ತನಗಿಂತ 26 ವರ್ಷ ಚಿಕ್ಕವಳ ಜೊತೆ ಅದ್ಧೂರಿಯಾಗಿ ಎರಡನೇ ಮದುವೆಯಾದ 48 ವರ್ಷದ ಖ್ಯಾತ ನಟ..!
ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ವಯಸ್ಸಿನ ಗಡಿ ಇಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಇದಕ್ಕೆ ಸಾಹಿಲ್ ಖಾನ್ ಮತ್ತು ಮಿಲೆನಾ ಅಲೆಕ್ಸಾಂಡ್ರಾ ಮತ್ತೊಂದು ಉದಾಹರಣೆ.
ಹೌದು, ಸಾಹಿಲ್ ಖಾನ್, ಒಂದ್ಕಾಲದ ಬಾಲಿವುಡ್ ಸ್ಟಾರ್. 'ಸ್ಟೈಲ್' ಮತ್ತು 'ಎಕ್ಸ್ ಕ್ಯೂಸ್ ಮಿ' ಚಿತ್ರಗಳ ಮೂಲಕ ಆ ಕಾಲದಲ್ಲಿ ಸಖತ್ ಹವಾ ಸೃಷ್ಟಿಸಿದವರು ಇವರಿಗೆ ಈಗ 48ರ ಹರೆಯ. ತಮ್ಮ ಹುರಿಗೊಳಿಸಿದ ದೇಹದಿಂದನೇ ಅಸಂಖ್ಯಾತ ಹೆಣ್ಣು ಮಕ್ಕಳ ನೆಚ್ಚಿನ ಸ್ಟಾರ್ ಆಗಿದ್ದ ಸಾಹಿಲ್ ಖಾನ್ ಕಳೆದ ವರ್ಷ ತನಗಿಂತ 26 ವರ್ಷ ಚಿಕ್ಕವಳಾದ 22 ವರ್ಷದ ಯುರೋಪ್‌ನ ಬೆಲಾರಸ್ ಮೂಲದ ಮಿಲೆನಾ ಅಲೆಕ್ಸಾಂಡ್ರಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಆ ನಂತರ ನಿಶ್ಚಿತಾರ್ಥವನ್ನು ಮಾಡಿಕೊಂಡು ತಮ್ಮ ಪ್ರೀತಿಯ ವಿಚಾರವನ್ನು ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದ್ದರು.

ಇಂಥಾ ಸಾಹಿಲ್ ಖಾನ್ ಈಗ ಮಿಲೆನಾ ಜೊತೆ ದುಬೈನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಆ ನಂತರ ಇಸ್ಲಾಂ ಸಂಪ್ರದಾಯದಂತೆ ಮಿಲೆನಾ ಜೊತೆ ನಿಖಾ ಮಾಡಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೊ ಮತ್ತು ವಿಡಿಯೋಗಳನ್ನು ಕೂಡ ಹಂಚಿಕೊಂಡಿದ್ಧಾರೆ. ಮಧು ಚಂದ್ರಕ್ಕೆ ಮಾಲ್ಡೀವ್ಸ್‌ಗೆ ತೆರಳಿದ್ದಾರೆ.
ಸದ್ಯ ಸಾಹಿಲ್ ಖಾನ್ ಮತ್ತು ಮಿಲೆನಾ ಅವರ ಈ ಮದುವೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೇ ಬಾಲಿವುಡ್‌ನಲ್ಲಿ ಕೂಡ ಚರ್ಚೆಗೀಡಾಗಿದೆ. ಮಗಳ ವಯಸ್ಸಿನವಳ ಜೊತೆ ಮದುವೆಯಾಗುವ ಅವಶ್ಯತೆಯಾದರೂ ಏನಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮದ್ವೆಯಾದಷ್ಟೇ ಬೇಗ ತಲಾಖ್ ನೀಡಿ ಇಬ್ಬರು ದೂರವಾಗುತ್ತಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ಅಂದ್ಹಾಗೇ ಸಾಹಿಲ್ ಖಾನ್ ಕಳೆದ ತಿಂಗಳು ಮಿಲೆನಾ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ್ದರು. ನನ್ನ ಪ್ರಿಯತಮೆ ಮಿಲೇನಾ ಅಲೆಕ್ಸಾಂಡ್ರಾ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ತೀರ್ಮಾನ ಮಾಡಿದ್ದಾಳೆ ಎಂದು ಘೋಷಿಸಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದರು. ನಮ್ಮನ್ನು ಅಲ್ಲಾಹ್ ಕ್ಷಮಿಸಲಿ ನಮ್ಮ ಪ್ರಾರ್ಥನೆಗಳನ್ನು ಸ್ವೀಕರಿಸಲಿ ಎಂದು ಬರೆದುಕೊಂಡಿದ್ದರು.
ಸಾಹಿಲ್ ಅವರ ಈ ನಡೆಗೆ ಆಗ ಕೂಡ ಸೋಶಿಯಲ್ ಮೀಡಿಯಾದಲ್ಲಿ ತೀವೃ ಆಕ್ರೋಶ ವ್ಯಕ್ತವಾಗಿತ್ತು. ಮತಾಂತರದ ಸುತ್ತ ಮುತ್ತ ತೀವೃ ಚರ್ಚೆ ನಡೆದಿತ್ತು. ಈಗ ಮಿಲೆನಾ ಇಸ್ಲಾಂ ಧರ್ಮಕ್ಕೆ ಮಂತಾತರಗೊಂಡು ಒಂದು ತಿಂಗಳ ನಂತರ ಸಾಹಿಲ್ ಖಾನ್ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.
ಮಿಕ್ಕಂತೆ ಸಾಹಿಲ್ ಖಾನ್ ಬಗ್ಗೆ ಹೇಳಬೇಕೆಂದರೆ 2001 ರಲ್ಲಿ 'ಸ್ಟೈಲ್' ಚಿತ್ರದ ಮೂಲಕ ಸಾಹಿಲ್ ಖಾನ್ ಬೆಳ್ಳಿತೆರೆಗೆ ಲಗ್ಗೆ ಇಟ್ಟಿದ್ದರು. ಆ ನಂತರ ಬಂದ ಎಕ್ಸ್ ಕ್ಯೂಸ್ ಮೀ ಇವರಿಗೆ ಸಿಕ್ಕಾಪಟ್ಟೆ ಹೆಸರನ್ನೂ ತಂದು ಕೊಟ್ಟಿತ್ತು. ಆದರೆ ದುರಾದೃಷ್ಟ ಬಾಲಿವುಡ್ ನಲ್ಲಿ ನೆಲೆ ನಿಲ್ಲುವ ಎಲ್ಲ ಅರ್ಹತೆ ಹೊಂದಿದ್ದರು, ಆ ನಂತರ ಚಿತ್ರರಂಗದಿಂದ ದೂರವಾದ ಸಾಹಿಲ್ ಖಾನ್ 2003 ರಲ್ಲಿ ನಿಗಾರ್ ಖಾನ್ ಅವರನ್ನು ವಿವಾಹವಾದರು 2005 ರಲ್ಲಿ ವಿಚ್ಛೇದನವನ್ನೂ ಪಡೆದಿದ್ದರು. ಇನ್ನು ಕಳೆದ ವರ್ಷ ಮಹಾದೇವ್ ಬೆಟ್ಟಿಂಗ್ ಆಪ್ ಪ್ರಕರಣದಲ್ಲಿ 15,000 ಕೋಟಿ ವಂಚನೆ ಆರೋಪದಡಿ ಸಾಹಿಲ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದರು.


Click it and Unblock the Notifications











