likely to shoot an ad soon for a contract amount of Rs 10 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X