ಬಾಲಿವುಡ್‌ನಲ್ಲಿ ಬಯೋಪಿಕ್ ಪರ್ವ: 2021ರಲ್ಲಿ ತೆರೆಗೆ ಬರಲಿರುವ ಜೀವನಕಥೆಗಳು ಯಾವುದು?

ಬಯೋಪಿಕ್ ಸಿನಿಮಾ ಮಾಡುವುದರಲ್ಲಿ ಬಾಲಿವುಡ್ ಎತ್ತಿದ ಕೈ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಜೀವನಕಥೆಗಳನ್ನು ತೆರೆಮೇಲೆ ತರುವಲ್ಲಿ ಬಿಟೌನ್ ಮಂದಿ ಸದಾ ಮುಂದಿರುತ್ತಾರೆ. ಕ್ರೀಡಾ ಸಾಧಕರ ಮೇಲೆ ಹೆಚ್ಚು ಆಸಕ್ತಿ ಹೊಂದಿರುವ ಬಿಗ್ ಇಂಡಸ್ಟ್ರಿ ಧೋನಿ, ಸಚಿನ್ ಕುರಿತು ಸಿನಿಮಾ ಮಾಡಿದ್ದಾರೆ.

ಈಗ ಭಾರತೀಯ ಕ್ರಿಕೆಟ್ ಲೋಕದ ಐತಿಹಾಸಿಕ ಘಟನೆಯೊಂದನ್ನು ಆಧರಿಸಿ ಸಿನಿಮಾ ತಯಾರಿಸಿದ್ದಾರೆ. ಅದರ ಜೊತೆಗೆ ಪುಟ್‌ಬಾಲ್ ಕೋಚ್ ಒಬ್ಬರ ಸಕ್ಸಸ್‌ಫುಲ್ ಕಥೆಯೂ ಪರದೆ ಮೇಲೆ ಮೂಡಿ ಬರಲಿದೆ. ಅಂದ್ಹಾಗೆ, ಈ ವರ್ಷ ಐದು ಬಯೋಪಿಕ್ ಸಿನಿಮಾಗಳು ರಿಲೀಸ್ ಆಗಲಿದೆ. ಯಾವುದು ಆ ಚಿತ್ರಗಳು? ಮುಂದೆ ಓದಿ...

1983 ವಿಶ್ವಕಪ್

1983 ವಿಶ್ವಕಪ್

ಭಾರತ ಕ್ರಿಕೆಟ್ ತಂಡ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದಿದ್ದು 1983ರಲ್ಲಿ. ಕಪಿಲ್ ದೇವ್ ಸಾರಥ್ಯದ ಟೀಂ ಇಂಡಿಯಾ ಮೊದಲ ವಿಶ್ವಕಪ್‌ಗೆ ಗೆದ್ದು ಬೀಗಿತ್ತು. ಈ ಘಟನೆ ಆಧರಿಸಿ ಬಾಲಿವುಡ್‌ನಲ್ಲಿ '83' ಎಂಬ ಶೀರ್ಷಿಕೆಯಡಿ ಸಿನಿಮಾ ಸಿದ್ಧವಾಗಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲೇ ಸಿನಿಮಾ ರಿಲಿಸ್ ಆಗಬೇಕಿತ್ತು. ಲಾಕ್‌ಡೌನ್ ಕಾರಣ ಆಗಿರಲಿಲ್ಲ. ಈಗ 2021ನೇ ವರ್ಷದಲ್ಲಿ ಪ್ರೇಕ್ಷಕರೆದುರು ಬರಲಿದೆ. ಸದ್ಯಕ್ಕೆ ರಿಲೀಸ್ ದಿನಾಂಕದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ತಮಿಳುನಾಡು ತಲೈವಿ

ತಮಿಳುನಾಡು ತಲೈವಿ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಬಯೋಪಿಕ್ ಸಿದ್ಧವಾಗಿದೆ. ನಟಿ ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಹಿಂದಿ, ತಮಿಳಿನಲ್ಲಿ ಬಿಡುಗಡೆಯಾಗಲಿದೆ. 2020ರ ಜೂನ್ ತಿಂಗಳಲ್ಲಿ ರಿಲೀಸ್ ಆಗಬೇಕಿತ್ತು. ಲಾಕ್‌ಡೌನ್‌ನಿಂದ ಆಗಲಿಲ್ಲ. 2021ರಲ್ಲಿ ತೆರೆಗೆ ಬರಲು ಸಜ್ಜಾಗಿದೆ.

ಪುಟ್‌ಬಾಲ್ ಸಿನಿಮಾ 'ಮೈದಾನ್'

ಪುಟ್‌ಬಾಲ್ ಸಿನಿಮಾ 'ಮೈದಾನ್'

ಅಜಯ್ ದೇವಗನ್ ನಟಿಸಿರುವ ಮೈದಾನ್ ಸಿನಿಮಾ ಅಕ್ಟೋಬರ್ 15, 2021ರಂದು ಬಿಡುಗಡೆಯಾಗಲಿದೆ. ಈ ಚಿತ್ರ ಭಾರತೀಯ ಪುಟ್‌ಬಾಲ್ ತಂಡದ ಕೋಚ್‌ ಆಗಿದ್ದ ಸೈಯದ್ ಅದ್ಬುಲ್ ರಹೀಮ್ ಅವರ ಬಯೋಪಿಕ್ ಆಗಿದೆ.

ಗಂಗುಬಾಯಿ ಕಥಿಯಾವಾಡಿ

ಗಂಗುಬಾಯಿ ಕಥಿಯಾವಾಡಿ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ನಿರೀಕ್ಷೆಯ ಚಿತ್ರ ಗಂಗುಬಾಯಿ ಕಥಿಯಾವಾಡಿ. ಹುಸೇನ್ ಜೈದಿ ರಚಿಸಿರುವ ''ಮಾಫಿಯಾ ಕ್ವೀನ್ಸ್ ಆಫ್ ಮುಂಬೈ'' ಪುಸ್ತಕ ಆಧರಿಸಿ ತಯಾರಾಗುತ್ತಿರುವ ಈ ಚಿತ್ರ ಕಾಮಾಟಿಪುರ ವೇಶ್ಯಾಗೃಹದ ಗಂಗುಬಾಯಿ ಕಥಿಯಾವಾಡಿ ಎಂಬಾಕೆ ಕುರಿತಾಗಿದೆ. ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ಪೃಥ್ವಿರಾಜ್' ಸಿನಿಮಾ

'ಪೃಥ್ವಿರಾಜ್' ಸಿನಿಮಾ

ಅಕ್ಷಯ್ ಕುಮಾರ್ ನಟಿಸಿರುವ 'ಪೃಥ್ವಿರಾಜ್' ಸಿನಿಮಾ ಈ ವರ್ಷ ನಿರೀಕ್ಷೆಯ ಬಯೋಪಿಕ್ ಚಿತ್ರವಾಗಿದೆ. ಮಾನುಷಿ ಚಿಲ್ಲರ್, ಸಂಜಯ್ ದತ್, ಸೋನು ಸೂದ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಪೃಥ್ವಿರಾಜ್ ಚೌಹಣ್ ಜೀವನ ಆಧರಿಸಿದ ಸಿನಿಮಾ ಆಗಿದೆ.

Recommended Video

ಸಲ್ಮಾನ್ ಖಾನ್ ಗೆ ಇದೆಲ್ಲಾ ಬೇಕಿತ್ತಾ..? | Bigg Boss 14 | Salman Khan

More from Filmibeat

English summary
Ranvir singh 83, Prithviraj, Gangubai Kathiawadi, Maidaan and Thalaivi 5 Biopic Movie set to Release in 2021.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X