ಶಾರುಖ್ ಖಾನ್ ನಟನೆಯ ಜವಾನ್ ಬಗ್ಗೆ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅಚ್ಚರಿಯ ಮಾಹಿತಿ!

ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ಜವಾನ್ ಗಲ್ಲಾಪೆಟ್ಟಿಗೆಯಲ್ಲಿ ತನ್ನ ನಾಗಾಲೋಟ ಮುಂದುವರಿಸುತ್ತಲೇ ಇದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರಶಂಸೆ ಪಡೆದ ಸಿನಿಮಾ ಮೂರೇ ಮೂರು ದಿನಕ್ಕೆ 300 ಕೋಟಿ ರೂಪಾಯಿ ಕ್ಲಬ್ ಸೇರಿಕೊಂಡಿದೆ. ತಮಿಳು ನಿರ್ದೇಶಕ ಅಟ್ಲಿ ಮ್ಯಾಜಿಕ್ ಬಾಲಿವುಡ್‌ನಲ್ಲಿ ಸಕತ್ ಆಗಿ ವರ್ಕ್ ಆಗಿದೆ.

ಸಿನಿಮಾಗೆ ಎಲ್ಲಾ ಚಿತ್ರರಂಗದ ಸಿನಿಮಾ ತಾರೆಯರು ಶುಭ ಹಾರೈಸುವ ಜೊತೆಗೆ ಜವಾನ್ ನೊಡಿ ತಮ್ಮ ವಿಮರ್ಶೆಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಇದರ ಜೊತೆಗೆ ಕ್ರಿಕೆಟಿಗರು ಜವಾನ್ ಸಿನಿಮಾಗೆ ಫಿದಾ ಆಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಜವಾನ್ ಬಗ್ಗೆ ಅಚ್ಚರಿಯ ಮಾಹಿತಿ ಹೊರಹಾಕಿದ್ದಾರೆ.

shah-rukh-khan-and-atlee

ಜವಾನ್ ಬಗ್ಗೆ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅಚ್ಚರಿಯ ಮಾಹಿತಿ!

ಶಾರುಖ್ ಖಾನ್ ಅವರ ಐಪಿಎಲ್ ತಂಡ, ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ ಕ್ರಿಕೆಟಿಗ ದಿನೇಶ್ ಕಾರ್ತಿಕ್, ಜವಾನ್ ಸಿನಿಮಾ ಬಗ್ಗೆ ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಜವಾನ್ ಪ್ರಾರಂಭಕ್ಕೆ ಕಾರಣವಾದ ಚರ್ಚೆ ಬಗ್ಗೆ ದಿನೇಶ್ ಕಾರ್ತಿಕ್ (ಡಿಕೆ) ಆಸಕ್ತಿದಾಯಕ ವಿಷಯ ತಿಳಿಸಿದ್ದಾರೆ.

ಅಟ್ಲಿ ಮತ್ತು ಶಾರುಖ್ ಖಾನ್ ಜವಾನ್ ಕುರಿತು 2018 ರಲ್ಲಿ ಮಾತುಕತೆಯನ್ನು ಪ್ರಾರಂಭಿಸಿದರು ಎಂದು ದಿನೇಶ್ ಕಾರ್ತಿಕ್ ಬಹಿರಂಗಪಡಿಸಿದ್ದಾರೆ. ಎಸ್ ಈ ಬ್ಲಾಕ್‌ಬಸ್ಟರ್ ಸಿನಿಮಾ ಬಗ್ಗೆ ಐದು ವರ್ಷಗಳ ಹಿಂದೆಯೇ ಮಾತುಕತೆ ಆರಂಭವಾಗಿತ್ತು ಎಂದು ಡಿಕೆ ಟ್ವೀಟ್ ಮಾಡಿದ್ದಾರೆ.

ಜವಾನ್ ಸಿನಿಮಾ ನೋಡಿದ ಬಳಿಕ ವಿಸ್ಕೃತವಾಗಿ ಟ್ವೀಟ್ ಮಾಡಿರುವ ಅವರು, ಚಿತ್ರದಲ್ಲಿ ಇಷ್ಟು ಅತ್ಯುತ್ತಮ ಕೆಲಸ ಮಾಡಿ, ಮನರಂಜನೆ ನೀಡಿರುವುದಕ್ಕೆ ನಿರ್ದೇಶಕ ಅಟ್ಲಿ ಮತ್ತು ಶಾರುಖ್ ಖಾನ್ ಅವರನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಐದು ವರ್ಷಗಳ ಹಿಂದೆ 2018 ರಲ್ಲಿ ನಡೆದ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಚಿತ್ರದ ಚರ್ಚೆಗಳು ಮೊದಲ ಬಾರಿಗೆ ಪ್ರಾರಂಭವಾದವು ಎಂಬ ಕುತೂಹಲಕಾರಿ ಅಂಶವನ್ನು ಬಹಿರಂಗಪಡಿಸಿದ್ದಾರೆ. ಚಿತ್ರಕ್ಕಾಗಿ ಮಾಡಿದ ಹಲವು ಪ್ರಯತ್ನಗಳನ್ನು ಡಿಕೆ ಬರೆದುಕೊಂಡಿದ್ದಾರೆ.

"ಜವಾನ್ ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಲಿದೆ ಎಂದು ನನಗೆ ಖಾತ್ರಿಯಿದೆ. ಅಟ್ಲಿ ಸರ್ ಅವರು ಎಸ್‌ಆರ್‌ಕೆ ಅವರನ್ನು ಹಲವು ಅವತಾರಗಳಲ್ಲಿ ತರಲು ಎಂತಹ ಅದ್ಭುತ ಪ್ರಯತ್ನ ಮಾಡಿದ್ದಾರ. ನನ್ನ ಮೆಚ್ಚಿನ ವಿಕ್ರಮ್ ರಾಥೋಡ್, ಶೈಲಿ ಮತ್ತು ವರ್ಚಸ್ಸನ್ನು ಈ ಹಿಂದೆ ಯಾರೂ ನೋಡಿಲ್ಲ.

shah-rukh-khan-and-atlee

2018 ರಲ್ಲಿ ನಾನು ಕೋಲ್ಕತ್ತಾ ನೈಟ್ ರೈಡರ್ಸ್ ನೊಂದಿಗೆ ಇದ್ದಾಗ, ಅಟ್ಲಿ ಅವರು ಎಸ್‌ಆರ್ಕೆಯೊಂದಿಗೆ ಮಾತುಕತೆಯನ್ನು ಪ್ರಾರಂಭಿಸಿದ್ದರು. ಚೆನ್ನೈನಲ್ಲಿ ನಡೆಯುತ್ತಿದ್ದ CSK vs KKR ಪಂದ್ಯದಲ್ಲಿ ಇದು ನಡೆದಿತ್ತು. ಇದು 5 ದೀರ್ಘ ವರ್ಷಗಳ ನಂತರ ಹಲವಾರು ಚರ್ಚೆಗಳು, ಹಲವಾರು ಸಣ್ಣ ಸ್ಕ್ರಿಪ್ಟ್ ಟ್ವೀಕ್‌ಗಳ ನಂತರ ಸಿನಿಮಾವಾಗಿದೆ" ಎಂದು ಹೇಳಿದ್ದಾರೆ.

ದಿನೇಶ್ ಕಾರ್ತಿಕ್ ಜವಾನ್‌ನ ಉಳಿದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಮನಸಾರೆ ಹೊಗಳಿದರು. "ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರೆಡ್ ಚಿಲ್ಲಿಸ್ ಸಿಇಒ ವೆಂಕಿ ಸರ್ ಅವರಿಗೆ ಅಭಿನಂದನೆಗಳು. ಇಡೀ ಜವಾನ್ ತಂಡಕ್ಕೆ ಅಭಿನಂದನೆಗಳು! ನಯನತಾರಾ ಮತ್ತು ವಿಜಯ್ ಸೇತುಪತಿ ನೀವು ಪ್ಯಾನ್ ಇಂಡಿಯಾ ಹೀರೋಗಳು. ಅನಿರುದ್ಧ್ ರವುಚಂದರ್ ಇಂದಿನ ರಾಕ್‌ಸ್ಟಾರ್ ನೀವು. ಪ್ರತಿ ಚಲನಚಿತ್ರದೊಂದಿಗೆ ನೀವು ಮತ್ತಷ್ಟು ಎತ್ತರಕ್ಕೆ ಹೋಗುತ್ತಿರುವಿರಿ ಸಹೋದರ" ಎಂದು ತಂಡದ ಪ್ರಯತ್ನವನ್ನು ಮೆಚ್ಚಿದ್ದಾರೆ.

More from Filmibeat

English summary
Discussions on Jawan between Shah Rukh Khan and Atlee started at a cricket match.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X