For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಾ ವಿರುದ್ಧ 4 ಸಿಬ್ಬಂದಿಗಳು ಸಾಕ್ಷ್ಯ: ಪೊಲೀಸರಿಂದ ಮಾಹಿತಿ

  |

  ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿರುವ ರಾಜ್ ಕುಂದ್ರಾ ವಿರುದ್ಧ ಪೊಲೀಸರ ಬಳಿ ಪ್ರಬಲ ಸಾಕ್ಷ್ಯಗಳಿವೆ ಎಂದು ಹೇಳಲಾಗಿದೆ.

  ಇದೀಗ, ರಾಜ್ ಕುಂದ್ರಾ ಅವರ ವಯಾನ್ ಇಂಡಸ್ಟ್ರೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಸಿಬ್ಬಂದಿಗಳು ತಮ್ಮ ಮಾಲೀಕನ ವಿರುದ್ಧ ಸಾಕ್ಷ್ಯಗಳಾಗಿ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

  ರಾಜ್ ಕುಂದ್ರಾ ಬಂಧನ ಕೇಸ್: ಇಡಿ ಎಂಟ್ರಿ, ನಟಿ ಗೆಹನಾಗೆ ಸಮನ್ಸ್ರಾಜ್ ಕುಂದ್ರಾ ಬಂಧನ ಕೇಸ್: ಇಡಿ ಎಂಟ್ರಿ, ನಟಿ ಗೆಹನಾಗೆ ಸಮನ್ಸ್

  ಈ ಕುರಿತು ಮುಂಬೈ ಪೊಲೀಸರು ಭಾನುವಾರ ಮಾಹಿತಿ ನೀಡಿರುವುದಾಗಿ ಎಎನ್‌ಐ ವರದಿ ಮಾಡಿದೆ. ''ರಾಜ್ ಕುಂದ್ರಾ ಈ ಕೇಸ್‌ನಲ್ಲಿ ತನಿಖೆಗೆ ಸಹಕರಿಸುತ್ತಿಲ್ಲ. ಬಹುಶಃ ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಆತನ ವಿರುದ್ಧ ಸಾಕ್ಷ್ಯ ಹೇಳಿಕೆ ನೀಡುವ ಸಾಧ್ಯತೆ ಇದೆ'' ಎಂದು ಎಎನ್‌ಐ ವರದಿ ಮಾಡಿದೆ.

  ಅಶ್ಲೀಲ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನು ಜುಲೈ 19 ರಂದು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಕೇಸ್‌ ಅಡಿಯಲ್ಲಿ 10 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಜುಲೈ 27 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

  ಈ ಪ್ರಕರಣದ ಬಗ್ಗೆ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಪ್ರತಿಕ್ರಿಯಿಸಿದ್ದು "ರಾಜ್ ಕುಂದ್ರಾ ವಿಷಯದಲ್ಲಿ ತಪ್ಪು ಮಾಡಿದ ಎಲ್ಲರ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದರು.

  ಮುಂಬೈನಲ್ಲಿರುವ ರಾಜ್ ಕುಂದ್ರಾ ನಿವಾಸದ ಮೇಲೆ ದಾಳಿ ಮಾಡಿದ್ದ ಪೊಲೀಸರು, ಸ್ಥಳ ಮಹಜರು ಮಾಡಿದ್ದಾರೆ. ಸಾಕಷ್ಟು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಈ ವೇಳೆ ಶಿಲ್ಪಾ ಶೆಟ್ಟಿ ಅವರ ಹೇಳಿಕೆ ಸಹ ಪಡೆಯಲಾಗಿದೆ.

  ಜೀವನ ಪಯಣ ಮುಗಿಸಿದ ಕನ್ನಡದ ಯಶಸ್ವಿ ನಾಯಕಿ

  ತಿರುಗಿ ಬಿದ್ದಿರುವ ಪೂನಾಂ ಪಾಂಡೆ-ಶೆರ್ಲಿನ್ ಚೋಪ್ರಾ
  ಅಂದ್ಹಾಗೆ, ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ನಟಿ ಪೂನಂ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾ, ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಹೇಳಿಕೆ ನೀಡಿದ್ದಾರೆ. ಅಶ್ಲೀಲ ಸಿನಿಮಾಗಳಲ್ಲಿ ನಟಿಸುವಂತೆ ಬಲವಂತ ಮಾಡಲಾಗಿತ್ತು ಎಂದು ದೂರಿದ್ದಾರೆ. ಪೂನಂ ಪಾಂಡೆ ಖಾಸಗಿ ಮಾಧ್ಯಮದ ಜೊತೆ ಪ್ರತಿಕ್ರಿಯಿಸಿ, 'ನನ್ನನ್ನು ಅಶ್ಲೀಲ ಜಗತ್ತಿಗೆ ತಳ್ಳಿದ್ದೇ ರಾಜ್ ಕುಂದ್ರಾ' ಎಂದಿದ್ದಾರೆ.

  English summary
  4 Employees of businessman Raj Kundra have turned into witnesses in the pornography racket case in which he is an accused.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X